ಮಿಕಾ ಸಿಂಗ್‌ ಬಿಡುಗಡೆ; ಇಂದು UAE ಕೋರ್ಟಿಗೆ : ಭಾರತೀಯ ರಾಯಭಾರಿ

ಮಿಕಾ ಸಿಂಗ್‌ ಬಿಡುಗಡೆ; ಇಂದು UAE ಕೋರ್ಟಿಗೆ : ಭಾರತೀಯ ರಾಯಭಾರಿ

ಅಬುಧಾಬಿ : ಲೈಂಗಿಕ ದುರ್ವರ್ತನೆ ತೋರಿದ ಕಾರಣಕ್ಕೆ ಬಂಧಿಸಲ್ಪಟ್ಟಿದ್ದ ಭಾರತೀಯ ಪಾಪ್‌ ಸ್ಟಾರ್‌ ಮಿಕಾ ಸಿಂಗ್‌ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಯುಎಇ ಭಾರತೀಯ ರಾಯಭಾರಿ ನವದೀಪ್‌ ಸಿಂಗ್‌ ಸೂರಿ ತಿಳಿಸಿದ್ದಾರೆ.

17 ವರ್ಷ ಪ್ರಾಯದ ಬ್ರಝಿಲ್‌ನ ಅಪ್ರಾಪ್ತ ವಯಸ್ಸಿನ ಬಾಲಕಿಯ ಆಕ್ಷೇಪಾರ್ಹ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್‌ ಮಾಡಿದ್ದ ಮಿಕಾ ಸಿಂಗ್‌ ವಿರುದ್ಧ ಬಾಲಕಿಯು ನೀಡಿದ್ದ ದೂರಿನ ಮೇರೆಗೆ ಆತನನ್ನು ಬಂಧಿಸಲಾಗಿತ್ತು.

ಮಿಕಾ ಸಿಂಗ್‌ ರನ್ನು ಇಂದು ಶುಕ್ರವಾರ ಸ್ಥಳೀಯ ಕೋರ್ಟಿಗೆ ಹಾಜರುಪಡಿಸಲಾಗುವುದು ಎಂದು ನವದೀಪ್‌ ಸಿಂಗ್‌ ಸೂರಿ ತಿಳಿಸಿದ್ದಾರೆ. ಮಿಕಾ ಸಿಂಗ್‌ ರನ್ನು ಯುಎಇ ಕಾಲಮಾನ ಗುರುವಾರ ರಾತ್ರಿ 11.30ಕ್ಕೆ ಬಿಡುಗಡೆಗೊಳಿಸಲಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos