ಬೆಂಗಳೂರು: ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ತಮ್ಮ ಪತಿ ಜಗದೀಶ್ ಜೊತೆಗೆ ಮತಗಟ್ಟೆಗೆ ಆಗಮಿಸಿ ಮತದಾವ ಹಕ್ಕು ಚಲಾಯಿಸಿದ್ದಾರೆ. ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಇಂದು ಬೆಳಗ್ಗೆ ವೋಟಿಂಗ್ ಬೂತ್‌ಗೆ ಬಂದಾಗ ಅರ್ಧ ಗಂಟೆ ಮತದಾದರ ಸಾಲಿನಲ್ಲಿ ನಿಂತು ತದ ನಂತರ ಈ ನಟಿ ವೋಟ್ ಹಾಕಿದ್ದಾರೆ.
ಮತದಾನ ಮಾಡಿದ ನಂತರ ಮಾತನಾಡಿದ ನಟಿ ಅಮೂಲ್ಯ “ತುಂಬಾ ಕ್ಯೂ ಇದೆ. ಇಷ್ಟು ಜನ ನೋಡಿ ಖುಷಿಯಾಯ್ತು. ಮಕ್ಕಳಿರೋದ್ರಿಂದ ರಿಕ್ವೆಸ್ಟ್ ಮಾಡಿದೆ, ಬೇಗ ಬಿಟ್ರು. ಆದ್ರೂ ಅರ್ಧ ಗಂಟೆ ಇದ್ದೆ. ಇದು ನಮ್ಮ ಹಕ್ಕು. ನಾವು ವೋಟ್ ಮಾಡಲೇಬೇಕು. ಸಮಯ ವ್ಯರ್ಥ ಮಾಡದೆ, ವೋಟ್ ಮಾಡಬೇಕು. ಈ ಬಾರಿ ಹೆಚ್ಚು ಮತದಾನ ಆಗುತ್ತೆ ಅಂದ್ಕೊಂಡಿದ್ದೇನೆ” ಎಂದರು.