ತಾಜಾ ಸುದ್ದಿಗಳು

 • ಬೃಹತ್ ಗಾತ್ರ ಮೊಸಳೆ ಪತ್ತೆ..!

  ರಾಯಚೂರು, ಡಿ. 6 : ನಾರಾಯಣಪುರದ ಬಸವಸಾಗರ ಜಲಾಶಯದ ಹಿನ್ನೀರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದೆ. ಜಲಾಶಯದ ಹಿನ್ನೀರಿನಲ್ಲಿರುವ ನವಲಿಯ ಜಡೇಲಿಂಗೇಶ್ವರ ದೇವಸ್ಥಾನದ ಬಳಿ ಮೊಸಳೆ ಪ್ರತ್ಯಕ್ಷವಾಗಿ ಭಕ್ತರಲ್ಲಿ ಆತಂಕ ಮೂಡಿತು. ನವಲಿ ಗ್ರಾಮವು ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಹಲವು ದಿನಗಳಿಂದ ಮೊಸಳೆ ಹಿನ್ನೀರಿನಲ್ಲಿ ಕಾಣಿಸಿಕೊಳ್ಳುತ್ತಿದೆ. ದೇವಾಲಯಕ್ಕೆ ಪ್ರತಿ ದಿನ ಹಲವು ಮಂದಿ ಭಕ್ತರು ಆಗಮಿಸುತ್ತಾರೆ. ಪದೇ ಪದೆ ಮೊಸಳೆ ಕಾಣಿಸಿಕೊಳ್ಳುತ್ತಿರುವುದರಿಂದ ಭೀತಿ ಎದುರಾಗಿದೆ.

  READ MORE
 • ಡ್ಯಾನ್ಸ್ ನಿಲ್ಲಿಸಿದ ಮಹಿಳೆಗೆ ಗುಂಡು

  ಲಕ್ನೋ, ಡಿ. 6 : ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಮಹಿಳೆ ಡ್ಯಾನ್ಸ್ ಮಾಡಿ ನಿಲ್ಲಿಸಿದ ತಕ್ಷಣ ಗುಂಡು ಹಾರಿಸುತ್ತೇನೆ ಎಂದು ಹೇಳಿದ್ದಾನೆ. ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಿದ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಚಿತ್ರಕೂಟ್ನಲ್ಲಿ ನಡದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ಆರೋಪಿ ಜೊತೆ ಮತ್ತೊಬ್ಬ ವ್ಯಕ್ತಿ, ಅಣ್ಣ ನೀನು ಈಗ ಗುಂಡು ಹಾರಿಸಲೇ ಬೇಕು ಎಂದು ಹೇಳಿದ್ದಾನೆ. ಮಹಿಳೆ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಳು. ಗ್ರಾಮದ ಮುಖ್ಯಸ್ಥರ ಕುಟುಂಬದ ಸದಸ್ಯರೊಬ್ಬರು ಮಹಿಳೆಗೆ

  READ MORE
 • ಅಭಿನಂದನೆ ತಿಳಿಸಿದ ಮಾಯಾವತಿ

  ಲಕ್ನೋ, ಡಿ. 6 : ಹೈದರಾಬಾದಿನ ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ಎನ್ ಕೌಂಟರ್ ಬಗ್ಗೆ ಬಹುಜನ್ ಸಮಾಜ್ ಪಕ್ಷ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಪ್ರತಿಕ್ರಿಯಿಸಿ, ದೆಹಲಿ, ಉತ್ತರ ಪ್ರದೇಶ ಪೊಲೀಸರು ಹೈದರಾಬಾದ್ ಪೊಲೀಸರನ್ನು ಪ್ರೇರಣೆಯಾಗಿ ಸ್ವೀಕರಿಸಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿ, ಮಾಯಾವತಿ ಹೈದರಾಬಾದ್ ಪೊಲೀಸರಿಗೆ ಅಭಿನಂದನೆ ತಿಳಿಸಿದರು. ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗೆ ಸಾಕಷ್ಟು ಒತ್ತು ಕೊಟ್ಟಿಲ್ಲವೆಂದು ಯೋಗಿ ಸರ್ಕಾರದ ವಿರುದ್ಧ ಕಿಡಿಕಾರಿದರು.

  READ MORE
 • ಒಂಟಿ ಸಲಗ ಮೃತ

  ಚಿಕ್ಕಮಗಳೂರು, ಡಿ. 5 : ಜಿಲ್ಲೆಯ ಕಡೂರು ತಾಲೂಕಿನಲ್ಲಿ ವಿದ್ಯುತ್ ತಗುಲಿ ಒಂಟಿ ಸಲಗ ಮೃತಪಟ್ಟಿರುವ ಘಟನೆ ನಡೆದಿದೆ. ಕಡೂರು ತಾಲೂಕು ಹಳೆಸಿದ್ಧರಹಳ್ಳಿಯಲ್ಲಿ ಈ ದುರಂತ ಸಂಭವಿಸಿದ್ದು, 20 ರಿಂದ 25 ವರ್ಷದ ಕಾಡಾನೆ ಸಾವನ್ನಪ್ಪಿದೆ. ಹಸಿವಿನಿಂದ ಗ್ರಾಮದ ಕಡೆಗೆ ಬಂದ ಆನೆ ಜೋಳದ ಗದ್ದೆಗೆ ನುಗ್ಗಲು ಯತ್ನಿಸಿದಾಗ ಅಲ್ಲಿ ಫೆನ್ಸಿಗೆ ಅಳವಡಿಸಿದ್ದ ವಿದ್ಯುತ್ ಪ್ರವಹಿಸಿ ಆನೆ ಮೃತಪಟ್ಟಿದೆ. ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಗೆ ಸುದ್ದಿ ತಿಳಿಸಿದ್ದಾರೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

  READ MORE
 • ಅನರ್ಹ ಶಾಸಕ ಎಂಟಿಬಿ ನಾಗರಾಜ್ ದುಬಾರಿ ಕಾರು ಖರೀದಿ

  ಬೆಂಗಳೂರು, ಆ.14: ಹೊಸಕೋಟೆ ಕ್ಷೇತ್ರದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ. ಅತೀ ಹೆಚ್ಚು ದುಬಾರಿ ಕಾರನ್ನು ಖರೀದಿ ಮಾಡಿರುವ ಅವರು ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಆಗಮಿಸಿದರು. ಬುಧವಾರ ಎಂಟಿಬಿ ನಾಗರಾಜ್ ರೋಲ್ಸ್ ರಾಯ್ಸ್ ಪ್ಯಾಂಟಮ್ ಕಾರನ್ನು ಖರೀದಿಸಿದ್ದಾರೆ. ಹೊಸ ಕಾರಿನ ಪೂಜೆ ನಗರದಲ್ಲಿ ನಡೆದಿದ್ದು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಲು ಅವರು ಹೊಸ ಕಾರಿನಲ್ಲಿ ಬಂದರು. ದುಬೈನಲ್ಲಿ ವಿಶೇಷವಾಗಿ ಸಿದ್ಧಪಡಿಸಿದ ಕಾರನ್ನು ಬೆಂಗಳೂರಿಗೆ ತರಲಾಗಿದೆ. ಈ ಕಾರಿನ ಮೌಲ್ಯ ಸುಮಾರು 12

  READ MORE
 • ಗಂಭೀರ್ ದಾಖಲೆ ಮುರಿದ ಗಿಲ್

  ಟರೌಬ, ಆ.10: ಪ್ರತಿಭಾನ್ವಿತ ಬ್ಯಾಟ್ಸ್ಮನ್ ಶುಭ್ ಮನ್ ಗಿಲ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿದ ಭಾರತದ ಅತಿಕಿರಿಯ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಮಾಜಿ ಎಡಗೈ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದ್ದಾರೆ. ವೆಸ್ಟ್ಇಂಡೀಸ್ ‘ಎ’ ವಿರುದ್ಧ ಇಲ್ಲಿ ನಡೆದ 3ನೇ ಅನಧಿಕೃತ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ 19 ವರ್ಷದ ಗಿಲ್ 250 ಎಸೆತಗಳಲ್ಲಿ ಅಜೇಯ 204 ರನ್ ಸಿಡಿಸಿದರು. 2002ರಲ್ಲಿ 20 ವರ್ಷದ ಗೌತಮ್ ಗಂಭೀರ್, ಜಿಂಬಾಬ್ವೆ ವಿರುದ್ಧ ಬಿಸಿಸಿಐ

  READ MORE
 • ‘ವನ್ಯಜೀವಿ’ ಫೋಟೋ ಸ್ಪರ್ಧೆ

  ಬೆಂಗಳೂರು, ಆ.08 : ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಆ.19, ರಂದು “ಭಾರತದ ವನ್ಯಜೀವಿ” ಫೋಟೋ ಸ್ಪರ್ಧೆ ಮತ್ತು ಪ್ರದರ್ಶನ ಮೂಲದ ಅಡ್ವೆಂಚರ್ ಮತ್ತು ವೈಲ್ಡ್ ಲೈಫ್ ಎಂಬ ದ್ವಿ-ಮಾಸಿಕ ಪತ್ರಿಕೆ ಛಾಯಾಗ್ರಹಣ ಸ್ಪರ್ಧೆಯನ್ನು ನಡೆಸುತ್ತಿದೆ. ವಿಶ್ವ ಛಾಯಾಗ್ರಹಣ ದಿನದಂದು ಛಾಯಾಗ್ರಹಣ ಸ್ಪರ್ಧೆ ಮತ್ತು ಪ್ರದರ್ಶನ, ಹಾಗೂ ಛಾಯಾಗ್ರಹಣದ ಪ್ರಮುಖ ಥೀಮ್ ‘ಭಾರತದ ವನ್ಯಜೀವಿ’ ಸ್ಪರ್ಧೇಯ. ಮೂಲಕ ಹಕ್ಕುಸ್ವಾಮ್ಯಕ್ಕೆ ಒಳಪಟ್ಟ ಉಚಿತ ಛಾಚಿತ್ರಗಳನ್ನು ಸ್ಪರ್ಧೆಗೆ ಸಲ್ಲಿಸಬಹುದಾಗಿದ್ದು, ಆಯ್ದ ಛಾಯಾಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಹಾಗೂ ರಂಗೋಲಿ-ಮೆಟ್ರೋ ಕಲಾ ಕೇಂದ್ರದಲ್ಲಿ

  READ MORE

ತಾಜಾ ಸುದ್ದಿಗಳು

ಕ್ರೀಡೆ

ಚಲನಚಿತ್ರ

ಹಣಕಾಸು