ಭಾರತ-ಪಾಕ್‌ ವ್ಯಾಪಾರ ವಹಿವಾಟು ಪ್ರಮಾಣ ಅತ್ಯಲ್ಪ: ವಿಶ್ವಬ್ಯಾಂಕ್‌

ಭಾರತ-ಪಾಕ್‌ ವ್ಯಾಪಾರ ವಹಿವಾಟು ಪ್ರಮಾಣ ಅತ್ಯಲ್ಪ: ವಿಶ್ವಬ್ಯಾಂಕ್‌

ಇಸ್ಲಾಮಾಬಾದ್‌ : ‘ಭಾರತ ಮತ್ತು ಪಾಕಿಸ್ಥಾನದ ನಡುವಿನ ವ್ಯಾಪಾರ ವಹಿವಾಟು ಪ್ರಕೃತ ಎರಡು ಶತಕೋಟಿ ಡಾಲರ್‌ಗಿಂತ ಸ್ವಲ್ಪವೇ ಹೆಚ್ಚಿದೆ; ಆದರೆ ಇದು ಸಹಜ ಸಾಧ್ಯತೆಯ ಪ್ರಮಾಣಕ್ಕಿಂತ ಎಷ್ಟೋ ಕಡಿಮೆ ಇದೆ. ಅಂತೆಯೇ ಇದು 37 ಶತಕೋಟಿ ಡಾಲರ್‌ ಮಟ್ಟದ ವರೆಗೂ ಹೋಗಬೇಕಾಗಿದೆ’ ಎಂದು ವಿಶ್ವ ಬ್ಯಾಂಕ್‌ ತನ್ನ ವರದಿಯಲ್ಲಿ ಹೇಳಿದೆ.

‘ಆದರೆ ಇದನ್ನು ಸಾಧಿಸ ಬೇಕಾದರೆ ಉಭಯ ದೇಶಗಳು ತಮ್ಮ ನಡುವಿನ ಕೃತಕ ಅಡೆತಡೆಗಳನ್ನು ತೊಡೆದು ಹಾಕಬೇಕಿದೆ; ಸಂಪರ್ಕ ಕೊರತೆಯನ್ನು ನಿವಾರಿಸಿಕೊಳ್ಳಬೇಕಿದೆ; ವಿಶ್ವಾಸದ ಕೊರತೆಯನ್ನು ತುಂಬಬೇಕಿದೆ ಮತ್ತು ಸಂಕೀರ್ಣವೂ ಅಪಾರದರ್ಶಕವೂ ಆಗಿರುವ ಸುಂಕ ರಹಿತ ವಾಣಿಜ್ಯ ಉಪಕ್ರಮಗಳನ್ನು ಕೈಗೊಳ್ಳಬೇಕಿದೆ’ ಎಂದು ವಿಶ್ವ ಬ್ಯಾಂಕ್‌ ಹೇಳಿದೆ.

‘ಗ್ಲಾಸ್‌ ಹಾಫ್ ಫ‌ುಲ್‌ : ಪ್ರಾಮಿಸ್‌ ಆಫ್ ರೀಜಿನಲ್‌ ಟ್ರೇಡ್‌ ಇನ್‌ ಸೌತ್‌ ಏಶ್ಯ’ ಎಂಬ ಶೀರ್ಷಿಕೆಯ ವರದಿಯನ್ನು ವಿಶ್ವ ಬ್ಯಾಂಕ್‌ ನಿನ್ನೆ ಬುಧವಾರ ಬಿಡುಗಡೆಗೊಳಿಸಿದೆ.

‘ದಕ್ಷಿಣ ಏಶ್ಯ ರಾಷ್ಟ್ರಗಳೊಂದಿಗೆ ವಾಣಿಜ್ಯ ವ್ಯವಹಾರ ಪ್ರಮಾಣ ಪ್ರಕೃತ 5.1 ಬಿಲಿಯ ಡಾಲರ್‌ ಇದೆ; ಇದನ್ನು 39.7 ಬಿಲಿಯನ್‌ ಡಾಲರ್‌ ವರೆಗೆ ಒಯ್ಯಬಹುದಾಗಿದೆ ‘ ಎಂದು ಡಾನ್‌ ವಿಶ್ವ ಬ್ಯಾಂಕ್‌ ವರದಿಯನ್ನು ಉಲ್ಲೇಖೀಸಿ ವರದಿ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos