“ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ವಿಶ್ವಕ್ಕೆ ಕಷ್ಟ” ವೆಂಕಯ್ಯನಾಯ್ಡು

“ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ವಿಶ್ವಕ್ಕೆ ಕಷ್ಟ” ವೆಂಕಯ್ಯನಾಯ್ಡು

ಬೆಂಗಳೂರು, ಏ. 22, ನ್ಯೂಸ್ ಎಕ್ಸ್ ಪ್ರೆಸ್: ಶ್ರೀಲಂಕಾದಲ್ಲಿ ನಡೆದ ಬಾಂಬ್ ದಾಳಿಯನ್ನು ಉಪರಾಷ್ಟ್ರಪತಿ ಖಂಡಿಸಿದ್ದು, ಭಯೋತ್ಪಾದಕರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಭಾರತ ಅಷ್ಟೇ ಅಲ್ಲ, ಯಾವುದೇ ದೇಶ ಸುರಕ್ಷಿತವಲ್ಲ. ಭಯೋತ್ಪಾದನೆ ಮೇಲೆ ಕ್ರಮ ಕೈಗೊಳ್ಳದಿದ್ರೆ ವಿಶ್ವಕ್ಕೆ ಕಷ್ಟ. ಉಗ್ರರಿಗೆ ಹಾಗೂ ಅವರಿಗೆ ಸಹಕಾರ ನೀಡುವವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರಿನಲ್ಲಿ ಹೇಳಿದ್ದಾರೆ. 215 ಜನ ಅಮಾಯಕರು ನಿನ್ನೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಬೆಂಗಳೂರು, ಹೈದ್ರಾಬಾದ್ ಸೇರಿದಂತೆ ಪ್ರಮುಖ ನಗರಗಳೇ ಇವರ ಗುರಿ. ಯುವಕರು ಇದರ ಬಗ್ಗೆ ಎಚ್ಚೆತ್ತುಕೊಳ್ಳಲೇ ಬೇಕು. ಪ್ರತಿಯೊಂದು ದೇಶವೂ ಇದರ ಬಗ್ಗೆ ಗಮನ ಹರಿಸಲೇಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವದ ಸಮಾರಂಭದಲ್ಲಿ ಮಾತಾನಾಡಿದರು. ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜ್ಯಪಾಲರು ಹಾಗೂ ಬೆಂಗಳೂರು ವಿವಿ ಕುಲಪತಿ ವಜುಭಾಯಿ ವಾಲಾ ಅಧ್ಯಕ್ಷತೆ ವಹಿಸಿಕೊಂಡಿದ್ದರು.‌ ದೇಶದ ಭವಿಷ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಶಿಕ್ಷಣ ಶಿಸ್ತನ್ನು ಕಲಿಸಿ, ಕಷ್ಟದ ಸಮಯದಲ್ಲಿ ಕಾಪಾಡುತ್ತದೆ. ವಾಷಿಂಗ್ಟನ್​​ಗಿಂತ ಬೆಂಗಳೂರಿನಲ್ಲಿ ಉತ್ತಮ ಜ್ಞಾನವಂತರಿದ್ದಾರೆ. ಇವತ್ತಿನ ಯುವಜನತೆಯಲ್ಲಿ ತಾಳ್ಮೆ ಇಲ್ಲ. ಇಂದಿನ ದಿನಗಳಲ್ಲಿ ಪರಿಸರ ತುಂಬಾ ಬದಲಾವಣೆ ಆಗುತ್ತಿದೆ. ಸಮಾಜದಲ್ಲಿ ಸ್ಪರ್ಧೆ ಹೆಚ್ಚಾಗುತ್ತಿದ್ದು, ಇದಕ್ಕೆ ಅನುಗುಣವಾಗಿ ಯುವಕರು ಬದಲಾವಣೆ ಆಗಬೇಕು ಎಂದರು. ಇನ್ನು ಘಟಿಕೋತ್ಸವದಲ್ಲಿ, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರು ಸಿ ಎನ್ ಮಂಜುನಾಥ್, ಗೈನಕಾಲಜಿಸ್ಟ್ ಡಾ ಕಾಮಿನಿ ರಾವ್ , ಸಮಾಜಸೇವಕರು ಎಸ್ ವಿವಿ ಸುಬ್ರಹ್ಮಣ್ಯ ಗುಪ್ತರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು. ವಿವಿಧ ವಿಷಯಗಳಲ್ಲಿ 65,039 ಅಭ್ಯರ್ಥಿಗಳು ಪದವಿ ಸ್ವೀಕರಿಸಲಿದ್ದು, ಒಟ್ಟು 166 ವಿದ್ಯಾರ್ಥಿಗಳು ಪಿ ಹೆಚ್ ಡಿ ಪದವಿಗಳನ್ನು ಸ್ವೀಕರಿಸಿದರು. 328 ಚಿನ್ನದ ಪದಕಗಳಿಗೆ 216 ಅಭ್ಯರ್ಥಿಗಳು ಭಾಜರಾದರು. ಎಂಎಸ್ಸಿ ರಸಾಯನಶಾಸ್ತ್ರ ವಿಭಾಗದಲ್ಲಿ ಕೆ‌ವಿ ವಿನುತ 7 ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಬಿಎಸ್ಸಿ ಬಿಎಂ‌ ಎಸ್ ಮಹಿಳಾ ಕಾಲೇಜಿನ ವರಲಕ್ಷ್ಮಿ ಆರ್ 4 ಚಿನ್ನದ ಪದಕ, ಬಿಕಾಂ ಭಗವಾನ್ ಮಹಾವೀರ್ ಜೈನ್‌ಕಾಲೇಜು ಶಂಕರ ಭಾಷ್ಯಂ 5 ಚಿನ್ನದ ಪದಕ, ಸೌಮ್ಯ ಎನ್ 3, ವರ್ಷಿತಾ ವಿ 2 ಚಿನ್ನದ ಪದಕಗಳನ್ನು ಪಡೆದು ಕೊಂಡರು. ಇನ್ನು ಪ್ರತಿಯೊಂದು ಚಿನ್ನದ‌‌ ಪದಕಗಳಲ್ಲಿ, 20ಗ್ರಾಂ ಬೆಳ್ಳಿಯ ಮೇಲೆ 1.3 ಗ್ರಾಂ ಚಿನ್ನದ ಲೇಪನ ಒಳಗೊಂಡಿದೆ. ನಾನು‌ ಸಚಿವನಾಗಿದ್ದಾಗ ಬೆಂಗಳೂರಿನಲ್ಲಿರೋ ಜನಾರ್ದನ ಹೋಟೆಲ್​​​ನಲ್ಲಿ ಇವೆಲ್ಲ ಸವಿಯುತ್ತಿದ್ದೆ. ಇದರ ಸ್ವಾದ ಹೇಳಲು ಸಾಧ್ಯವಿಲ್ಲ.ಆದರೆ ಇವತ್ತು ಹೋಗಲು ಸಾಧ್ಯವಿಲ್ಲ. ಪ್ರೋಟೋಕಾಲ್ ಇದೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos