ತಾಜಾ ಸುದ್ದಿಗಳು

 • ಬೃಹತ್ ಗಾತ್ರ ಮೊಸಳೆ ಪತ್ತೆ..!

  ರಾಯಚೂರು, ಡಿ. 6 : ನಾರಾಯಣಪುರದ ಬಸವಸಾಗರ ಜಲಾಶಯದ ಹಿನ್ನೀರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದೆ. ಜಲಾಶಯದ ಹಿನ್ನೀರಿನಲ್ಲಿರುವ ನವಲಿಯ ಜಡೇಲಿಂಗೇಶ್ವರ ದೇವಸ್ಥಾನದ ಬಳಿ ಮೊಸಳೆ ಪ್ರತ್ಯಕ್ಷವಾಗಿ ಭಕ್ತರಲ್ಲಿ ಆತಂಕ ಮೂಡಿತು. ನವಲಿ ಗ್ರಾಮವು ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಹಲವು ದಿನಗಳಿಂದ ಮೊಸಳೆ ಹಿನ್ನೀರಿನಲ್ಲಿ ಕಾಣಿಸಿಕೊಳ್ಳುತ್ತಿದೆ. ದೇವಾಲಯಕ್ಕೆ ಪ್ರತಿ ದಿನ ಹಲವು ಮಂದಿ ಭಕ್ತರು ಆಗಮಿಸುತ್ತಾರೆ. ಪದೇ ಪದೆ ಮೊಸಳೆ ಕಾಣಿಸಿಕೊಳ್ಳುತ್ತಿರುವುದರಿಂದ ಭೀತಿ ಎದುರಾಗಿದೆ.

  READ MORE
 • ಡ್ಯಾನ್ಸ್ ನಿಲ್ಲಿಸಿದ ಮಹಿಳೆಗೆ ಗುಂಡು

  ಲಕ್ನೋ, ಡಿ. 6 : ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಮಹಿಳೆ ಡ್ಯಾನ್ಸ್ ಮಾಡಿ ನಿಲ್ಲಿಸಿದ ತಕ್ಷಣ ಗುಂಡು ಹಾರಿಸುತ್ತೇನೆ ಎಂದು ಹೇಳಿದ್ದಾನೆ. ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಿದ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಚಿತ್ರಕೂಟ್ನಲ್ಲಿ ನಡದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ಆರೋಪಿ ಜೊತೆ ಮತ್ತೊಬ್ಬ ವ್ಯಕ್ತಿ, ಅಣ್ಣ ನೀನು ಈಗ ಗುಂಡು ಹಾರಿಸಲೇ ಬೇಕು ಎಂದು ಹೇಳಿದ್ದಾನೆ. ಮಹಿಳೆ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಳು. ಗ್ರಾಮದ ಮುಖ್ಯಸ್ಥರ ಕುಟುಂಬದ ಸದಸ್ಯರೊಬ್ಬರು ಮಹಿಳೆಗೆ

  READ MORE
 • ಅಭಿನಂದನೆ ತಿಳಿಸಿದ ಮಾಯಾವತಿ

  ಲಕ್ನೋ, ಡಿ. 6 : ಹೈದರಾಬಾದಿನ ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ಎನ್ ಕೌಂಟರ್ ಬಗ್ಗೆ ಬಹುಜನ್ ಸಮಾಜ್ ಪಕ್ಷ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಪ್ರತಿಕ್ರಿಯಿಸಿ, ದೆಹಲಿ, ಉತ್ತರ ಪ್ರದೇಶ ಪೊಲೀಸರು ಹೈದರಾಬಾದ್ ಪೊಲೀಸರನ್ನು ಪ್ರೇರಣೆಯಾಗಿ ಸ್ವೀಕರಿಸಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿ, ಮಾಯಾವತಿ ಹೈದರಾಬಾದ್ ಪೊಲೀಸರಿಗೆ ಅಭಿನಂದನೆ ತಿಳಿಸಿದರು. ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗೆ ಸಾಕಷ್ಟು ಒತ್ತು ಕೊಟ್ಟಿಲ್ಲವೆಂದು ಯೋಗಿ ಸರ್ಕಾರದ ವಿರುದ್ಧ ಕಿಡಿಕಾರಿದರು.

  READ MORE
 • ಒಂಟಿ ಸಲಗ ಮೃತ

  ಚಿಕ್ಕಮಗಳೂರು, ಡಿ. 5 : ಜಿಲ್ಲೆಯ ಕಡೂರು ತಾಲೂಕಿನಲ್ಲಿ ವಿದ್ಯುತ್ ತಗುಲಿ ಒಂಟಿ ಸಲಗ ಮೃತಪಟ್ಟಿರುವ ಘಟನೆ ನಡೆದಿದೆ. ಕಡೂರು ತಾಲೂಕು ಹಳೆಸಿದ್ಧರಹಳ್ಳಿಯಲ್ಲಿ ಈ ದುರಂತ ಸಂಭವಿಸಿದ್ದು, 20 ರಿಂದ 25 ವರ್ಷದ ಕಾಡಾನೆ ಸಾವನ್ನಪ್ಪಿದೆ. ಹಸಿವಿನಿಂದ ಗ್ರಾಮದ ಕಡೆಗೆ ಬಂದ ಆನೆ ಜೋಳದ ಗದ್ದೆಗೆ ನುಗ್ಗಲು ಯತ್ನಿಸಿದಾಗ ಅಲ್ಲಿ ಫೆನ್ಸಿಗೆ ಅಳವಡಿಸಿದ್ದ ವಿದ್ಯುತ್ ಪ್ರವಹಿಸಿ ಆನೆ ಮೃತಪಟ್ಟಿದೆ. ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಗೆ ಸುದ್ದಿ ತಿಳಿಸಿದ್ದಾರೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

