ಹಾಸನ: ದೇಶದಾದ್ಯಂತ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರಮುಖವಾಗಿ ಪೆನ್ ಡ್ರೈವ್ ನಲ್ಲಿರುವಂತಹ ವಿಡಿಯೋಗಳು ಹಾಸನದಲ್ಲಿರುವ ಆರ್‌ಸಿ ರಸ್ತೆಯಲ್ಲಿರುವ ಪ್ರಜ್ವಲ್ ರೇವಣ್ಣ ಅವರ ನಿವಾಸದ ಕೊಠಡಿಗಳಲ್ಲಿ ಆ ಎಲ್ಲಾ ವಿಡಿಯೋಗಳನ್ನು ರೆಕಾರ್ಡ್ ಮಾಡಲಾಗಿದೆ ಎಂಬ ಚರ್ಚೆ ಹಾಸನದಲ್ಲಿ ದೊಡ್ಡದಾಗಿ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
ಹೌದು, ಪ್ರಜ್ವಲ್ ರೇವಣ್ಣ ಅವರ ಮೇಲೆ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿರುವ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಪ್ರಕರಣವನ್ನ ಸರ್ಕಾರ ಈಗ ಎಸ್ಐಟಿ ತನಿಖೆಗೆ ವಹಿಸಿದ್ದು, ಸದ್ಯ ಪ್ರಕರಣದ ತನಿಖೆಯ ಬೆನ್ನಟ್ಟಿದೆ. ಇದರ ಮಧ್ಯೆ ಮೊಬೈಲ್ನಲ್ಲಿ ರೆಕಾರ್ಡ್ ಆಗಿರುವ ವಿಡಿಯೋಗಳು ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಲಾಗಿದ್ದ ಹಾಸನದ ಆರ್‌ಸಿ ರಸ್ತೆಯಲ್ಲಿರುವ ಎಂಪಿ ಗೆಸ್ಟ್ ಹೌಸ್ ರೂಂ ನಲ್ಲಿ ಎಂಬ ಅನುಮಾನಗಳು ಇದೀಗ ಹುಟ್ಟಿಕೊಂಡಿವೆ.
ಯೆಸ್.. ಮಾಜಿ ಪ್ರದಾನಿ ದೇವೇಗೌಡರು ಹಾಸನದ ಸಂಸದರಾಗಿದ್ದಾಗ ಸರ್ಕಾರದಿಂದ ನಿವೇಶನ ಮಂಜೂರಾಗಿದ್ದು, ಅವರ ವಾಸ್ತವ್ಯಕ್ಕಾಗಿ ಕೆಳ ಅಂತಸ್ತು ಹಾಗೂ ಮೊದಲ ಮಹಡಿ ಒಳಗೊಂಡ 2019ರಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಒಟ್ಟು 4 ಕೊಠಡಿಗಳನ್ನು ನಿವಾಸ ಒಳಗೊಂಡಿದ್ದು, ನೆಲ ಅಂತಸ್ತಿನಲ್ಲಿ ಎರಡು ಹಾಗೂ ಮೊದಲ ಮಹಡಿಯಲ್ಲಿ ಎರಡು ಕೊಠಡಿಗಳಿವೆ. ದೇವೇಗೌಡರ ಸಲುವಾಗಿಯೇ ಲಿಫ್ಟ್ ಅಳವಡಿಕೆ ಮಾಡಿ ಮನೆ ನಿರ್ಮಾಣ ಮಾಡಲಾಗಿತ್ತು. ದೇವೇಗೌಡರು ಹಾಸನಕ್ಕೆ ಬಂದಾಗ ಹೆಚ್ಚಾಗಿ ಇದೇ ಗೆಸ್ಟ್ ಹೌಸ್ನಲ್ಲಿ ಉಳಿಯುತ್ತಿದ್ದರು.
ತಾವು ಸಂಸದರಾಗಿದ್ದವರೆಗೂ ಹಾಸನದ ಎಂಪಿ ಕ್ವಾಟ್ರಸ್ ದೇವೇಗೌಡರ ಅಧಿಕೃತ ನಿವಾಸವಾಗಿತ್ತು. ಬಳಿಕ ಸಂಸದರಾಗಿ ಪ್ರಜ್ವಲ್ ರೇವಣ್ಣ ಆಯ್ಕೆಯಾಗುತ್ತಲೇ ಪ್ರಜ್ವಲ್ಗೆ ಮನೆ ಹಸ್ತಾಂತರ ಮಾಡಲಾಗಿದ್ದು, ಹಾಸನಕ್ಕೆ ಬಂದಾಗ ಸಂಸದರ ನಿವಾಸದಲ್ಲೇ ಪ್ರಜ್ವಲ್ ವಾಸ್ತವ್ಯ ಹೂಡುತ್ತಿದ್ದರು. ಇದೀಗ ಚುನಾವಣಾ ಸಮಯದಲ್ಲಿ ಇದೇ ಮನೆಯಲ್ಲಿ ಪ್ರಜ್ವಲ್ ರೇವಣ್ಣ ನೆಲೆಸಿದ್ದರು. ಅಧಿಕಾರಿಗಳ ಸಭೆ ಸೇರಿದಂತೆ ಜೆಡಿಎಸ್ ಮುಖಂಡರ ಸಭೆಗಳನ್ನು ಪ್ರಜ್ವಲ್ ನಡೆಸುತ್ತಿದ್ದರು.