ಯುವತಿಯರೇ ಎಚ್ಚರ..!

ಯುವತಿಯರೇ ಎಚ್ಚರ..!

ಕಲಬುರಗಿ, ನ. 30 : ಯುವತಿಯರೇ ಎಚ್ಚರ. ಯಾಕಂದ್ರೆ ಇದೀಗ ವಿಕೃತ ಮನಸ್ಸಿನ ಕಾಮುಕರ ಹಾವಳಿ ಜಾಸ್ತಿ. ಯುವತಿರಷ್ಟೇ ಅಲ್ಲದೇ ಮಂಗಳಮುಖಿಯರನ್ನು ಸಹ ಕಾಮುಕಾರು ಕಾಡುತ್ತಿದ್ದಾರೆ.

ಕಲಬುರಗಿ ರೈಲು ನಿಲ್ದಾಣದಿಂದ ಹೋಗುವ ಒಂಟಿ ಯುವತಿ ಮತ್ತು ಮಹಿಳೆಯರೇ ಕಾಮುಕನ ಟಾರ್ಗೆಟ್ ಆಗಿದ್ದು, ರೈಲಿನಲ್ಲಿ ಹತ್ತುತ್ತಿದ್ದಂತೆ ಅವರ ಪಕ್ಕದಲ್ಲಿ ಹೋಗಿ ಕುಳಿತು ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಾನೆ. ಈತನ ಕಾಮದಾಟ ನೋಡಿದ ಇನ್ನೋರ್ವ ಪ್ರಯಾಣಿಕ ತಮ್ಮ ಮೊಬೈಲ್ನಲ್ಲಿ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ.
ಯುವತಿಗೆ ಕಿರುಕುಳ ನೀಡಿದ ವ್ಯಕ್ತಿ ಯಾರು ಎಂಬುದು ಇದೀಗ ಸದ್ಯ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಕೂಡಲೇ ಆ ಕಾಮುಕನನ್ನು ಪೊಲೀಸರು ಹಿಡಿದು ತಕ್ಕ ಪಾಠ ಕಲಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos