ಹನೂರು: ನೂತನ ತಾಲ್ಲೂಕಿನಲ್ಲಿ ನೂತನವಾಗಿ ಆರಂಭವಾದ ಮತ ಎಣಿಕೆಯು ಹಲವಾರು ವಿದ್ಯಮಾನಗಳ ನಡುವೆ ಕೆಲವರ ಮತ ಭವಿಷ್ಯ ಪ್ರಜ್ವಲಿಸಿದರೆ ಮತ್ತೆ ಕೆಲವರದು ಮಿಂಚಿನ ಕಳೆ ಕಮರಿ ಹೋಗಿತ್ತು.
ಹಾಗೆಯೇ ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯತಿಯು ಅತಿ ದೊಡ್ಡ ಪಂಚಾಯತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದಾಗ್ಯೂ ವಿಶೇಷವೆನೆಂದರೆ ರಾಮಲಿಂಗಮ್ ಎಂಬುವವರು ತಾನು ಪಾಠ ಕಲಿತ ಗುರುಗಳಾದ ಸಿಂಗರಾಯರ ವಿರುದ್ಧ ಸುಮಾರು ನೂರೊಂದು ಮತಗಳನ್ನು ಅಧಿಕವಾಗಿ ಪಡೆಯುವ ಮೂಲಕ ಹ್ಯಾಟ್ರಿಕ್ ಗೆಲುವು ಸಾದಿಸಿದ್ದಾರೆ.
ಅಲ್ಲದೆ ಅವರ ಕುಟುಂಬದವರೆ ಆದ ಅತ್ತಿಗೆ ಬೊದಮ್ಮ, ಪತ್ನಿ ನದಿಯಾ, ಇನ್ನೊಬ್ಬ ಅತ್ತಿಗೆ ಕುಪ್ಪಾಯ್ ಎಂಬುವರ ಗೆಲವು ಸಾದಿಸಿದ್ದಾರೆ, ರಾಮಲಿಂಗಮ್ ಎಂಬುವವರು ಶಾಸಕ ನರೇಂದ್ರ ರಾಜೂಗೌಡರ ಕೆಲವೇ ಕೆಲವು ಶಿಷ್ಯ ರಲ್ಲಿ ಒಬ್ಬರಾಗಿದ್ದು ರಾಜಕೀಯ ಚಾಣಕ್ಷತನದಲ್ಲಿ ನಿಪುಣರಾಗಿದ್ದಾರೆ ಎನ್ನಬಹುದು