ಬಾಗಲಕೋಟೆ: ವಿಜಯಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ಯತ್ನಾಳ ಅವರು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ.. ಈಗಾಗಲೇ ಚುನಾವಣೆ ಸಂದರ್ಭದಲ್ಲಿ ಅವರ ಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂಬ ಕಾರಣಕ್ಕೆ ದೂರ ದಾಖಲಾಗಿತ್ತು. ಮತ್ತೆ ಇದೀಗ ಬಸವರಾಜ್ ಯತ್ನಾಳ ಪಾಟೀಲ್ ಅವರ ಮೇಲೆ ದೂರು ದಾಖಲಾಗಿದೆ.
ಹೌದು, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಾಗಲಕೋಟೆಯ ನವನಗರದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಸಚಿವ ಶಿವಾನಂದ ಪಾಟೀಲ್ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ ಹಿನ್ನಲೆ ಕಾರ್ಮಿಕ ನಿರೀಕ್ಷಕ ರಮೇಶ್ ಭೀಮಪ್ಪ ಸಿಂದಗಿ ದೂರು ನೀಡಿದ್ದಾರೆ. ಈ ಮೂಲಕ ಕಳೆದ ಒಂದು ವಾರದೊಳಗೆ ಎರಡನೇ ಪ್ರಕರಣ ದಾಖಲಾದಂತಾಗಿದೆ.
ಇದನ್ನೂ ಓದಿ: ಪ್ರಜ್ವಲ್ ವಿರುದ್ಧ ಸರ್ಕಾರ ಎಫ್ಐಆರ್ ಮಾಡಲು ಯಾಕೆ ಹಿಂದೆಟು ಹಾಕಿದ್ದು?: ಪ್ರಹ್ಲಾದ್ ಜೋಶಿ
ಏ.29ರಂದು ನವನಗರದಲ್ಲಿ ನಡೆದ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಬಹಿರಂಗ ಭಾಷಣದ ವೇಳೆ ಮಾತನಾಡಿದ್ದ ಬಿಜೆಪಿ ಶಾಸಕ ಯತ್ನಾಳ್, ‘ ಸಚಿವ ಶಿವಾನಂದ ಪಾಟೀಲ್ ಅವರ ಚಾರಿತ್ರ್ಯಕ್ಕೆ ಧಕ್ಕೆ ತರುವಂತಹ, ಮತೀಯ ಭಾವನೆ ಕೆರಳಿಸಿದ ಹಿನ್ನೆಲೆಯಲ್ಲಿ ಕಾರ್ಮಿಕ ನಿರೀಕ್ಷಕ ರಮೇಶ್ ಭೀಮಪ್ಪ ಸಿಂದಗಿ ಅವರಿಂದ ಸರ್ಕಾರದ ಪರವಾಗಿ ದೂರು ದಾಖಲು ಮಾಡಿದ್ದು, ಐಪಿಸಿ ಮತ್ತು ಪ್ರಜಾ ಪ್ರಾತಿನಿಧ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.