ಸೌಕರ್ಯವಿಲ್ಲದ ಕ್ರೀಡಾಂಗಣ ಅಭಿವೃದ್ಧಿ ಮರೀಚಿಕೆ

ಸೌಕರ್ಯವಿಲ್ಲದ ಕ್ರೀಡಾಂಗಣ ಅಭಿವೃದ್ಧಿ ಮರೀಚಿಕೆ

ಚಿಕ್ಕಬಳ್ಳಾಪುರ:ಪ್ರವೇಶದ್ವಾರದಲ್ಲಿಯೇ ಸ್ವಾಗತಿಸುವ ನೀರು ತುಂಬಿದ ಗುಂಡಿಗಳು, ಧೋ ಎಂದು ಮಳೆ ಸುರಿದರೆ ಜಲಾವೃತಗೊಳ್ಳುವ ಅಂಗಳ, ಓಟದ ಅಭ್ಯಾಸ ಮಾಡಲಾಗದಷ್ಟು ಹಾಳಾದ ಮೈದಾನ, ಕ್ರೀಡಾಪಟುಗಳಿಗೆ ಗಾಯಗೊಳಿಸುವ ಅಂಕಣಗಳು, ಗಗನಕುಸುಮವಾದ ಸಿಂಥೆಟಿಕ್‌ಟ್ರ‍್ಯಾಕ್..
ಸ್ವಾತಂತ್ರ‍್ಯ ದಿನಾಚರಣೆ, ಗಣರಾಜ್ಯೋತ್ಸವದಂತಹ ಸಂದರ್ಭದಲ್ಲಿ ಮಾತ್ರ ಕಸ ಕೊಡವಿಕೊಂಡು, ಶೃಂಗಾರಗೊಳ್ಳುವ ಕ್ರೀಡಾಂಗಣ ಉಳಿದಂತೆ ಬಣ್ಣಿಸಲಾಗದಷ್ಟು ಅಧ್ವಾನವಾಗಿರುತ್ತದೆ. ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಹೈರಾಣಾಗಿರುವ ಕ್ರೀಡಾಪಟುಗಳು ಕ್ರೀಡಾಂಗಣ ಅಭಿವೃದ್ಧಿಯಾಗುತ್ತದೆ ಎನ್ನುವ ಆಸೆಯನ್ನೇ ಕೈಬಿಟ್ಟು, ನಿಟ್ಟುಸಿರ ನಡುವೆ ಹಿಡಿಶಾಪ ಹಾಕುತ್ತಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲಾ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಸಿಂಥೆಟಿಕ್ ಟ್ರ‍್ಯಾಕ್, ವಸತಿ ನಿಲಯ ಸ್ಥಾಪಿಸಬೇಕು ಎಂಬ ಚರ್ಚೆ ನಡೆದಿತ್ತು. ಯಡಿಯೂರಪ್ಪ ಅವರು ಮೂರನೇ ಬಾರಿ ಮುಖ್ಯಮಂತ್ರಿಯಾದರೂ ಆ ಚರ್ಚೆ ಅಧಿಕೃತವಾಗಿ ಘೋಷಣೆಯಾಗಲೇ ಇಲ್ಲ ಎಂಬ ಬೇಸರ ಹಿರಿಯ ಕ್ರೀಡಾಪಟುಗಳದ್ದು.
ಕ್ರೀಡಾಂಗಣದಲ್ಲಿರುವ ಜಿಲ್ಲಾ ಕ್ರೀಡಾ ಶಾಲೆಯಲ್ಲಿ ಸುಮಾರು ೪೦ ವಿದ್ಯಾರ್ಥಿಗಳು ಇರುತ್ತಾರೆ. ಅವರೆಲ್ಲ ನಿತ್ಯ ತಾಲೀಮಿಗಾಗಿ ಇದೇ ಕ್ರೀಡಾಂಗಣ ಬಳಸುತ್ತಾರೆ. ಆದರೆ ಟ್ರ‍್ಯಾಕ್ ನಿರ್ವಹಣೆ ಇಲ್ಲ. ಮಳೆ ಬಂದಾಗ ಬ್ಯಾಸ್ಕೆಟ್ ಬಾಲ್ ಅಂಕಣದಲ್ಲಿ ಆಡಲು ಆಗುವುದಿಲ್ಲ. ಕಬಡ್ಡಿ, ವಾಲಿಬಾಲ್, ಕೊಕ್ಕೊ, ಥ್ರೋಬಾಲ್ ಆಟಗಳನ್ನು ಆಡಲು ಸುಸಜ್ಜಿತ ಅಂಕಣಗಳೇ ಇಲ್ಲ!
ಈ ಬಗ್ಗೆ ಯುವಜನ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಟಿ.ಜಯಲಕ್ಷ್ಮಿ ಅವರನ್ನು ವಿಚಾರಿಸಿದರೆ, ‘ಖೇಲೊ ಇಂಡಿಯಾ ಯೋಜನೆ ಅಡಿ ಸಿಂಥೆಟಿಕ್ ಟ್ರ‍್ಯಾಕ್ ಸಮೇತ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿ, ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕ ತಕ್ಷಣ ಕಾಮಗಾರಿ ಆರಂಭಿಸಲಾಗುತ್ತದೆ’ ಎಂದು ಹೇಳಿದರು.
ನಿರ್ವಹಣೆ ಕಾಣದ ಜಿಮ್

ಫ್ರೆಶ್ ನ್ಯೂಸ್

Latest Posts

Featured Videos