ಹಸೆ ಮಣಿ ಏರಿದ ಮಾನ್ವಿತಾ

ಹಸೆ ಮಣಿ ಏರಿದ ಮಾನ್ವಿತಾ

ಚಿಕ್ಕಮಗಳೂರು: ಕೆಂಡಸಂಪಿಗೆ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ, ನಂತರ ಕನ್ನಡ ಚಿತ್ರರಂಗದಲ್ಲಿ ಟಗರು ಇನ್ನಿತರ ಚಿತ್ರಗಳಲ್ಲಿ ನಟನೆ ಮಾಡುವ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ನಟಿ ಮಾನ್ವಿತಾ ಅವರು ಇಂದು (ಮೇ 01 ಬುಧವಾರ) ತಮ್ಮ ಬಹುದಿನದ ಗೆಳೆಯನನ್ನು ಮದುವೆಯಾಗಿದ್ದಾರೆ.

ಹೌದು, ನಟಿ ಮಾನ್ವಿತಾ ಕಾಮತ್ ಅವರ ವಿವಾಹ ಇಂದು (ಮೇ 1) ನಡೆದಿದೆ. ಕುಟುಂಬದವರು, ಆಪ್ತರು ಹಾಗೂ ಚಿತ್ರರಂಗದವರ ಸಮ್ಮುಖದಲ್ಲಿ ಅರುಣ್ ಅವರು ಮಾನ್ವಿತಾಗೆ ತಾಳಿ ಕಟ್ಟಿದ್ದಾರೆ. ಕೊಂಕಣಿ ಸಂಪ್ರದಾಯದಂತೆ ವಿವಾಹ ಸಂಪ್ರದಾಯಗಳು ಜರುಗಿವೆ. ಚಿಕ್ಕಮಗಳೂರಿನಲ್ಲಿ ಕಳಸದಲ್ಲಿರುವ 500 ವರ್ಷ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ಮದುವೆ ಸಮಾರಂಭ ನಡೆದಿದೆ ಅನ್ನೋದು ವಿಶೇಷ. ಮಾನ್ವಿತಾ ಅವರು ಸೀರೆಯಲ್ಲಿ ಮಿಂಚಿದ್ದಾರೆ. ಮಾನ್ವಿತಾ ಕಾಮತ್ ಅವರು ವಿವಾಹದ ಬಳಿಕವೂ ಚಿತ್ರರಂಗದಲ್ಲಿ ಮುಂದುವರಿಯಲಿದ್ದಾರೆ. ಇದಕ್ಕೆ ಅರುಣ್ ಅವರಿಂದ ಯಾವುದೇ ವಿರೋಧ ಇಲ್ಲ ಎಂದು ಹೇಳಿದ್ದಾರೆ..

ಫ್ರೆಶ್ ನ್ಯೂಸ್

Latest Posts

Featured Videos