DC vs GT ಮುಖಾಮುಖಿ

DC vs GT ಮುಖಾಮುಖಿ

ನವದೆಹಲಿ: ಇಂದು ಡೆಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ 40ನೇ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಸೆಣಸಾಡಲು ಸಜ್ಜಾಗಿದೆ.

ಸತತ ಸೋಲುಗಳೊಂದಿಗೆ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್, 17ನೇ ಆವೃತ್ತಿ ಐಪಿಎಲ್‌ನಲ್ಲಿ ಮಾಡು ಇಲ್ಲವೇ ಮಡಿ ಸ್ಥಿತಿಗೆ ತಲುಪಿದ್ದು, ಇಂದು ನಿರ್ಣಾಯಕ ಕದನದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಾಡಲಿದೆ. ಗುಜರಾತ್ ಕೂಡಾ ಅಸ್ಥಿರ ಪ್ರದರ್ಶನ ತೋರುತ್ತಿದ್ದು, ಗೆಲುವಿನ ಹಳಿಯಲ್ಲೇ ಉಳಿದುಕೊಳ್ಳುವ ಕಾತರದಲ್ಲಿದೆ.

ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಟೂರ್ನಿಯಲ್ಲಿ8 ಪಂದ್ಯಗಳನ್ನಾಡಿದ್ದು, ಕೇವಲ 3ರಲ್ಲಿ ಗೆದ್ದಿದೆ. ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಿದೆ. ತಂಡದ ತಾರಾ ಆಟಗಾರರು ಕೈಕೊಡುತ್ತಿದ್ದು, ಡೇವಿಡ್ ವಾರ್ನರ್, ಪೃಥ್ವಿ ಶಾ ನಿರೀಕ್ಷೆ ಉಳಿಸಿಕೊಳ್ಳುತ್ತಿಲ್ಲ. ಹೈದ್ರಾಬಾದ್ ವಿರುದ್ಧ 18 ಎಸೆತದಲ್ಲಿ 65 ರನ್ ಸಿಡಿಸಿದ್ದ ಜೇಕ್ ಪ್ರೇಸರ್ ಮತ್ತೊಮ್ಮೆ ಅಬ್ಬರಿಸಲು ಕಾಯುತ್ತಿದ್ದಾರೆ.

ಅತ್ತ ಡೆಲ್ಲಿ ವಿರುದ್ಧ ಮೊದಲ ಮುಖಾಮುಖಿಯಲ್ಲಿ ಸೋತಿದ್ದ ಗುಜರಾತ್ ಇದೀಗ ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ. ತಂಡ 8 ಪಂದ್ಯದಲ್ಲಿ ತಲಾ 4 ಗೆಲುವು, 4ಸೋಲು ಕಂಡಿದೆ. ತಂಡದ ಅಸ್ಥಿರ ಆಟವಾಡುತ್ತಿದ್ದು, ರಶೀದ್ ಖಾನ್, ರಾಹುಲ್ ಅವಾಟಿಯಾ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos