ರಶೀದ್ ಖಾನ್ ಕಕ್ಕಾಬಿಕ್ಕಿ

ಆಸ್ಟ್ರೇಲಿಯಾ,ಡಿ. 30 : ಆಫ್ಘಾನ್ ಸ್ಪಿನ್ನರ್ ರಶೀದ್ ಕಕ್ಕಾಬಿಕ್ಕಿಯಾದ ಘಟನೆ ಸೋಮವಾರ ನಡೆದಿದೆ.
ಮೆಲ್ಬರ್ನ್ ರೆನೆಗೇಡ್ಸ್,ಅಡಿಲೇಡ್ ಸ್ಟ್ರೈಕರ್ಸ್ ನಡುವಿನ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ತಂಡದ ಪರ ಆಡುತ್ತಿರುವ ರಶೀದ್ ಖಾನ್ 17ನೇ ಓವರ್ನಲ್ಲಿ ಅಂಪೈಯರ್ಗೆ ಎಲ್ಬಿ ಮನವಿ ಮಾಡ್ತಾರೆ. ಆದರೆ, ಅಂಪೈಯರ್ ಗ್ರೇಗ್ ಡೇವಿಡ್ಸನ್ ಕೈ ಮೇಲೆ ಎತ್ತಿ ತಮ್ಮ ಮೂಗು ಉಜ್ಜಿಕೊಂಡರು. ಇದರಿಂದ ಸ್ಟ್ರೈಕರ್ಸ್ ತಂಡದ ಆಟಗಾರರು ಗೊಂದಲಕ್ಕೀಡಾದರು.
ಇದಕ್ಕೂ ಮುನ್ನ ಅಡಿಲೇಡ್ ಸ್ಟ್ರೈಕರ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 155 ರನ್ ಕೆಲಹಾಕಿತ್ತು. ಈ ಮೊತ್ತವನ್ನು ಬೆನ್ನಟ್ಟಿದ್ದ ಮೆಲ್ಬರ್ನ್ ರೆನೆಗೇಡ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಕಲೆಹಾಕುವಲ್ಲಿ ಸಶಕ್ತವಾಯಿತು. ಈ ಮೂಲಕ ಅಡಿಲೇಡ್ ಸ್ಟ್ರೈಕರ್ಸ್ 18 ರನ್ಗಳಿಂದ ಗೆಲುವು ಸಾಧಿಸಿತ್ತು. ಇನ್ನು ಅಡಿಲೇಟ್ ಸೈಕರ್ಸ್ ಪರ 4 ಓವರ್ಗಳಲ್ಲಿ 15 ರನ್ ನೀಡಿ 2 ವಿಕೆಟ್ ಪಡೆದಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos