70 ವರ್ಷಗಳ ಬಗ್ಗೆ ಕೇಳುತ್ತಿದ್ದೀರಿ, 5 ವರ್ಷಗಳಲ್ಲಿ ನೀವೇನು ಮಾಡಿದ್ದೀರಿ; ಪ್ರಿಯಾಂಕಾ ಗಾಂಧಿ

70 ವರ್ಷಗಳ ಬಗ್ಗೆ ಕೇಳುತ್ತಿದ್ದೀರಿ, 5 ವರ್ಷಗಳಲ್ಲಿ ನೀವೇನು ಮಾಡಿದ್ದೀರಿ;  ಪ್ರಿಯಾಂಕಾ ಗಾಂಧಿ

ಮಿರ್ಜಾಪುರ್‌, ಮಾ.20, ನ್ಯೂಸ್ ಎಕ್ಸ್ ಪ್ರೆಸ್: ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ  ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

70 ವರ್ಷಗಳ ಕಾಂಗ್ರೆಸ್ ಆಡಳಿತ ಬಗ್ಗೆ ನೀವು ಪ್ರಶ್ನೆ ಕೇಳುತ್ತಿದ್ದೀರಿ. ಕಳೆದ 5 ವರ್ಷಗಳ ಕಾಲ ನೀವು ಅಧಿಕಾರ ನಡೆಸುತ್ತಿದ್ದೀರಿ. ಈ ವರ್ಷಗಳಲ್ಲಿ ನೀವೇನು ಮಾಡಿದ್ದೀರಿ? ಎಂದು ಪ್ರಿಯಾಂಕಾ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ವಾರಣಾಸಿ ಸಮೀಪದ ಮಿರ್ಜಾಪುರ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಪ್ರಿಯಾಂಕಾ, ಮಂಗಳವಾರ ಅಲ್ಲಿನ ವಿದ್ಯಾವಾಸಿನಿ ಮಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಪ್ರಿಯಾಂಕಾ ದೇವಾಲಯದೊಳಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿ ಸೇರಿದ್ದ ಜನರು ಹರ್ ಹರ್ ಮೋದಿ ಎಂದು ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ‘ರಾಹುಲ್ ರಾಹುಲ್’ ಎಂದು ಕೂಗಿ ದೇವಸ್ಥಾನದ ಗಂಟೆಗಳನ್ನು ಬಾರಿಸಿದ್ದಾರೆ.

ದೇವಾಲಯಕ್ಕೆ ಭೇಟಿ ನೀಡಿದ ನಂತರ ಪ್ರಿಯಾಂಕಾ, ಹಜರತ್ ಖ್ವಾಜಾ ಇಸ್ಮಿಲೆ ಕಿಶ್ಟಿ ದರ್ಗಾಗೆ ಭೇಟಿ ನೀಡಿದ್ದಾರೆ.

ಭಟೌಲಿ ಘಾಟ್ನಿಂದ ಗಂಗಾ ನದಿಯಲ್ಲಿ 15 ಕಿ.ಮೀ ದೋಣಿ ಪ್ರಯಾಣ ಮಾಡಿ ಮಂಗಳವಾರ ಸಂಜೆ ಮಿರ್ಜಾಪುರ್‌ನ ಸಿಂಧೋರಾಗೆ ತಲುಪಿದ್ದರು. ಅಲ್ಲಿಯೂ ಕೆಲವು ಮಂದಿ ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಆಮೇಲೆ ಅಲ್ಲಿದ ಪ್ರಿಯಾಂಕಾ ಸಣ್ಣ ದೋಣಿ ಮೂಲಕ ಚುವಾರ್ ತಲುಪಿ ರೋಡ್ ಶೋ ನಡೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos