ರಾಹುಲ್ ಗಾಂಧಿಯನ್ನು ಯಾಕೆ ವಿಚಾರಣೆಗೆ ಒಳಪಡಿಸಿಲ್ಲ: ಎಚ್ ಡಿಕೆ

ರಾಹುಲ್ ಗಾಂಧಿಯನ್ನು ಯಾಕೆ ವಿಚಾರಣೆಗೆ ಒಳಪಡಿಸಿಲ್ಲ: ಎಚ್ ಡಿಕೆ

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದೆ.

ಇನ್ನು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಜ್ವಲ್ ಪ್ರಕರಣದಲ್ಲಿ 16 ವರ್ಷ ವಯಸ್ಸಿನ ಬಾಲಕಿಯೂ ಸಂತ್ರಸ್ತೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಹಿರಂಗವಾಗಿ ಹೇಳಿದ್ದಾರೆ. ಯಾವ ಆಧಾರದ ಮೇಲೆ ರಾಹುಲ್​ ಗಾಂಧಿ ಆ ಹೇಳಿಕೆ ನೀಡಿದರು? ಆ ಬಗ್ಗೆ ಎಸ್ಐಟಿ ಯಾಕೆ ಇನ್ನೂ ತನಿಖೆ ಮಾಡಿಲ್ಲ? 400 ಮಹಿಳೆಯರನ್ನು ಅತ್ಯಾಚಾರ ಮಾಡಲಾಗಿದೆ ಎನ್ನುತ್ತಾರೆ. ಹಾಗಾದರೆ ಯಾಕೆ ರಾಹುಲ್​ ಗಾಂಧಿಯವರನ್ನು ಇನ್ನು ಬಿಟ್ಟಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

2,900 ಕೇಸ್ ಇದೆ​ ಎಂದು ಹೇಳುತ್ತಾರೆ. ಆದರೂ ಒದ್ದಾಡುತ್ತಾರೆ. ಯಾವ ಸಂತ್ರಸ್ತೆಯರೂ ಸಿಗುತ್ತಿಲ್ಲ ಎಂದು ಒದ್ದಾಡುತ್ತಿದ್ದಾರೆ. ಆ ಸಂತ್ರಸ್ತೆಯರಿಗೆ ಏನು ಸ್ಥೈರ್ಯ ತುಂಬುತ್ತೀರಿ ನೀವು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ಮಳೆಗಾಲದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ: ತುಷಾರ್ ಗಿರಿ ನಾಥ್

ನಾನು ಪ್ರಜ್ವಲ್​ ರೇವಣ್ಣರನ್ನ ವಹಿಸಿಕೊಂಡು ಮಾತನಾಡುತ್ತಿಲ್ಲ. ಒಂದು ತನಿಖೆ ಪ್ರಾರಂಭ ಮಾಡಿದಾಗ ಮಾಹಿತಿ ಸೋರಿಕೆ ಆಗಬಾರದು. ಸರ್ಕಾರಕ್ಕೆ, ಸಂತ್ರಸ್ತೆಯರಿಗೆ ರಕ್ಷಣೆ ಕೊಡುವುದು ಬೇಕಾಗಿಲ್ಲ. ಈ ಸರ್ಕಾರಕ್ಕೆ ಬೇಕಾಗಿರುವುದು ಕೇವಲ ಪ್ರಚಾರ ಅಷ್ಟೇ. ಏ.22ರಂದು ಬೇಲೂರಿನಲ್ಲಿ ಚುನಾವಣಾ ಪ್ರಚಾರ ಸಭೆ ನಡೆಯಿತು. ಏ.22ರಂದು ಪ್ರಜ್ವಲ್​ ಪಕ್ಕದಲ್ಲಿ ಕುಳಿತ ಹೆಣ್ಣು ಮಗಳು ಯಾರು? ಏ.21ರಂದು ಬಿಡುಗಡೆಯಾದ ವಿಡಿಯೋದಲ್ಲಿರುವುದು ಯಾರು? ಅತ್ಯಾಚಾರ ಆಗಿದ್ರೆ ಆ ಹೆಣ್ಮಗಳು ಯಾಕೆ ಒಂದೇ ವೇದಿಕೆಯಲ್ಲಿ ಇರುತ್ತಿದ್ದರು?ಪ್ರಜ್ವಲ್​ ಪಕ್ಕ ಆ ಹೆಣ್ಣು ಮಗಳು ಯಾಕೆ ಕುಳಿತುಕೊಳ್ಳುತ್ತಿದ್ದರು ಎಂದು ಪ್ರಶ್ನಿಸಿದರು.

ಸಂಪುಟದಿಂದ ಡಿಕೆ ಶಿವಕುಮಾರ್ ವಜಾಕ್ಕೆ ಆಗ್ರಹ

ಡಿಸಿಎಂ ಡಿಕೆ ಶಿವಕುಮಾರ್ ಹಸ್ತಕ್ಷೇಪದಲ್ಲಿ ನಡೆಯುವ ತನಿಖೆಯಿಂದ ವಾಸ್ತವ ಹೊರಬರುವುದಿಲ್ಲ. ಅಂಥ ವ್ಯಕ್ತಿಯನ್ನು ಸಂಪುಟದಲ್ಲಿ ಇಟ್ಟುಕೊಂಡು ತನಿಖೆ ಮಾಡಿದರೆ ಸೂಕ್ತ ರೀತಿಯಲ್ಲಿ ತನಿಖೆ ಸಾಗದು. ಹೀಗಾಗಿ ಅವರನ್ನು ಸಂಪುಟದಿಂದ ವಜಾಗೊಳಿಸಿ ತನಿಖೆ ಮುಂದುವರಿಸಲಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos