ಬಿಜೆಪಿ ಸರ್ಕಾರ ಸತ್ತು ಹೋಗಿದೆ: ಡಿಕೆಶಿ

ಬಿಜೆಪಿ ಸರ್ಕಾರ ಸತ್ತು ಹೋಗಿದೆ: ಡಿಕೆಶಿ

ಉತ್ತರ ಕನ್ನಡ: ಬಿಜೆಪಿ ಸರ್ಕಾರ ಸತ್ತು ಹೋಗಿದೆ. ಜನರ, ಬಡವರ ಪರವಾಗಿ ಇಲ್ಲವಾಗಿದೆ. ಕೋರೊನಾ ಸಮಯದಲ್ಲಿ ಆಕ್ಸಿಜನ್ ಇಲ್ಲದೆ ಜನ ಸತ್ತರು, ಚಿಕಿತ್ಸೆ ಸರಿಯಾಗಿ ಸಿಗದೆ ರಾಜ್ಯದಲ್ಲಿ 4 ಲಕ್ಷ ಜನ ಸತ್ತಿದ್ದಾರೆ. ಈಗ ವ್ಯಾಕ್ಸಿನ್ ತೆಗೆದುಕೊಂಡವರು ಸಾಯುವ ಕಾಲ ಬಂದಿದೆ. ಬಿಜೆಪಿಯವರು ಈ ವ್ಯಾಕ್ಸಿನ್ ಕೊಟ್ಟ ಕಂಪೆನಿಯಿಂದಲೂ ಲಂಚ ಹೊಡೆದಿದ್ದಾರೆ ಎಂದು ಉಪಮುಖ್ಯಮಂತ್ರಿಗೆ ಶಿವಕುಮಾರ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಕನ್ನಡದ ಮುಂಡಗೋಡದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು,ಕೊರೋನಾ ಲಸಿಕೆ ಹಾಕಿಸಿಕೊಂಡವರಿಗೆ ಮೋದಿ ಫೋಟೊ ಇರುವ ಪ್ರಮಾಣ ಪತ್ರ ಕೊಟ್ಟರು. ಸತ್ತವರ ಸರ್ಟಿಫಿಕೆಟ್ಗೆ ಏಕೆ ಮೋದಿ ಫೋಟೋ ಹಾಕಿಲಿಲ್ಲ. ಜನಕ್ಕೆ ಏನೂ ಸಹಾಯ ಮಾಡದೆ ದೀಪ ಹಚ್ಚಿ, ಚಪ್ಪಾಳೆ ಹೊಡೆಯಿರಿ ಮಂಗಮಾಯ ಆಗುತ್ತೆ ಎಂದರು, ಏನೂ ಆಗಲಿಲ್ಲ. ಕೋರೋನಾ ಸಮಯದಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಕೊಟ್ಟಿದ್ದೇನೆ ಎಂದು ಹೇಳಿತು. ಆ ಹಣ ಯಾರಿಗಾದರೂ ಬಂದಿದೆಯೇ?  ನಮ್ಮ ಕರಾವಳಿಯ ಕಾರ್ಪೋರೇಷನ್ ಬ್ಯಾಂಕ್, ವಿಜಯಾ ಬ್ಯಾಂಕ್ ಅನ್ನು ಬೇರೆ ಬ್ಯಾಂಕ್ ಗಳ ಜೊತೆ ವಿಲೀನ ಮಾಡಿ ಒಂದೂ ಬ್ಯಾಂಕ್ ಇಲ್ಲದಂತೆ ಮಾಡಿದ್ದು ಬಿಜೆಪಿ ಸಾಧನೆ ಎಂದುರು.

ಕೋರೋನಾ ಸಮಯದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಜದ ಎಲ್ಲಾ ವರ್ಗದ ಕಾರ್ಮಿಕರಿಗೆ 10 ಸಾವಿರ ಸಹಾಯಧನ ನೀಡಿ ಎಂದು ಮನವಿ ಮಾಡಿದರು ಕೊಡಲಿಲ್ಲ. ಆನಂತರ ಒಂದಷ್ಟು ಜನಕ್ಕೆ 5 ಸಾವಿರ ಕೊಟ್ಟು ಕೈತೊಳೆದುಕೊಂಡರು.

ಕಾರ್ಮಿಕರು ಸ್ವಂತ ಊರಿಗೆ ಹೋಗುವಾಗ ಬಸ್ ಟಿಕೆಟ್ ದರ ಮೂರು ಪಟ್ಟು ಹೆಚ್ಚಳ ಮಾಡಿದ್ದರು. ಈ ರಾಜ್ಯ ಕಟ್ಟಲು ಕಾರ್ಮಿಕಕರು ಬೇರೆ ಊರುಗಳಿಂದ ಬಂದಿದ್ದಾರೆ. ಅವರ ಬಳಿ ಒಂದು ರೂಪಾಯಿ ತೆಗೆದುಕೊಳ್ಳ ಬೇಡಿ ಎಂದು ಹೋರಾಟ ಮಾಡಿದೆವು.  ನಾನು ಪಕ್ಷದ ಕಡೆಯಿಂದ 1 ಕೋಟಿ ಮೊತ್ತದ ಚೆಕ್ ನೀಡಿ ಉಚಿತ ಬಸ್ ವ್ಯವಸ್ಥೆ ಮಾಡಿ ಎಂದೆ. ನನ್ನ ಬಳಿ ಚೆಕ್ ತೆಗೆದುಕೊಳ್ಳಲಿಲ್ಲ. ಆದರೆ ನಮ್ಮ ಹೋರಾಟಕ್ಕೆ ಮಣಿದು ಉಚಿತ ಬಸ್ ಮಾಡಿದರು.