  READ MORE
 • ಚೀನಾದಲ್ಲಿ ಚಿನ್ನ ಗೆದ್ದ ಮನು ಬಾಕರ್

  ಪುಟಿಯಾನ್(ಚೀನಾ): ಚೀನಾದಲ್ಲಿ ನಡೆಯುತ್ತಿರುವ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಕಿರಿಯರ ವಿಭಾಗದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ಮನು ಭಾಕರ್ ಚಿನ್ನದ ಪದಕ ಗೆದ್ದಿದ್ದಾರೆ.ಹದಿನೇಳು ವರ್ಷದ ಮನು ಭಾಕರ್ 244.7 ಪಾಯಿಂಟ್ ಗಳಿಸಿ ಚಿನ್ನದ ಪದಕ್ಕೆ ಮುತ್ತಿಟ್ಟರೆ, ಭಾರತದ ಮತ್ತೊಬ್ಬ ಆಟಗಾರ್ತಿ ಯಶಸ್ವಿನಿ ಸಿಂಗ್ ದೆಸ್ವಾಲ್ 6 ನೇ ಸ್ಥಾನಕ್ಕೆ ಖುಷಿ ಪಟ್ಟರು. ಪುರುಷರ 10 ಮೀಟರ್ ಏರ್ ಪಿಸ್ತೂಲ್ ಪಂದ್ಯದಲ್ಲಿ ಅಭಿಷೇಕ್ ವರ್ಮ ಮತ್ತು ಸೌರಭ್ ಚೌಧರಿ ಅಂತಿಮ ರೌಂಡ್ ತಲುಪಿದ್ದಾರೆ.

  READ MORE
 • ಮೆಸ್ಸಿ ಮ್ಯಾಜಿಕ್ :34ನೇ ಹ್ಯಾಟ್ರಿಕ್

  ಸ್ಪೇನ್ ನ,11: ಫುಟ್ ಬಾಲ್ ನ  ಸ್ಟಾರ್ ಆಟಗಾರ  ಲಿಯೋನಲ್ ಮೆಸ್ಸಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಮೆಸ್ಸಿ 34ನೇ ಹ್ಯಾಟ್ರಿಕ್ ಗೋಲು ಬಾರಿಸಿದರ ಪರಿಣಾಮ,ಸೆಲ್ಟಾ ವಿಗೋ ತಂಡದ ವಿರುದ್ಧ ಬಾರ್ಸಿಲೋನ ತಂಡ 4-1 ಅಂತರದ ಗೆಲುವು ಕಂಡಿತು. ಈ ಹ್ಯಾಟ್ರಿಕ್ ನಿಂದಾಗಿ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೋ ಅವರ ದಾಖಲೆಯನ್ನು ಮೆಸ್ಸಿ ಸರಿಗಟ್ಟಿದ್ದಾರೆ. ಈ ಹಿಂದೆ ಮೆಸ್ಸಿ 33 ಹ್ಯಾಟ್ರಿಕ್​ ಗೋಲ್ ಹಾಗು, ರೊನಾಲ್ಡೋ 34 ಹ್ಯಾಟ್ರಿಕ್ ಗೋಲು ಬಾರಿಸಿದ್ದರು.

  READ MORE
 • ಅಮೆರಿಕಾದಲ್ಲಿ ಕುರುಬ ಸಮಾವೇಶ..!

  ಬೆಂಗಳೂರು, ನ. 8 : ಕುರುಬರನ್ನು ಒಟ್ಟುಗೂಡಿಸಿ ಸಮಾವೇಶ ನಡೆಸಲು ಕಾಂಗ್ರೆಸ್ ಮುಂದಾಗಿದ್ದು, ಮಾಜಿ ಸಚಿವ ಹೆಚ್.ಎಂ.ರೇವಣ್ಣರನ್ನ ಮುಂದೆ ಬಿಟ್ಟಿದ್ದಾರೆನ್ನಲಾಗಿದೆ. ಅಮೆರಿಕಾದಲ್ಲಿ ಕುರುಬ ಸಮುದಾಯದ ಸಮಾವೇಶ ನಡೆಸಲು ಚಿಂತನೆ ನಡೆಸಲು ನಿರ್ಧರಿಸಲಾಗಿದೆ. ಈಗಾಗಲೇ ವೀರಶೈವ, ಒಕ್ಕಲಿಗರ ಸಮಾವೇಶ ನಡೆದಿದ್ದು, ಅದಕ್ಕೆ ಸೇರಿದ ಸಂಘಗಳೂ ಇದೆ. ಇದೀಗ ಕುರುಬ ಸಮುದಾಯದವರ ಸಮಾವೇಶ ಮಾಡಿ, ಸಂಘ ಕಟ್ಟಲು ಕಾಂಗ್ರೆಸ್ ನಿರ್ಧರಿಸಿದ್ದು, ರೇವಣ್ಣ ಅಲ್ಲಿನ ಸಮುದಾಯದವರ ಜೊತೆ ಮಾತುಕತೆ ನಡೆಸಲಿದ್ದಾರೆ.

  READ MORE

ತಾಜಾ ಸುದ್ದಿಗಳು

ಕ್ರೀಡೆ

ಚಲನಚಿತ್ರ

ಹಣಕಾಸು