ಬೆಂಗಳೂರು: ಲೋಕಸಭೆ ಚುನಾವಣೆ 2024ರ ಮೊದಲನೇ ಹಂತದ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ನಗರ ಸೇರಿ 14 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.
ಸಾಮಾನ್ಯ ಜನರಂತೆ ಸರತಿ ಸಾಲಿನಲ್ಲಿ ನಿಂತು ಸಿನಿ ತಾರೆಯರು ಮತದಾನ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಅವರು ಬೆಂಗಳೂರಿನ ಪುಟ್ಟೇನಹಳ್ಳಿಯ ಆಕ್ಸ್ಫರ್ಡ್ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ಕುಟುಂಬದ ಜೊತೆ ಆಗಮಿಸಿದ ಅವರು ಮತ ಹಾಕಿದ್ದಾರೆ. ಆ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
‘ದೇಶದ ಮೇಲೆ ಪ್ರೀತಿ ಇರುವ ಎಲ್ಲರೂ ಮತ ಹಾಕಬೇಕು. ಕೆಲವರು ಎಷ್ಟೇ ಹೇಳಿದ್ರೂ ಬಂದು ಮತ ಹಾಕುವುದಿಲ್ಲ. ಅಂತವರಿಗೆ ನಾವು ಏನು ಮಾಡೋಕೆ ಆಗುತ್ತೆ? ವೋಟ್ ಹಾಕಿದವ್ರಿಗೂ ಒಳ್ಳೆಯದಾಗುತ್ತಿದೆ, ವೋಟ್ ಹಾಕದೆ ಇರುವವರಿಗೂ ಒಳ್ಳೆಯದಾಗುತ್ತಿದೆ. ಯಾರು ಬಂದು ಮತ ಹಾಕುತ್ತಾರೆ ಅವರಿಗೆ ಗೌರವ ಕೊಡೋಣ. ಎಲ್ಲರೂ ಕಡ್ಡಾಯವಾಗಿ ಮತಹಾಕಬೇಕು’ ಎಂದು ಸುದೀಪ್ ಅವರು ಮನವಿ ಮಾಡಿಕೊಂಡಿದ್ದಾರೆ.