ಮದುವೆಯಿಂದಾದ ಬೇಸರ ‘ಅನೈತಿಕ ಸಂಬಂಧ’ಕ್ಕೆ ಕಾರಣವಂತೆ..!

ಮದುವೆಯಿಂದಾದ ಬೇಸರ ‘ಅನೈತಿಕ ಸಂಬಂಧ’ಕ್ಕೆ ಕಾರಣವಂತೆ..!

ಬೆಂಗಳೂರು, ಏ. 25, ನ್ಯೂಸ್ ಎಕ್ಸ್ ಪ್ರೆಸ್: ಸುಮಾರು ಶೇಕಡಾ 77ರಷ್ಟು ಮಹಿಳೆಯರು ಪತಿಗೆ ಮೋಸ ಮಾಡಲು ಮದುವೆ ಬೇಸರ ತಂದಿದ್ದು ಕಾರಣ ಎಂದಿದ್ದಾರೆ. ಸಂಸಾರದಲ್ಲಿ ಬೇಸರ ಬಂದಿತ್ತು. ಹೊಸ ಸಂಗಾತಿಯನ್ನು ಮನಸ್ಸು ಬಯಸುತ್ತಿತ್ತು. ಬದಲಾವಣೆಗಾಗಿ ಪತಿಗೆ ಮೋಸ ಮಾಡಿದ್ದೇವೆ ಎಂದಿದ್ದಾರೆ. ಸಮೀಕ್ಷೆ ಪ್ರಕಾರ ಒತ್ತಾಯದ ಮೂಲಕ ಮದುವೆಯಾದ ಸಲಿಂಗಕಾಮಿಗಳು ಈಗ ತಮ್ಮಿಷ್ಟದಂತೆ ಜೀವನ ಸಾಗಿಸಲು ಸಂಗಾತಿಗೆ ಮೋಸ ಮಾಡ್ತಿದ್ದಾರಂತೆ. ವಿವಾಹೇತರ ಡೇಟಿಂಗ್ ಆಪ್ ಗ್ಲೀಡನ್ ಕೆಲ ಭಾರತೀಯ ಮಹಿಳೆಯರು ಪತಿಗೆ ಏಕೆ ಮೋಸ ಮಾಡ್ತಾರೆ ಎಂಬುದನ್ನು ಹೇಳಿದೆ. ಅದ್ರ ಪ್ರಕಾರ ಭಾರತದ ಶೇಕಡಾ 10ರಷ್ಟು ಮಹಿಳೆಯರು ಪತಿಗೆ ಮೋಸ ಮಾಡಲು ಕಾರಣ ಮನೆ ಕೆಲಸ. ಮನೆ ಕೆಲಸದಲ್ಲಿ ಪತಿ ನೆರವಾಗುವುದಿಲ್ಲ ಎನ್ನುವ ಕಾರಣಕ್ಕೆ ಪತಿಗೆ ಮೋಸ ಮಾಡ್ತಾರಂತೆ. ಭಾರತದ ಸುಮಾರು ಐದು ಲಕ್ಷ ಜನರು ಗ್ಲೀಡನ್ ಆಪ್ ಬಳಕೆ ಮಾಡ್ತಾರೆ. ಮಹಿಳೆಯರು ಏಕೆ ವ್ಯಭಿಚಾರ ಮಾಡ್ತಾರೆ ಎಂಬ ಪ್ರಶ್ನೆಗೆ ಸಮೀಕ್ಷೆಯಲ್ಲಿ ಉತ್ತರ ಹುಡುಕುವ ಪ್ರಯತ್ನ ನಡೆದಿದೆ. ಬೆಂಗಳೂರು, ಮುಂಬೈ, ಕೋಲ್ಕತ್ತಾದಂತಹ ಮಹಾನಗರಗಳಲ್ಲಿ ಪತಿಗೆ ಮೋಸ ಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಿದೆಯಂತೆ. ಶೇಕಡಾ 10ರಲ್ಲಿ ನಾಲ್ಕು ಮಂದಿ ವಿಚಿತ್ರ ಉತ್ತರ ನೀಡಿದ್ದಾರೆ. ಅಪರಿಚಿತರ ಜೊತೆ ಮೋಜು, ಮಸ್ತಿ ಮಾಡಿದ ನಂತ್ರ ಸಂಗಾತಿ ಜೊತೆ ಸಂಬಂಧ ಗಟ್ಟಿಯಾಗಿದೆ ಎಂದಿದ್ದಾರೆ. ಗ್ಲೀಡನ್ ಬಳಕೆ ಮಾಡ್ತಿರುವ ಶೇಕಡಾ 20ರಷ್ಟು ಪುರುಷರು ಹಾಗೂ ಶೇಕಡಾ 13ರಷ್ಟು ಮಹಿಳೆಯರು ಸಂಗಾತಿಗೆ ಮೋಸ ಮಾಡುವುದನ್ನು ಒಪ್ಪಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos