ತುಮಕೂರುನಲ್ಲಿ ರೈಲಿನ ಹುಟ್ಟುಹಬ್ಬ

ತುಮಕೂರುನಲ್ಲಿ ರೈಲಿನ ಹುಟ್ಟುಹಬ್ಬ

ತುಮಕೂರು, ಆ. 4: ರೈಲಿನ ಹುಟ್ಟುಹಬ್ಬ ಶನಿವಾರ ವಿಶಿಷ್ಟ ಕಾರ್ಯಕ್ರಮವೊಂದು ನಡೆಯಿತು. ಸಾಮಾನ್ಯ ಎಲ್ಲೂ ನಡೆಯದ ರೈಲಿನ ಹುಟ್ಟುಹಬ್ಬ ನಗರದ ತುಮಕೂರು-ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ಕಳೆದ ಆರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ.

ಬೆಂಗಳೂರಿಗೆ ನಿತ್ಯ ಸಂಚರಿಸುವ ಉದ್ಯೋಗಿಗಳಿಗೆ ಅನುಕೂಲವಾಗಲೆಂದು ನೈಋುತ್ಯ ರೈಲ್ವೇ ಅಧಿಕಾರಿಗಳ ಮನವೊಲಿಸಿ, ತುಮಕೂರು-ಬೆಂಗಳೂರು ಫಾಸ್ಟ್ ಪ್ಯಾಸೆಂಜರ್ ರೈಲು ಬೇಡಿಕೆ ಈಡೇರಿಸಿಕೊಳ್ಳಲಾಗಿತ್ತು. ತೊಂದರೆ ನಿವಾರಣೆಗೆ ಆರಂಭಿಸಲಾದ ಈ ರೈಲಿನಿಂದಾಗಿ ಬಹಳ ಅನುಕೂಲವಾಗಿತ್ತು. ನೂತನ ರೈಲು ಆರಂಭಕ್ಕೆ ಕಾರಣವಾಗಿದ್ದ ಪ್ರಯಾಣಿಕರು ವೇದಿಕೆಯೊಂದನ್ನು ಸ್ಥಾಪಿಸಿಕೊಂಡು ರೈಲ್ವೆ ಪ್ರಯಾಣಿಕರಿಗೆ ಅಗತ್ಯವಾಗಿರುವ ಅನುಕೂಲಗಳನ್ನು ಒದಗಿಸುತ್ತ ಬಂದಿದ್ದಾರೆ.

ಅದೇ ಸಂದರ್ಭದಲ್ಲಿ ಹುಟ್ಟಿಕೊಂಡದ್ದು, ತಮ್ಮ ಸಂಕಷ್ಟ ನಿವಾರಣೆಗೆ ಆರಂಭಗೊಂಡ ರೈಲಿಗೆ ಜನ್ಮ ದಿನಾಚರಣೆ. ರೈಲು ಆರಂಭಗೊಂಡ ಆ.3 ರಂದು ಪ್ರತಿವರ್ಷವೂ ರೈಲಿಗೆ ಹುಟ್ಟು ಹಬ್ಬ ಆಚರಿಸಿ ಪ್ರಯಾಣಿಕರೊಂದಿಗೆ ವೇದಿಕೆ ಪದಾಧಿಕಾರಿಗಳು ಸಂಭ್ರಮಿಸುತ್ತಿದ್ದಾರೆ. ಅದೇ ರೀತಿ ಶನಿವಾರ ಬೆಳ್ಳಂಬೆಳಗ್ಗೆಯೇ ನಿಲ್ದಾಣಕ್ಕೆ ಆಗಮಿಸಿದ ವೇದಿಕೆಯ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರಯಾಣಿಕರ ಸಹಕಾರದೊಂದಿಗೆ ರೈಲಿಗೆ ಬಾಳೆ ಕಂದು, ಮಾವಿನ ಸೊಪ್ಪು ಕಟ್ಟಿ, ಹೂವಿನಿಂದ ಅಲಂಕರಿಸಿದರು. ಬಲೂನ್ ಬಂಟಿಂಗ್ಸ್ಗಳನ್ನೂ ಕಟ್ಟಿ ಖುಷಿಪಟ್ಟರು. ಸುಮಾರು 8 ಗಂಟೆಗೆ ರೈಲಿನ ಚಾಲಕ ವಿ.ಎನ್. ಪ್ರಸಾದ್ ಹಾಗೂ ಸಹಚಾಲಕ ವಿಶ್ವೇಶ್ವರ್ ಪ್ರಸಾದ್ ಮತ್ತು ಗಾರ್ಡ್ ಎನ್. ಕೆ. ನಿರಾಲ ಅವರಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಅಲ್ಲದೆ ಪ್ರಯಾಣಿಕರಿಗೆ ಕೇಕ್ ವಿತರಿಸಲಾಯಿತು. ನಂತರ ಅದೇ ರೈಲಿನಲ್ಲಿ ಬೆಂಗಳೂರಿಗೆ ತೆರಳಿದ ವೇದಿಕೆಯ ಪದಾಧಿಕಾರಿಗಳು ಎಲ್ಲ ಪ್ರಯಾಣಿಕರಿಗೂ ಸಿಹಿ ವಿತರಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos