ಹಳ್ಳಿ ಹುಡುಗನಾಗಿ ಡಾಲಿ

ಹಳ್ಳಿ ಹುಡುಗನಾಗಿ ಡಾಲಿ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನಟ ಡಾಲಿ ಧನಂಜಯ್ ಅವರು ಇತ್ತೀಚಿಗೆ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.

ಯಸ್… ಸ್ಯಾಂಡಲ್ ವುಡ್ ನಲ್ಲಿ ನಟ ಡಾಲಿ ಧನಂಜಯ್ ಅವರು ಇತ್ತೀಚೆಗೆ ಎರಡು ಸಿನಿಮಾಗಳಲ್ಲಿ ನಘಟನೆ ಮಾಡುವುದರ ಜೊತೆಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಡಾಲಿ ಧನಂಜಯ್ ಈ ‘ಅಣ್ಣ ಫ್ರಂ ಮೆಕ್ಸಿಕೊ’ದ ಚಿತ್ರದಲ್ಲಿ ಹಳ್ಳಿ ರಗಡ್ ಲುಕ್ಕಿನಲ್ಲಿ ಮಿಂಚಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

ಸದ್ಯ ಧನಂಜಯ್ 2 ಪ್ರಮುಖ ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಒಂದೆಡೆ, ರೋಹಿತ್ ಪದಕಿ ನಿರ್ದೇಶನದ ಉತ್ತರಕಾಂಡ ಮತ್ತು ಶಂಕರ್ ಗುರು ನಿರ್ದೇಶನದ ‘ಅಣ್ಣ ಫ್ರಂ ಮೆಕ್ಸಿಕೊ’ದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಚಿತ್ರವು ಸದ್ದಿಲ್ಲದೆ ಸೆಟ್ಟೇರಿದ್ದು, ವಿನೋದ್ ಅವರು ಫೈಟ್ ಸೀಕ್ವೆನ್ಸ್‌ಗಳ ಸಂಯೋಜನೆ ಮಾಡುತ್ತಿದ್ದಾರೆ. ಸದ್ಯ ಚಿತ್ರದ ನಿರ್ಣಾಯಕ ಫೈಟ್ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದ್ದು, ಅದರ ನಂತರ ಟಾಕಿ ಭಾಗಗಳು ಮೇ 13 ರಿಂದ ಪ್ರಾರಂಭವಾಗಲಿವೆ ಎಂದು ನಿರ್ದೇಶಕ ಶಂಕರ್ ಗುರು ಹೇಳುತ್ತಾರೆ.

ಯೋಜನೆಯ ಘೋಷಣೆಯ ಸಂದರ್ಭದಲ್ಲಿ ಅನಾವರಣಗೊಂಡ ಮೋಷನ್ ಪೋಸ್ಟರ್, ಕರ್ನಾಟಕ ಧ್ವಜವನ್ನು ಲಾಕೆಟ್ ಆಗಿ ಹೊಂದಿದ್ದ ಚಿನ್ನದ ಸರ ಧರಿಸಿರುವ ಧನಂಜಯ್ ಅವರನ್ನು ತೋರಿಸಿತ್ತು. ಇದೀಗ ನಟನ ಇತ್ತೀಚಿನ ಆನ್-ಸೆಟ್ ಫೋಟೊ ಬಿಡುಗಡೆಯಾಗಿದ್ದು, ಬಿಳಿ ಅಂಗಿ ಮತ್ತು ಧೋತಿಯನ್ನು ಧರಿಸಿ ಗ್ರಾಮೀಣ ಭಾಗದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರ ಪಾತ್ರಕ್ಕೆ ತಾಜಾತನವನ್ನು ಸೇರಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos