ವಿದೇಶ ಪ್ರವಾಸಿಗರು ಭರ್ಜರಿ ಡ್ಯಾನ್ಸ್

ವಿದೇಶ ಪ್ರವಾಸಿಗರು ಭರ್ಜರಿ ಡ್ಯಾನ್ಸ್

ಮೈಸೂರು, ಸೆ. 27 : ನಾಡಹಬ್ಬ ಮೈಸೂರು ದಸರಾ ಹಬ್ಬ ವೀಕ್ಷಿಸಲು ಮೈಸೂರು ಅರಮನೆಗೆ ಆಗಮಿಸಿದ ಪ್ರವಾಸಿಗರಿಗೆ ಹೂ ಮತ್ತು ಮೈಸೂರು ಪಾಕ್ ನೀಡಿ, ಪ್ರವಾಸೋದ್ಯಮ ಇಲಾಖೆ ವಿಶೇಷವಾಗಿ ಬರಮಾಡಿಕೊಂಡಿದೆ. ವೀರಭದ್ರಕುಣಿತ-ಡೊಳ್ಳು ಕುಣಿತ ತಂಡದಿಂದ ಪ್ರವಾಸಿಗರಿಗೆ ಅದ್ದೂರಿ ಸ್ವಾಗತ ಮಾಡಲಾಯಿತು. ಇದೇ ಸಂದರ್ಭದಲ್ಲಿ ಖುಷಿಯಿಂದ ಡೊಳ್ಳು ಕುಣಿತದವರ ಜೊತೆಗೆ ವಿದೇಶಿ ಪ್ರವಾಸಿಗರು ಭರ್ಜರಿ ನೃತ್ಯ ಮಾಡಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ವಿಶೇಷ ಅಭಿಯಾನ ನಡೆಸಿ ಎಲ್ಲಾ ಪ್ರವಾಸಿಗರನ್ನು ಸ್ವಾಗತಿಸಿತು.

ಫ್ರೆಶ್ ನ್ಯೂಸ್

Latest Posts

Featured Videos