ಪ್ರೇಮಿಗಳ ದಿನದಂದು ಗುಲಾಬಿ ಹೂವಿಗೆ ಎಲ್ಲಿಲ್ಲದ ಬೇಡಿಕೆ

ಪ್ರೇಮಿಗಳ ದಿನದಂದು ಗುಲಾಬಿ ಹೂವಿಗೆ ಎಲ್ಲಿಲ್ಲದ ಬೇಡಿಕೆ

ಬೆಂಗಳೂರು, ಫೆ. 14: ಫೆಬ್ರವರಿ ತಿಂಗಳು ಬಂತೆಂದರೆ ಸಾಕು ಪ್ರೇಮಿಗಳ ಬಗೆ ಬಗೆಯ ಕನವರಿಕೆಗಳು ರೆಕ್ಕೆ ಪುಕ್ಕ ಪಡೆದುಕೊಳ್ಳುತ್ತವೆ. ತಾವು ಪ್ರೀತಿಸುವವರನ್ನು ಮೆಚ್ಚಿಸಲು ನಾನಾ ಬಗೆಯ ಸರ್ಕಸ್‌ಗಳನ್ನು ಪ್ರೇಮಿಗಳು ಮಾಡುವುದುಂಟು.

ಯಾರೂ ಏನೇ ಮಾಡಿದರೂ ಪ್ರೇಮಿಗಳ ದಿನದಂದು ಒಂದಂತು ಇರಲೇಬೇಕು. ಅದುವೆ ಕೆಂಗುಲಾಬಿ. ಕೆಂಪು ಗುಲಾಬಿ ಪ್ರೇಮದ ಸಂಕೇತವಾಗಿದೆ. ಹಾಗಾಗಿ ತಮ್ಮ ಪ್ರೀತಿ ಪಾತ್ರರಿಗೆ ಕೊಡಲು ಕೆಂಗುಲಾಬಿಗೆ ಅಗ್ರಸ್ಥಾನ ನೀಡುತ್ತಾರೆ ಪ್ರೇಮಿಗಳು.

ಇದರಿಂದ ಪೆಬ್ರವರಿ ತಿಂಗಳು ಬಂತೆಂದರೆ ಸಾಕು ಕೆಂಪು ಗುಲಾಬಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಠಿಯಾಗುತ್ತದೆ. ಪ್ರೇಮಿಗಳ ದಿನಕ್ಕೆ ಭಾರತದಲ್ಲಿ ಎಷ್ಟು ಗುಲಾಬಿಗಳು ಮಾರಾಟವಾಗುತ್ತವೆ, ಎಲ್ಲಿಂದ ಹೆಚ್ಚು ಸರಬರಾಜು ಆಗುತ್ತವೆ ಎಂಬುದಕ್ಕೆ ಇಲ್ಲಿದೆ ಮಾಹಿತಿ.ಲಕ್ಷಗಟ್ಟಲೆ ಗುಲಾಬಿಗಳು

ಬೆಂಗಳೂರಿನ ಪುಷ್ಪ ಹರಾಜು ಕೇಂದ್ರ

ಹೆಬ್ಬಾಳದಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರವು ದೇಶದಲ್ಲಿ ಗುಲಾಬಿ ಪೂರೈಸುವ ಏಕೈಕ ಸಂಸ್ಥೆ. ಒಂದು ವಾರದಿಂದ ಇಲ್ಲಿಂದ ಲಕ್ಷಗಟ್ಟಲೆ ಗುಲಾಬಿಗಳು ಹೊರ ರಾಜ್ಯಗಳಿಗೆ, ವಿದೇಶಗಳಿಗೆ ನಿತ್ಯ ರವಾನೆಯಾಗುತ್ತಿವೆ.

10 ಲಕ್ಷಕ್ಕೂ ಹೆಚ್ಚು ಕೆಂಪು ಗುಲಾಬಿ

ಕೆಂಪು ಗುಲಾಬಿಗೆ ಒಂದು ವಾರದಿಂದ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ರೈತರಿಂದ ಕೆಂಪು ಗುಲಾಬಿಯನ್ನು ಪುಷ್ಪ ಹರಾಜು ಕೇಂದ್ರ ಹೆಚ್ಚು ತರಿಸಿಕೊಳ್ಳುತ್ತಿದೆ. ಇಂದು ಕೆಂಪು ಗುಲಾಬಿ ಬೇಡಿಕೆ ಭಾರತದಾದ್ಯಂತ ಸುಮಾರು 10 ಲಕ್ಷಕ್ಕೂ ಹೆಚ್ಚು ಕೆಂಪು ಗುಲಾಬಿಗಳು ಮಾರಾಟವಾಗುತ್ತವೆ.

30 ರುಪಾಯಿಗೆ ಒಂದು ಕೆಂಗುಲಾಬಿ

ಒಂದು ಗುಲಾಬಿ ಹೂವಿಗೆ ಸಾಮಾನ್ಯವಾಗಿ 5 ರಿಂದ 10 ರುಪಾಯಿಯಂತೆ ಮಾರಾಟವಾಗುತ್ತದೆ. ಆದರೆ ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ 25 ರಿಂದ 30 ರುಪಾಯಿಗೆ ಒಂದು ಕೆಂಗುಲಾಬಿ ಮಾರಾಟವಾಗುತ್ತದೆ. ರೈತರಿಗೆ ಒಂದು ಹೂವಿಗೆ 2 ರುಪಾಯಿ ಉತ್ಪಾದನಾ ವೆಚ್ಚ ತಗಲುತ್ತದೆ. ಹೋಟೆಲ್ ರೆಸ್ಟೊರೆಂಟ್‌ಗಳಿಂದ ಭಾರೀ ಬೇಡಿಕೆ ಬರುತ್ತದೆ.

ಹೆಚ್ಚು ರಪ್ತಾಗುತ್ತದೆ

ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಚಾಮರಾಜನಗರ, ಕೊಡಗು, ಹೊಸೂರು, ಅನಂತಪುರಗಳಲ್ಲಿ ಪಾಲಿ ಹೌಸ್‌ಗಳಲ್ಲಿ ಗುಲಾಬಿ ಹೆಚ್ಚಾಗಿ ಬೆಂಗಳೂರಿಗೆ ಬರುತ್ತದೆ. ಬೆಂಗಳೂರು ಹೊರತುಪಡಿಸಿ ದೆಹಲಿ, ಕೋಲ್ಕತ್ತ ಹಾಗೂ ಹೈದರಾಬಾದ್ ನಗರಗಳಿಗೆ ಹೆಚ್ಚು ಸರಬರಾಜಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos