ತಾಜಾ ಸುದ್ದಿಗಳು

  • ನೆಪ್ರೋ ಯುರಾಲಾಜಿ ಸಂಸ್ಥೆಯ ನಿರ್ದೇಶಕರ ಕೇಶವಮೂರ್ತಿ ವಿರುದ್ಧ ಕ್ರಮಕ್ಕೆ ಆಗ್ರಹ

    ಬೆಂಗಳೂರು: ಹಲವಾರು ವರ್ಷಗಳಿಂದ ಕಾನೂನುಬಾಹಿರವಾಗಿ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುವ ದೇಶದ ಪ್ರತಿಷ್ಠಿತ ನೆಪ್ರೋ ಯುರಾಲಾಜಿ ಸಂಸ್ಥೆ ಕಳೆದ 8 ವರ್ಷಗಳಿಂದ ಪ್ರಭಾರ ಹುದ್ದೆಯಲ್ಲಿರುವ ಸಂಸ್ಥೆಯ ನಿರ್ದೇಶಕರ ಅಕ್ರಮಗಳಿಂದಾಗಿ ಆರೋಪಗಳಲ್ಲಿ ಭಾಗಿಯಾಗಿರುವ ಪ್ರಭಾರಿ ನಿರ್ದೇಶಕ ಡಾ.ಕೇಶವಮೂರ್ತಿ ಅವರನ್ನು ಈ ಕೂಡಲೇ ಅಮಾನತ್ತು ಅಥವಾ ವಜಾಗೊಳಿಸಬೇಕು ಎಂದು ದಲಿತ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಜೆ ಚಂದ್ರಪ್ಪ ಅಗ್ರಹಿಸಿದರು. ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ 9 ರೋಗಿಗಳಲ್ಲಿ 4 ಸಾವಿಗೀಡಾಗಿ, ಐವರು ಚಿಂತಾಜನಕವಾಗಿದ್ದ

    READ MORE
  • ಹೆಚ್.ಡಿ.ಕೆ, ನಿರಾಣಿ ವಿರುದ್ಧವೂ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲರ ವಿರುದ್ಧ ಇಂದು ಕಾಂಗ್ರೆಸ್ ನಾಯಕರು ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿದರು. ಇನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜಭವನ ಚಲೋ ಪ್ರತಿಭಟನೆ ನಡೆಸಿದ ನಂತರ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಇನ್ನೂ ಹಲವಾರು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಬೇಕೆಂದು ಇಂದು (ಶನಿವಾರ ಆಗಸ್ಟ್ 31) ರಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ರಾಜ್ಯಪಾಲರ ವಿರುದ್ದ ಕಾಂಗ್ರೆಸ್ ನಾಯಕರ ಪ್ರತಿಭಟನೆ

    READ MORE
  • ರಾಜ್ಯಪಾಲರ ವಿರುದ್ದ ಕಾಂಗ್ರೆಸ್ ನಾಯಕರ ಪ್ರತಿಭಟನೆ

    ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ವಿರುದ್ಧ ಇಂದು ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. ವಿಧಾನಸೌಧದ ಗಾಂಧಿ ಪ್ರತಿಮೆ ಎದುರುಗಡೆ ರಾಜ್ಯಪಾಲರಿಗೆ ದಿಕ್ಕಾರ ಕೂಗುತ್ತಾ, ಬಿಜೆಪಿ ಕೈಗೊಂಬೆಯಾಗಿರುವ ರಾಜ್ಯಪಾಲರಿಗೆ ಧಿಕ್ಕಾರ ಧಿಕ್ಕಾರ ಎಂದು ಕೂಗುತ್ತಾ ಪ್ರತಿಭಟನೆಯನ್ನು ನಡೆಸಿದರು. ಹೌದು, ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅನುಮತಿ ನೀಡಿರುವುದನ್ನು

    READ MORE
  • ನನ್ನ ವಿರುದ್ಧ ದೂರು ನೀಡಿದವರಿಗೆ ಮುಖಭಂಗವಾಗಿದೆ: ಈಶ್ವರಪ್ಪ

    ಶಿವಮೊಗ್ಗ: ಈ ಬಾರಿ ಲೋಕಸಭಾ ಚುನಾವಣೆಗೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಪುತ್ರಗೆ ಟಿಕೆಟ್ ನೀಡಬಿದ್ದ ಕಾರಣ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಈ ಬಾರಿ ಕಣಕ್ಕಿಳಿದಿರುವ ಕೆ ಎಸ್ ಈಶ್ವರಪ್ಪ ಅವರ ವಿರುದ್ಧ ಬಿಜೆಪಿ ಪಕ್ಷವು ಮೋದಿಯವರ ಫೋಟೋವನ್ನು ಬಳಸಬಾರದೆಂಬ ಕಾರಣಕ್ಕೆ ಅವರ ಮೇಲೆ ದೂರು ದಾಖಲಿಸಿದ್ದರು. ಆದರೆ ಈಗ ಚುನಾವಣಾ ಪ್ರಚಾರದ ವೇಳೆ ಮತ್ತು ಇನ್ನಿತರ ಜಾಗದಲ್ಲಿ ಮೋದಿಯವರ ಫೋಟೋ ಬಳಕೆಗೆ ಮಾಜಿ ಸಚಿವ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ

    READ MORE
  • ಲಕ್ಸೆಂಬರ್ಗ್‌: ಸಾರ್ವಜನಿಕ ಸಾರಿಗೆ ಸಂಪೂರ್ಣ ಉಚಿತ!

    ಲಕ್ಸೆಂಬರ್ಗ್‌ ಸಿಟಿ: ಯುರೋಪ್‌ನ ಚಿಕ್ಕ ದೇಶವಾದ ಲಕ್ಸೆಂಬರ್ಗ್‌, ತನ್ನಲ್ಲಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ನಾಗರಿಕರಿಗೆ ಉಚಿತವಾಗಿ ನೀಡುವುದಾಗಿ ಘೋಷಿಸಿದೆ. 2019ರ ಆರಂಭದಿಂದ ಇದು ಜಾರಿಗೆ ಬರಲಿದೆ. ಈ ಮೂಲಕ, ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಉಚಿತವಾಗಿಸಿದ ವಿಶ್ವದ ಮೊಟ್ಟ ಮೊದಲ ದೇಶವೆಂಬ ಹೆಗ್ಗಳಿಕೆ ಲಕ್ಸೆಂಬರ್ಗ್‌ ಪಾಲಾಗಿದೆ. ಬೆಂಗಳೂರಿಗಿಂತ ಸುಮಾರು ಮೂರು ಪಟ್ಟು ದೊಡ್ಡದಿರುವ ಈ ಪುಟಾಣಿ ದೇಶದಲ್ಲಿ ಸಾರಿಗೆ ದರ ಅಂಥಾ ದುಬಾರಿಯೇನಲ್ಲ. ರೈಲಿನ ಪ್ರಥಮ ದರ್ಜೆ ಎ.ಸಿ. ಕೋಚ್‌ನ ಪ್ರಯಾಣದ ದರ ಗರಿಷ್ಠ 3 ಯೂರೋ (ಅಂದಾಜು

    READ MORE
  • ಮಿಕಾ ಸಿಂಗ್‌ ಬಿಡುಗಡೆ; ಇಂದು UAE ಕೋರ್ಟಿಗೆ : ಭಾರತೀಯ ರಾಯಭಾರಿ

    ಅಬುಧಾಬಿ : ಲೈಂಗಿಕ ದುರ್ವರ್ತನೆ ತೋರಿದ ಕಾರಣಕ್ಕೆ ಬಂಧಿಸಲ್ಪಟ್ಟಿದ್ದ ಭಾರತೀಯ ಪಾಪ್‌ ಸ್ಟಾರ್‌ ಮಿಕಾ ಸಿಂಗ್‌ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಯುಎಇ ಭಾರತೀಯ ರಾಯಭಾರಿ ನವದೀಪ್‌ ಸಿಂಗ್‌ ಸೂರಿ ತಿಳಿಸಿದ್ದಾರೆ. 17 ವರ್ಷ ಪ್ರಾಯದ ಬ್ರಝಿಲ್‌ನ ಅಪ್ರಾಪ್ತ ವಯಸ್ಸಿನ ಬಾಲಕಿಯ ಆಕ್ಷೇಪಾರ್ಹ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್‌ ಮಾಡಿದ್ದ ಮಿಕಾ ಸಿಂಗ್‌ ವಿರುದ್ಧ ಬಾಲಕಿಯು ನೀಡಿದ್ದ ದೂರಿನ ಮೇರೆಗೆ ಆತನನ್ನು ಬಂಧಿಸಲಾಗಿತ್ತು. ಮಿಕಾ ಸಿಂಗ್‌ ರನ್ನು ಇಂದು ಶುಕ್ರವಾರ ಸ್ಥಳೀಯ ಕೋರ್ಟಿಗೆ ಹಾಜರುಪಡಿಸಲಾಗುವುದು ಎಂದು ನವದೀಪ್‌ ಸಿಂಗ್‌

    READ MORE
  • ಭಾರತ-ಪಾಕ್‌ ವ್ಯಾಪಾರ ವಹಿವಾಟು ಪ್ರಮಾಣ ಅತ್ಯಲ್ಪ: ವಿಶ್ವಬ್ಯಾಂಕ್‌

    ಇಸ್ಲಾಮಾಬಾದ್‌ : ‘ಭಾರತ ಮತ್ತು ಪಾಕಿಸ್ಥಾನದ ನಡುವಿನ ವ್ಯಾಪಾರ ವಹಿವಾಟು ಪ್ರಕೃತ ಎರಡು ಶತಕೋಟಿ ಡಾಲರ್‌ಗಿಂತ ಸ್ವಲ್ಪವೇ ಹೆಚ್ಚಿದೆ; ಆದರೆ ಇದು ಸಹಜ ಸಾಧ್ಯತೆಯ ಪ್ರಮಾಣಕ್ಕಿಂತ ಎಷ್ಟೋ ಕಡಿಮೆ ಇದೆ. ಅಂತೆಯೇ ಇದು 37 ಶತಕೋಟಿ ಡಾಲರ್‌ ಮಟ್ಟದ ವರೆಗೂ ಹೋಗಬೇಕಾಗಿದೆ’ ಎಂದು ವಿಶ್ವ ಬ್ಯಾಂಕ್‌ ತನ್ನ ವರದಿಯಲ್ಲಿ ಹೇಳಿದೆ. ‘ಆದರೆ ಇದನ್ನು ಸಾಧಿಸ ಬೇಕಾದರೆ ಉಭಯ ದೇಶಗಳು ತಮ್ಮ ನಡುವಿನ ಕೃತಕ ಅಡೆತಡೆಗಳನ್ನು ತೊಡೆದು ಹಾಕಬೇಕಿದೆ; ಸಂಪರ್ಕ ಕೊರತೆಯನ್ನು ನಿವಾರಿಸಿಕೊಳ್ಳಬೇಕಿದೆ; ವಿಶ್ವಾಸದ ಕೊರತೆಯನ್ನು ತುಂಬಬೇಕಿದೆ ಮತ್ತು

    READ MORE

ತಾಜಾ ಸುದ್ದಿಗಳು

ಕ್ರೀಡೆ

ಚಲನಚಿತ್ರ

ಹಣಕಾಸು