ಪ್ರಜ್ವಲ್ ವಿರುದ್ಧ ಸರ್ಕಾರ ಎಫ್ಐಆರ್ ಮಾಡಲು ಯಾಕೆ ಹಿಂದೆಟು ಹಾಕಿದ್ದು?: ಪ್ರಹ್ಲಾದ್ ಜೋಶಿ

ಪ್ರಜ್ವಲ್ ವಿರುದ್ಧ ಸರ್ಕಾರ ಎಫ್ಐಆರ್ ಮಾಡಲು ಯಾಕೆ ಹಿಂದೆಟು ಹಾಕಿದ್ದು?: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಜೆಡಿಎಸ್ ನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸರ್ಕಾರ ಇಲ್ಲಿಯವರೆಗೂ ಯಾಕೆ ಎಫ್ ಐ ಆರ್ ಮಾಡಿಲ್ಲ? ನೀವು ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಎಷ್ಟು ಅಪರಾಧ ಮಾಡಿದ್ದಾರೆ ಅದರಲ್ಲಿ 50% ಕಾಂಗ್ರೆಸ್ ನವರ ಕೈವಾಡವಿದೆ. ತಕ್ಷಣವೇ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್ ಐ ಆರ್ ದಾಖಲಿಸಿ, ಪೆನ್ ಡ್ರೈವ್ಗಳನ್ನು ಪರಿಶೀಲನೆ ಮಾಡಿ ಸೂಕ್ತ ಕ್ರಮ ಯಾಕೆ ಕೈಗೊಂಡಿಲ್ಲ ಎಂದು ಮತ್ತೆ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.

ಈ ಪ್ರಕರಣ ಬೆಳಕಿಗೆ ಬಂದ ಕೂಡಲೇ ಸರ್ಕಾರ ಎಫ್ ಐಆರ್ ಹಾಕಿಸಿ ಪರಿಶೀಲನೆ ಮಾಡಿ ಪ್ರಜ್ವಲ್ ರೇವಣ್ಣ ಹೊರಗೆ ಹೋಗಬಾರದು ಎಂದು ನಿರ್ಬಂಧ ಹಾಕಬಹದಾಗಿತ್ತು. ಏ.21ರಂದು ಪ್ರಕರಣ ಗಮನಕ್ಕೆ ಬಂದಿದ್ದರೂ ಎಫ್ ಐಆರ್ ಹಾಕಲು ಏಪ್ರಿಲ್ 28ರವರೆಗೆ ತೆಗೆದುಕೊಂಡಿದ್ದೇಕೆ ಎಂದು ಕೇಳಿದರು.

ಇದನ್ನೂ ಓದಿ: ಕುಮಾರಸ್ವಾಮಿಗೆ ನನ್ನನ್ನು ನೆನಪಿಸಿಕೊಂಡಿಲ್ಲ ಅಂದ್ರೆ ನಿದ್ರೆ ಬರಲ್ಲ: ಡಿಕೆಶಿ

ಸಾರ್ವಜನಿಕ ಜೀವನದಲ್ಲಿ ಆರೋಪಗಳು ಸಾಕಷ್ಟು ಬರುತ್ತದೆ. ಆರೋಪಗಳ ಸತ್ಯಾಸತ್ಯತೆ ಬಗ್ಗೆ ವಿವರ ನೀಡಬೇಕಾಗುತ್ತದೆ. 5 ವರ್ಷಗಳ ಹಿಂದೆ ಕಾಂಗ್ರೆಸ್ ನವರು ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದ್ದರು. ಪ್ರಜ್ವಲ್ ರೇವಣ್ಣನ ಚಿಕ್ಕಪ್ಪನನ್ನು ಮುಖ್ಯಮಂತ್ರಿ ಮಾಡಿದ್ದರು, ಹೆಚ್ ಡಿ ರೇವಣ್ಣನವರನ್ನು ಸಚಿವ ಮಾಡಿದ್ದರು. ಇಂದು ನಾವು ಬಿಜೆಪಿಯವರು ಜೆಡಿಎಸ್ ಜೊತೆ ಮಾಡಿಕೊಂಡಿರುವ ಮೈತ್ರಿ ಬಗ್ಗೆ ಟೀಕಿಸುತ್ತಿರುವುದು ಎಷ್ಟು ಸರಿ ಎಂದು ಪ್ರಹ್ಲಾದ್ ಜೋಶಿ ಕೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos