ಬೆಂಗಳೂರು: ಪುನೀತ್ ರಾಜಕುಮಾರ್ ಮರಣ ಹೊಂದಿದ ನಂತರ ಅವರು ಅಭಿನಯದ ಚಿತ್ರಗಳು ಮತ್ತೆ ಇದೀಗ ರೀರಿಲೀಸ್ ಆಗುತ್ತಿದ್ದು, ಪುನೀತ್ ಅಭಿಮಾನಿಗಳಲ್ಲಿ ಸಂತಸ ಹೊರಹೊಮ್ಮಿದೆ. ಈಗಾಗಲೇ ಪುನೀತ್ ರಾಜಕುಮಾರ್ ಅಭಿನಯದ ಜಾಕಿ ಸಿನಿಮಾ ಮತ್ತೊಮ್ಮೆ ದೊಡ್ಡ ಪರದೆ ಮೇಲೆ ರಿಲೀಸ್ ಆಗಿದ್ದು ಅಭಿಮಾನಿಗಳು ಪುನೀತ್ ರಾಜಕುಮಾರ್ ನನ್ನು ಮತ್ತೊಮ್ಮೆ ಕಣ್ತುಂಬಿಕೊಂಡಿದ್ದರು.
ಇದೀಗ ಮತ್ತೆ ಪುನೀತ್ ರಾಜಕುಮಾರ್ ನಟನೆಯ ಅಂಜನಿಪುತ್ರ ರೀರಿಲೀಸ್ ಆಗುತ್ತಿದ್ದು, ಅಪ್ಪು ಅಭಿಮಾನಿಗಳಲ್ಲಿ ಸಂತಸ ಹೆಚ್ಚಾಗಿದೆ. ಹೌದು, ಇದೆ ಮೇ 10ರಂದು ಪುನೀತ್ ರಾಜಕುಮಾರ್ ಮತ್ತು ರಶ್ಮಿಕ ಮಂದಣ್ಣ ನಟನೆಯ ಅಂಜನಿಪುತ್ರ ರೀರಿಲೀಸ್ ಆಗುತ್ತಿದೆ. ಇದನ್ನೂ ಓದಿ: ಮೋದಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಸಿ.ಎಂ.ಸಿದ್ದರಾಮಯ್ಯ
ಈ ಕಮರ್ಷಿಯಲ್ ಎಂಟರ್ಟೈನರ್ ಅನ್ನು ಎ ಹರ್ಷ ನಿರ್ದೇಶಿಸಿದ್ದು, ಎಂಎನ್ ಕುಮಾರ್ ನಿರ್ಮಿಸಿದ್ದಾರೆ. 2017ರ ಡಿಸೆಂಬರ್ 21ರಂದು ಚಿತ್ರ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಪವರ್ ಸ್ಟಾರ್ ಜೊತೆಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ.