ವರಮಹಾಲಕ್ಷ್ಮೀ ಹಬ್ಬದಲ್ಲಿ ಹೆಂಗಸರ ಸಡಗರ!

ವರಮಹಾಲಕ್ಷ್ಮೀ ಹಬ್ಬದಲ್ಲಿ ಹೆಂಗಸರ  ಸಡಗರ!

ಬೆಂಗಳೂರು: ಹೆಣ್ಣು ಮಕ್ಕಳಿಗೆ ಹಬ್ಬಗಳು ಬಂತೆಂದರೆ ಸಾಕು ಫುಲ್ ಸಡಗರದಿಂದ ಸಂಭ್ರಮಾಚರಣೆ ಮಾಡುತ್ತಾರೆ. ಅದರಲ್ಲಿ ಶ್ರಾವಣ ಮಾಸದಲ್ಲಿ ಬರುವಂತಹ ವರಮಹಾಲಕ್ಷ್ಮೀ ಹಬ್ಬದ ಆಚರಣೆಯಲ್ಲಂತೂ ಹೆಂಗಸರದೇ ಹೆಚ್ಚು ಸಡಗರ. ಹೆಣ್ಣು ಮಕ್ಕಳು ಯಾವತರಹ ಅಲಂಕಾರ ಮಾಡುತ್ತಾರೊ ಅದೇ ತರಹ ವರಮಹಾಲಕ್ಷ್ಮೀಯನ್ನು ತಯಾರು ಮಾಡುತ್ತಾರೆ.
ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮೀ ವ್ರತವನ್ನು ಆಚರಣೆ ಮಾಡಲಾಗುತ್ತದೆ. ಮಹಿಳೆಯರು ಈ ದಿನ ಕಲಶವನ್ನಿಟ್ಟು ಅದನ್ನು ಲಕ್ಷ್ಮೀಯಂತೆ ಅಲಂಕರಿಸಿ ವಿಶೇಷವಾಗಿ ಪೂಜಿಸುತ್ತಾರೆ.
ತಾಮ್ರ ಅಥವಾ ಬೆಳ್ಳಿಯ ಕಲಶ ಇಟ್ಟು ಅದಕ್ಕೆ ನೀರು ತುಂಬಿಸಿ ಸ್ವಲ್ಪ ಅಕ್ಕಿ ಸೇರಿಸಿ ಜೊತೆಗೆ ಮನೆಯಲ್ಲಿರುವ ಬೆಳ್ಳಿ, ಚಿನ್ನ ಅಥವಾ ಬಳಕೆಯಲ್ಲಿರುವ ನಾಣ್ಯಗಳನ್ನು ಸೇರಿಸಬೇಕು. ಕಲಶದೊಳಗೆ ವೀಳ್ಯದೆಲೆಗಳು, ಅಡಿಕೆ, ಹಣ್ಣು, ಖರ್ಜೂರ ಇತ್ಯಾದಿಗಳನ್ನು ಬಳಸುತ್ತಾರೆ.
ಮಾವಿನ ಎಲೆಗಳ ಮೇಲೆ ತೆಂಗಿನಕಾಯಿ ಇಡಬೇಕು. ಆ ತೆಂಗಿನಕಾಯಿಯ ಜುಟ್ಟು ಮೇಲ್ಮುಖವಾಗಿರಬೇಕು. ತೆಂಗಿನಕಾಯಿಯ ಮೇಲೆ ಅರಿಶಿನದಿಂದ ಲಕ್ಷ್ಮೀಯ ಮುಖ ಮಾಡಿ ಶೃಂಗಾರ ಮಾಡಬಹುದು. ಕಲಶದ ಬಾಯಿಗೆ ನಿಮಗೆ ಸಹಾಯವಾಗುವಂತೆ ಕೋಲು ಅಥವಾ ತಂತಿ ಕಟ್ಟಿಕೊಂಡು ಅದಕ್ಕೆ ಸೀರೆ ಉಡಿಸಿ. ಸೀರೆ ಉಡಿಸಿದ ಬಳಿಕ ಕೊರಳಿಗೆ ಮಂಗಳ ಸೂತ್ರ ಹಾಕುವುದನ್ನು ಮರೆಯಬೇಡಿ. ಕಮಲ, ಮಲ್ಲಿಗೆ, ಗುಲಾಬಿಗಳಂತಹ ಲಕ್ಷ್ಮೀಗೆ ಪ್ರೀಯವಾದ ಹೂವುಗಳನ್ನು ಅಲಂಕಾರಕ್ಕೆ ಬಳಸಿ.
ಮಣ್ಣಿನ ದೀಪದಲ್ಲಿ ತುಪ್ಪದ ದೀಪ ಹಚ್ಚುವುದು ತುಂಬಾ ಶ್ರೇಷ್ಠ. ಇನ್ನು ಅರಿಶಿನ, ಕುಂಕುಮ, ಬಳೆ, ಹಣೆಗಿಡುವ ತಿಲಕ, ಕನ್ನಡಿ, ಬಾಚಣಿಕೆ ಎಲ್ಲವೂ ಪೂಜೆಗಿಡಬೇಕು.

ಫ್ರೆಶ್ ನ್ಯೂಸ್

Latest Posts

Featured Videos