ಮಂಡ್ಯ: ಪ್ರಜ್ವಲ್ ರೇವಣ್ಣ ಅವರ ಪೆಂಡಲ್ ಪ್ರಕರಣ ಈಗ ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಹೊಸ ತಿರುಗುಗಳನ್ನು ಪಡೆಯುತ್ತಿದ್ದು, ಈ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಎಂದು ಬಿಜೆಪಿಯ ಮುಖಂಡ ದೇವರಾಜಗೌಡ ಅವರು ಆರೋಪಿಸಿದ್ದಾರೆ.
ಇನ್ನು ಕಾಂಗ್ರೆಸ್ನ ಶಾಸಕ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಶಾಸಕನ ಕೈವಾಡವಿದೆ ಎಂಬ ಹೇಳಿಕೆಯನ್ನು ಹೇಳುವ ಮೂಲಕ ಮತ್ತೆ ಪ್ರಜ್ವಲ್ ಪ್ರಕರಣದಲ್ಲಿ ಮತ್ತಷ್ಟು ಕುತೂಹಲವನ್ನು ಕೆರಳಿಸಿದ್ದಾರೆ.
ಯೆಸ್.. ರಾಜ್ಯ ಮಟ್ಟದಲ್ಲಿ ಬಿಜೆಪಿಯ ಅತ್ಯುತ್ತಮ ಸ್ಥಾನದಲ್ಲಿ ಕುಳಿತಿರುವ ನಾಯಕ, ಹಾಸನದ ಮಾಜಿ ಶಾಸಕನ ಕೈವಾಡ ಇದೆ ಎಂದು ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಹೊಸ ಬಾಂಬ್ ಸಿಡಿಸಿದ್ದಾರೆ. ಪೆನ್ಡ್ರೈವ್ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರ ಕೈವಾಡ ಎಂಬ ಆರೋಪದ ವಿಚಾರವಾಗಿ ಮಂಡ್ಯದಲ್ಲಿ ಮಾತನಾಡಿದ ಅವರು, ‘ಡಿಕೆಶಿ ಮಾಡ್ಸಿದ್ದಾರೆ ಎನ್ನುವುದರ ಕುರಿತು ದಾಖಲೆ ಕೊಡಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ದೇಶದ ಜನ ಬದಲಾವಣೆ ಬಯಸುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ
ಶಿವರಾಮೇಗೌಡರನ್ನ ಕಳುಹಿಸಿ ಯಾಕೆ ಷಡ್ಯಂತ್ರ ಹೂಡಿರಬಾರದು?
ಅವರ ಹತ್ತಿರ ಸಾವಿರಾರು ಜನ ಬರ್ತಾರೆ, ಶಿವಕುಮಾರ್ ಭೇಟಿ ಮಾಡಲು ದೇವರಾಜೇಗೌಡ, ಬಿಜೆಪಿಯ ಮಾಜಿ ಶಾಸಕ ಇವರೇ ಯಾಕೆ ಷಡ್ಯಂತ್ರ ಹೂಡಿರಬಾರದು? ಎಂದು ಪ್ರಶ್ನಿಸಿದ್ದಾರೆ. ಪ್ರಜ್ವಲ್ ರೇವಣ್ಣ ಸ್ಟೇ ತಂದಾಗ ಇದೇ ದೇವರಾಜೇಗೌಡ ಹಾಸನದಲ್ಲಿ ನಿನ್ನ ಸ್ಟೇ ವೆಕಾಟ್ ಇದೆ, ಎಲ್ಲವನ್ನ ಬಿಡ್ತಿನಿ ಎಂದು ಹೇಳಿದ್ದಾರೆ. ಒಂದು ತಿಂಗಳ ದೇವರಾಜೇಗೌಡ ಸ್ಟೇಟ್ಮೇಂಟ್ ನೋಡಿ. ಇದರಲ್ಲಿ ಕೈವಾಡವಿರುವ ಮಾಜಿ ಶಾಸಕನೇ ಕೋಟ್ಯಾಂತರ ರೂ. ಹೂಡಿಕೆ ಮಾಡಿ ಪೆನ್ ಡ್ರೈ ಹಂಚಿದ್ದಾರೆ. ರೇವಣ್ಣ ಕುಟುಂಬದ ಜೊತೆ ರಾಜಕೀಯ ವಿರೋಧಿ ಇದ್ದಾರೆ, ಅವರೇ ಷಡ್ಯಂತ್ರ ಮಾಡಿರೋದು. ಇವಾಗ ಡಿಕೆ ಶಿವಕುಮಾರ್ ಮೇಲೆ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.