ಇದನ್ನೂ ಓದಿ:ಯಾವ ಮನುಷ್ಯ ಫಿಟ್​​​ ಆಗಿರುತ್ತಾನೋ ಅವರು ದೇಶದಲ್ಲಿ ಸ್ಟ್ರೀಟ್​​​ ಆಗಿರುತ್ತಾನೆ: ಶಿವಣ್ಣ

ಬಿಜೆಪಿಯವರು ಈ ರೀತಿಯ ಒಂದೇ ಒಂದು ಮಾನವೀಯತೆಯ ಕೆಲಸ ಮಾಡಿಲ್ಲ. ಡಬಲ್ ಎಂಜಿನ್ ಸರ್ಕಾರ ಎಂದರು ಆದರೇ ಏನೂ ಮಾಡದ ಅವರನ್ನು ನಮ್ಮ ರಾಜ್ಯದ ಜನ ಮನೆಯಲ್ಲಿ ಕೂರಿಸಿ, ನಮಗೆ 136 ಸ್ಥಾನ ಕೊಟ್ಟಿದ್ದಾರೆ.

ನಾವು ಗೃಹಲಕ್ಷ್ಮಿ ಮೂಲಕ ವರ್ಷಕ್ಕೆ 24 ಸಾವಿರ ಕೊಡುತ್ತಿದ್ದೇವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ 1 ಲಕ್ಷ ಕೊಡುತ್ತೇವೆ. ಯುವಕರಿಗೆ 1 ಲಕ್ಷ, ರೈತರ ಸಾಲ ಮನ್ನಾ, 25 ಲಕ್ಷ ಆರೋಗ್ಯ ವಿಮೆ ಕೊಡುತ್ತೇವೆ. ಕಾಂಗ್ರೆಸ್ ಪಕ್ಷ ಕರ್ನಾಟಕ ಮಾತ್ರವಲ್ಲ ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಇಡೀ ದೇಶದಲ್ಲಿ ಇಂಡಿಯಾ ಒಕ್ಕೂಟ ಗೆಲ್ಲಲಿದೆ. ಕರ್ನಾಟಕದಿಂದ 6 ಜನ ಮಹಿಳೆಯರಿಗೆ ಟಿಕೆಟ್ ಕೊಟ್ಟಿದ್ಧೇವೆ. ಕರ್ನಾಟಕದ ದನಿಯಾಗಿ ಇವರೆಲ್ಲಾ ಕೆಲಸ ಮಾಡಲಿದ್ದಾರೆ.

ಬಿಜೆಪಿಯಿಂದ ದೇಶದ ಯಾರಿಗೂ ಒಳ್ಳೆಯದಾಗಿಲ್ಲ. ರೈತರ ಆದಾಯ ಡಬಲ್ ಆಗಿಲ್ಲ, ಉದ್ಯೋಗವಿಲ್ಲ. ಬಿಜೆಪಿಯವರು ಮನೆಯ ಬಳಿ ಬಂದರೆ ಕೇಳಬೇಕು ಏನಾದರೂ ಅನುಕೂಲ ಆಗಿದೆಯೇ? ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಜನಕ್ಕೆ ಒಳ್ಳೆಯದಾಗಬೇಕು. ಅನುಕೂಲವಾಗಬೇಕು, ಕಷ್ಟ             ಕ್ಕೆ ನೆರವಾಗಬೇಕು, ಊರಿಗೆ ಅಥವಾ ವೈಯಕ್ತಿಕವಾಗಿ ಒಳ್ಳೆಯದಾಗಬೇಕು ಆದರೆ ಬಿಜೆಪಿಯಿಂದ ಏನೂ ಒಳ್ಳೆಯದಾಗಿಲ್ಲ.

ಬಿಜೆಪಿಯವರು ಹೇಳಿದ್ರು ಕಾಂಗ್ರೆಸ್ ಅವರು ಕೊಳ್ಳೆ ಹೊಡೆದಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ವಿದೇಶದಲ್ಲಿ ಇರುವ ಎಲ್ಲಾ ಕಪ್ಪುಹಣ ತಂದು ಜನ್ ಧನ್ ಖಾತೆ ತೆರೆಸಿ ಜನರ ಖಾತೆಗೆ ಹಾಕುತ್ತೇವೆ ಎಂದು ಹೇಳಿದರು. ಹಣ ಬಂದಿದೆಯೇ? ಜನರ ಈ ಎಲ್ಲಾ ಕಷ್ಟಗಳನ್ನು ನೋಡಿದ ನಾವು ಪ್ರಜಾಧ್ವನಿ, ಮೇಕೆದಾಟು ಯಾತ್ರೆ, ಭಾರತ್ ಜೋಡೋ ಯಾತ್ರೆ ಮಾಡಿ ಈ ಕಷ್ಟಗಳ ಪರಿಹಾರಕ್ಕೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೆವು.

 

ಫ್ರೆಶ್ ನ್ಯೂಸ್

Latest Posts

Featured Videos