ಬೆಂಗಳೂರು: ‘ಗೀತಾ’ ಧಾರಾವಾಹಿ ಮೂಲಕ ಫೇಮಸ್ ಆದವರು ಧನುಷ್ ಗೌಡ. ಅವರಿಗೆ ದೊಡ್ಡ ಮಟ್ಟದ ಖ್ಯಾತಿ ನೀಡಿದ ಧಾರಾವಾಹಿ ಗೀತಾ. ಗೀತಾ ಸೀರಿಯಲ್ ನಲ್ಲಿ ವಿಜಯ್ ಪಾತ್ರದ ಮೂಲಕ ಮನೆಮಾತಾಗಿದ್ದ ಧನುಷ್ ಗೌಡ ಲೋಕಸಭಾ ಚುನಾವಣೆಯ ಹೊತ್ತಲ್ಲೆ ಅಂದರೆ ಏಪ್ರಿಲ್ 26 ರಂದು ಹಸೆಮಣೆ ಏರಿದ್ದಾರೆ.
ಕನ್ನಡಿಗರ ಮನೆಗೆದ್ದಿದ ನಟ ಧನುಷ್ ಗೌಡ, ನಿನ್ನೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕರ್ನಾಟಕದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣೆ ನಡೆಯುವ ಹೊತ್ತಿನಲ್ಲೇ ಧನುಷ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮದುವೆಗೂ ಮುನ್ನ ಪೂರ್ತಿ ರೆಡಿಯಾಗಿ ಮದುವೆ ಗೆಟಪ್ ನಲ್ಲೇ ಮತಗಟ್ಟೆಗೆ ತೆರಳಿ ವೋಟ್ ಮಾಡಿ ಕೂಡ ಬಂದಿದ್ದಾರೆ ಧನುಷ್.
ತಮ್ಮ ಬಹು ಕಾಲದ ಗೆಳತಿ ಸಂಜನಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಧನುಷ್ ಅವರ ಮದುವೆ ಫೋಟೋ ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಧನುಷ್ ಸ್ನೇಹಿತರು, ಅಭಿಮಾನಿಗಳು, ಗೀತಾ ಸೀರಿಯಲ್ ಫ್ಯಾನ್ಸ್ ಎಲ್ಲರೂ ತಮ್ಮ ನೆಚ್ಚಿನ ನಟನಿಗೆ ವೈವಾಹಿಕ ಜೀವನಕ್ಕೆ ಶುಭ ಕೋರಿದ್ದಾರೆ.