ಕಾಂಗ್ರೆಸ್‌ ನಾಯಕರ ಮೇಲೆ ಸುಳ್ಳು ಆಪಾದನೆ

ಕಾಂಗ್ರೆಸ್‌ ನಾಯಕರ ಮೇಲೆ ಸುಳ್ಳು ಆಪಾದನೆ

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಅವರ ಕಾರು ಚಾಲಕ ಕಾಂಗ್ರೆಸ್‌ ನಾಯಕರಿಗೆ ಪೆನ್ ಡ್ರೈವ್‌ ನೀಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಇದು ಅಪ್ಪಟ ಸುಳ್ಳು ಹಾಗೂ ಆಧಾರರಹಿತ ಆರೋಪ ಎಂದು ಎಐಸಿಸಿ ಮಾಧ್ಯಮ, ಸಂವಹನ ವಿಭಾಗದ ಅಧ್ಯಕ್ಷೆ ಸುಪ್ರಿಯಾ ಶ್ರಿನಾಟೆ ಹೇಳಿದ್ದಾರೆ.

ನಗರದಲ್ಲಿಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಪಾಪದ ಕೃತ್ಯಗಳ ಬಗ್ಗೆ ಗೊತ್ತಿದ್ದರೂ ನಿರ್ಲಜ್ಜ ಬಿಜೆಪಿ ನಾಯಕರು ಇನ್ನೂ ಸುಳ್ಳು ಹೇಳುತ್ತಿದ್ದಾರೆ. ಇಂತಹ ಜಾನುವಾರು ಗುಣದ, ರಾಕ್ಷಸನನ್ನು ಇನ್ನೂ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರ.

ದೇಶದ ಸಮಸ್ತ ಜನತೆ ಮೋದಿ ಅವರಲ್ಲಿ ಪ್ರಶ್ನೆ ಮಾಡುತ್ತೇವೆ. ಈತನ ಕೃತ್ಯಗಳ ಬಗ್ಗೆ ಗೊತ್ತಿದ್ದರೂ ಹೇಗೆ ಮೌನವಾಗಿ ಇದ್ದರೀ? ಅವರ ಜೊತೆಯಲ್ಲಿ ನಿಲ್ಲುತ್ತೀರಿ, ಅವರ ಪರವಾಗಿ ಪ್ರಚಾರ ಮಾಡುತ್ತೀರಿ. ಇದೆಲ್ಲಾ ಹೇಗೆ ಸಾಧ್ಯ. ಮಣಿಪುರದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಹಲ್ಲೆ ಸೇರಿದಂತೆ ಅನೇಕ ಕುಕೃತ್ಯಗಳು ನಡೆದರು ಪ್ರಧಾನಿ ಮೋದಿ ಅವರು ಮಹಿಳೆಯರ ಪರವಾಗಿ ನಿಲ್ಲುವುದಿಲ್ಲ ಬದಲಾಗಿ ಬಿಜೆಪಿ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಪರವಾಗಿ ನಿಲ್ಲುತ್ತಾರೆ.

ಇದನ್ನೂ ಓದಿ: ಮಹಿಳೆಯರು ಅತ್ತು ಕರೆದರೂ ಮೋದಿ ಅವರಿಗೆ ಕೇಳಿಸುವುದಿಲ್ಲ: ಸುಪ್ರಿಯಾ ಶ್ರಿನಾಟೆ

ಕುಲದೀಪ್ ಸಿಂಗ್‌ ಸೆಂಗರ್ ಎನ್ನುವ ಶಾಸಕ ಹುಡುಗಿಯನ್ನು ಬಲತ್ಕಾರ ನಡೆಸಿ, ಕೊಲ್ಲುತ್ತಾನೆ ಆಗಲೂ ಮೋದಿ ಅವನ ಪರವಾಗಿ ನಿಲ್ಲುತ್ತಾರೆ. ಅಲಹಬಾದ್‌ ಹೈ ಕೋರ್ಟ್‌ ಮಧ್ಯ ಪ್ರವೇಶ ಮಾಡಿದ ನಂತರ ಕ್ರಮ ತೆಗೆದುಕೊಳ್ಳಲಾಯಿತು.

ಮಹಿಳಾ ಕುಸ್ತಿಪಟುಗಳು ಬ್ರಿಜ್‌ ಭೂಷಣ್‌ ಸಿಂಗ್‌ ನಡೆಸಿದ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಿದರು ಪ್ರಧಾನಿಗಳ ಕಣ್ಣು ತೆರೆಯಲಿಲ್ಲ. ಈತನ ವಿರುದ್ದ ಕ್ರಮ ತೆಗೆದುಕೊಳ್ಳಲಿಲ್ಲ. ಸ್ಮೃತಿ ಇರಾನಿ ಮೌನವ್ರತ ಆಚರಿಸುತ್ತಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್‌ ಮೇಲೆ ನೋಟಿಸ್‌ ಅನ್ನು ವಿರೋಧ ಪಕ್ಷದ ನಾಯಕರಿಗೆ ನೀಡುತ್ತಾರೆ. ಈಗ ಏಕೆ ಸುಮ್ಮನೆ ಕುಳಿತುಕೊಂಡಿದ್ದಾರೆ. ಈಗ ಏಕೆ ನೋಟಿಸ್‌ ನೀಡುತ್ತಿಲ್ಲ.

ಮಹಿಳಾ ಆಯೋಗದವರೇ ಮೋದಿ ಅವರಿಗೆ ಪತ್ರ ಬರೆಯಿರಿ, ಓಡಿ ಹೋಗಲು ಸಹಕರಿಸಿದವರಿಗೆ ಪತ್ರ ಬರೆಯಿರಿ. ಜೆ.ಪಿ ನಡ್ಡಾ ಅವರಿಗೆ, ಅಮಿತ್‌ ಶಾ ಅವರಿಗೆ ಧೈರ್ಯ ಇದ್ದರೇ ಪತ್ರ ಬರೆಯಿರಿ.  ಇದೇನಾ ನಾರಿಶಕ್ತಿ, ನಾರಿ ವಂದನೆ, ಬೇಟಿ ಬಚಾವೋ, ಬೇಟಿ ಪಡಾವೋ ಎಂದರು.

 

 

ಫ್ರೆಶ್ ನ್ಯೂಸ್

Latest Posts

Featured Videos