ತನ್ನ ತಾಯಿ ವಯಸ್ಸಿನ ಮಹಿಳೆಯೊಂದಿಗೆ ಪ್ರಜ್ವಲ್  ಅಸಹ್ಯ ನೋಡಕ್ಕಾಗಲ್ಲ: ಡಿ.ಕೆ. ಸುರೇಶ್

ತನ್ನ ತಾಯಿ ವಯಸ್ಸಿನ ಮಹಿಳೆಯೊಂದಿಗೆ ಪ್ರಜ್ವಲ್  ಅಸಹ್ಯ ನೋಡಕ್ಕಾಗಲ್ಲ: ಡಿ.ಕೆ. ಸುರೇಶ್

ಬೆಂಗಳೂರು: ಕಂಡವರ ಮನೆ ಹೆಣ್ಣು ಮಕ್ಕಳ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜೆಡಿಎಸ್ ನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಕರ್ನಾಟಕ ರಾಜ್ಯ ಸರ್ಕಾರ ಈ ಪ್ರಕರಣವನ್ನು ಎಸ್ಐಟಿಗೆ ನೀಡಿದೆ. ಈಗಾಗಲೇ ಎಸ್ಐಟಿ ಅಧಿಕಾರಿಗಳು ಚುರುಕಿನ ತನಿಖೆಯನ್ನು ಮಾಡಿದ್ದಾರೆ.

ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪ್ರತಿಕ್ರಿಯೆ ನೀಡಿದ್ದು, ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋಗಳನ್ನು ನಾನು ಕೂಡ ನೋಡಿದ್ದೇನೆ, ಬಡ ಹೆಣ್ಣು ಮಕ್ಕಳ ಜೊತೆ ಚೆಲ್ಲಾಟವಾಡಿ ಅವರದೇ ಇಂಗಾಂಗಗಳನ್ನು ಅವರಿಗೆ ಗೊತ್ತಿಲ್ಲದ ಹಾಗೆ ಚಿತ್ರೀಕರಣ ಮಾಡಿ ಇಟ್ಟುಕೊಂಡಿದ್ದಾರೆ ಎಂದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶ್ಲೀಲ ವಿಡಿಯೋಗಳನ್ನು ನನ್ನ ಕಣ್ಣಿಂದ ನೋಡಲಾಗಲಿಲ್ಲ  ನಾನೂ ವಾಟ್ಸ್ ಆಪ್ ನಲ್ಲಿ ಬಂದಂತಹ ಪ್ರಜ್ವಲ್ ಅವರ ಕೆಲವು ಅಶ್ಲೀಲ್ ವಿಡಿಯೋಗಳನ್ನು ನೋಡಿದ್ದೇನೆ. ಅವರ ನೀಚ ಕೃತ್ಯದ ವಿಡಿಯೋವನ್ನು ಎರಡು ಕ್ಷಣವೂ ನೋಡಲು ಆಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಬ್ಬ ಹುಡುಗ ತನ್ನ ತಾಯಿ ವಯಸ್ಸಿನ ಮನೆಗೆಲಸದ ಮಹಿಳೆಯೊಂದಿಗೆ ನಡೆದುಕೊಂಡಿರುವುದು ಅಸಹ್ಯಕರ. ಆ ಅಸಹ್ಯವನ್ನು ಎರಡು ಕ್ಷಣವೂ ನೋಡಲು ಆಗಲಿಲ್ಲ. ಯಾವ ನಂಬಿಕೆ ಇಟ್ಟುಕೊಂಡು ಮಹಿಳೆಯರು ಕೆಲಸಕ್ಕೆ ಹೋಗುವುದು? ಎಂದು ಪ್ರಶ್ನಿಸಿದರು.

ಪ್ರಜ್ವಲ್ ರೇವಣ್ಣ ರಾಸಲೀಲೆ ವಿಡಿಯೋ ಪೆನ್ ಡ್ರೈವ್ ಮೊದಲು ಡಿಕೆ ಬ್ರದರ್ಸ್ ಕೈ ಸೇರಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್, ನಮಗೆ ವಿಷಯ ಗೊತ್ತಿದ್ದರೇ ಇನ್ನು ಮುಂಚೆಯೇ ಹೊರ ಬರುತ್ತಿತ್ತು. ಆರೋಪ ಮಾಡುವುದಕ್ಕಾಗಿ ನಮ್ಮ ಹೆಸರುಗಳನ್ನು ತರಲಾಗುತ್ತಿದೆ. ಗುಸು ಗುಸು ಸುದ್ದಿ ಹಾಸನದಲ್ಲಿ ಇತ್ತು. ಆದರೆ ಸೂಕ್ತ ದಾಖಲೆಗಳು ಇಲ್ಲದೇ ಮಾತನಾಡುವುದು ಸೂಕ್ತವಲ್ಲ ಎಂದರು.

 

ಫ್ರೆಶ್ ನ್ಯೂಸ್

Latest Posts

Featured Videos