ನನ್ನ ವಿರುದ್ಧ ದೂರು ನೀಡಿದವರಿಗೆ ಮುಖಭಂಗವಾಗಿದೆ: ಈಶ್ವರಪ್ಪ

ನನ್ನ ವಿರುದ್ಧ ದೂರು ನೀಡಿದವರಿಗೆ ಮುಖಭಂಗವಾಗಿದೆ: ಈಶ್ವರಪ್ಪ

ಶಿವಮೊಗ್ಗ: ಈ ಬಾರಿ ಲೋಕಸಭಾ ಚುನಾವಣೆಗೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಪುತ್ರಗೆ ಟಿಕೆಟ್ ನೀಡಬಿದ್ದ ಕಾರಣ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಈ ಬಾರಿ ಕಣಕ್ಕಿಳಿದಿರುವ ಕೆ ಎಸ್ ಈಶ್ವರಪ್ಪ ಅವರ ವಿರುದ್ಧ ಬಿಜೆಪಿ ಪಕ್ಷವು ಮೋದಿಯವರ ಫೋಟೋವನ್ನು ಬಳಸಬಾರದೆಂಬ ಕಾರಣಕ್ಕೆ ಅವರ ಮೇಲೆ ದೂರು ದಾಖಲಿಸಿದ್ದರು.

ಆದರೆ ಈಗ ಚುನಾವಣಾ ಪ್ರಚಾರದ ವೇಳೆ ಮತ್ತು ಇನ್ನಿತರ ಜಾಗದಲ್ಲಿ ಮೋದಿಯವರ ಫೋಟೋ ಬಳಕೆಗೆ ಮಾಜಿ ಸಚಿವ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಅವರಿಗೆ ಮೋದಿ ಫೋಟೋ ಬಳಸಲು ಅನುಮತಿ ಸಿಕ್ಕಿದೆ.

ಇನ್ನು ಇದರ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ ಎಸ್ ಈಶ್ವರಪ್ಪ ಅವರು, ಮೋದಿ ಫೋಟೊ ಬಳಕೆಗೆ ನನಗೆ ಅವಕಾಶ ಸಿಕ್ಕಿದ್ದು, ದೂರು ನೀಡಿದ್ದವರಿಗೆ ಮುಖಭಂಗವಾಗಿದೆ ಎಂದು ಕೆಎಸ್ ಈಶ್ವರಪ್ಪ ಅವರು ಗುರುವಾರ ಹೇಳಿದ್ದಾರೆ.

ಮೋದಿಯವರ ಫೋಟೋ ಬಳಕೆಗೆ ನನಗೆ ಅಧಿಕಾರ ಸಿಕ್ಕಿದೆ. ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡುತ್ತೇನೆ. ಈ ಚುನಾವಣೆಯಲ್ಲಿ ಜೀವನ ಪೂರ್ತಿ ಅವರ ಫೋಟೋ ಬಳಸುತ್ತೇನೆ. ನರೇಂದ್ರ ಮೋದಿಯವರ ವಿಚಾರಧಾರೆಯನ್ನು ನಾನು ಎಲ್ಲರಿಗೂ ತಿಳಿಸುತ್ತೇನೆ ಎಂದು ಹೇಳಿದರು.

ಬಹಳ ಸಂತೋಷದ ವಿಷಯವೆಂದರೆ ವಿಶ್ವ ನಾಯಕ ನನ್ನ ಜೊತೆ ಉಳಿದಿರುವುದು. ನರೇಂದ್ರ ಮೋದಿ‌ ನನ್ನ ಜೊತೆ ಉಳಿದರೆ ಅದೇ ನನಗೆ ಆನಂದ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos