ಯಾವ ಮನುಷ್ಯ ಫಿಟ್​​​ ಆಗಿರುತ್ತಾನೋ ಅವರು ದೇಶದಲ್ಲಿ ಸ್ಟ್ರೀಟ್​​​ ಆಗಿರುತ್ತಾನೆ: ಶಿವಣ್ಣ

ಯಾವ ಮನುಷ್ಯ ಫಿಟ್​​​ ಆಗಿರುತ್ತಾನೋ ಅವರು ದೇಶದಲ್ಲಿ ಸ್ಟ್ರೀಟ್​​​ ಆಗಿರುತ್ತಾನೆ: ಶಿವಣ್ಣ

ಶಿವಮೊಗ್ಗ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ ಮತ ಪ್ರಚಾರದಲ್ಲಿ ತೊಡಗಿದ್ದಾರೆ.

ಇನ್ನು ರಾಜ್ಯದ ಅಭ್ಯರ್ಥಿಗಳ ಪರವಾಗಿ ಕೇಂದ್ರದ ಘಟಾನುಘಟಿ ನಾಯಕರುಗಳ ಬಂದು ಪ್ರಚಾರವನ್ನು ಮಾಡುತ್ತಿದ್ದಾರೆ. ಅದರಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ರಾಹುಲ್ ಗಾಂಧಿಯವರು ಪ್ರಚಾರವನ್ನು ಮಾಡಿದ್ದಾರೆ.

ಇನ್ನು ನಟ ಶಿವರಾಜ್ ಕುಮಾರ್ ಅವರು ಪತ್ನಿ ಗೀತಾ ಅವರ ಪರವಾಗಿ ಬೃಹತ್ ಪ್ರಚಾರವನ್ನು ಕೈಗೊಂಡಿದ್ದು, ಈ ಪ್ರಚಾರದ ವೇಳೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರಿಗೆ ನಾನು ಪಕ್ಕ ಅಭಿಮಾನಿ ಎಂದು ಹೇಳಿದ್ದಾರೆ.

ಯೆಸ್..‌ ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್​​​​ ಸಮಾವೇಶದಲ್ಲಿ ನಟ ಶಿವ ರಾಜ್​​​ಕುಮಾರ್​​​ ಅವರು ರಾಹುಲ್​​​ ಗಾಂಧಿ ಅವರನ್ನು ಹಾಡಿ ಹೋಗಳಿದ್ದಾರೆ. ನಾನು ರಾಹುಲ್​​ ಗಾಂಧಿ ಅವರ ದೊಡ್ಡ ಅಭಿಮಾನಿ ಅಂತ ಹೇಳಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ ಕಾರಣವನ್ನೂ ಸಹ ತಿಳಿಸಿದ್ದಾರೆ. ಈ ದಿನ ನನಗೆ ತುಂಬಾ ಸಂತೋಷವಾಗುತ್ತಿದೆ. ಇಂತಹ ಮಹಾನಾಯಕರ ಜತೆಗೆ ವೇದಿಕೆಯನ್ನು ಹಂಚಿಕೊಳ್ಳಲು ನನಗೆ ಹೆಮ್ಮೆಯಾಗುತ್ತಿದೆ. ನಾನು ರಾಹುಲ್​​ ಗಾಂಧಿ ಅವರ ದೊಡ್ಡ ಅಭಿಮಾನಿ, ಅವರ ಫಿಟ್ನೆಸ್​​​​ಗೆ, ಅವರ ಮನುಷ್ಯತ್ವಕ್ಕೆ ನಾನು ಫ್ಯಾನ್ ಎಂದರು. ಯಾವ ಮನುಷ್ಯ ಫಿಟ್​​​ ಆಗಿರುತ್ತಾನೋ ಅವನು ದೇಶದಲ್ಲಿ ಸ್ಟ್ರೀಟ್​​​ ಆಗಿರುತ್ತಾನೆ ಎಂದು ಶಿವಣ್ಣ.

ಇದೀಗ ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಶಿವಣ್ಣ ಮಾತಿಗೆ ಕೆಲ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ರಾಜ ಮನೆನತನಕ್ಕೆ ಇದು ಸರಿಯಲ್ಲ ಶಿವಣ್ಣ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos