ತುಳುವರ ಸಾಂಸ್ಕೃತಿಕ ಸಂಭ್ರಮದ ಹಬ್ಬ

ತುಳುವರ ಸಾಂಸ್ಕೃತಿಕ ಸಂಭ್ರಮದ ಹಬ್ಬ

ಚಂದಾಪುರ, ಸೆ. 16: ನಮ್ಮ ತುಳುವರ ನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆಯ ಬೀಡು ನಮ್ಮ ಕರ್ನಾಟಕ ರಾಜ್ಯದ ಹೆಮ್ಮೆಯಾಗಿದೆ ಎಂಬುದಾಗಿ ಬೊಮ್ಮಸಂದ್ರ ತುಳುವೆರೆ ಚಾವಡಿ ತೆಂಕೈ ಸಂಘಟನೆಯ ಅಧ್ಯಕ್ಷ ಉಮೇಶ್ ಬಂಗೇರ ತಿಳಿಸಿದರು.

ಅವರು ಹೆಬ್ಬಗೋಡಿಯ ಎಸ್.ಎಫ್.ಎಸ್. ಶಾಲಾಆವರಣದಲ್ಲಿ ಬೊಮ್ಮಸಂದ್ರ ತುಳುವೆರೆ ಚಾವಡಿ ತೆಂಕೈ ಸಂಘಟನೆಯ ವತಿಯಿಂದ ಏರ್ಪಡಿಸಿದ್ದ ತುಳುವರ ಸಾಂಸ್ಕೃತಿಕ ಸಂಭ್ರಮ ಹಬ್ಬ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಚಂದಾಪುರ, ಹೆಬ್ಬಗೋಡಿ,ವೀರಸಂದ್ರ, ಕಮ್ಮಸಂದ್ರ, ಎಲೆಕ್ಟ್ರಾನಿಸಿಟಿ, ಜಿಗಣಿ ಬೊಮ್ಮಸಂದ್ರ, ಆನೇಕಲ್ ಭಾಗದಲ್ಲಿನ ನಮ್ಮ ತುಳುವರ ಬಂಧುಗಳು ಎಲ್ಲರು ಒಂದೆಡೆ ಸೇರಿ ನಮ್ಮ ಊರಿನ ಸಾಹಿತ್ಯ ಮತ್ತು ಸಾಂಸ್ಕೃತಿಕ, ಯಕ್ಷಗಾನ ಬಯಲಾಟವನ್ನು ಪ್ರದರ್ಶನ ಮಾಡುತ್ತ ಊರಿನವರೆಲ್ಲ ಪರಸ್ಪರ ಕಷ್ಟ ಸುಖ ವಿಷಯಗಳನ್ನು ಹಂಚಿಕೊಂಡು,ಇದು ಸಂಭ್ರಮಿಸುವ ಸುಂದರ ಕಾರ್ಯಕ್ರಮವಾಗಿದೆ ಇಂತಹ ಕಾರ್ಯಕ್ರಮಗಳಿಂದ ನಮ್ಮ ಊರಿನ ಮತ್ತು ನಮ್ಮವರ ನಡುವೆ ಇನ್ನು ಉತ್ತಮ ಸಂಬಂಧಗಳು ಗಟ್ಟಿಯಾಗುತ್ತವೆ. ಹಾಗೂ ನಮ್ಮ ಸಾಹಿತ್ಯ ಮತ್ತು ಸಂಸ್ಕೃತಿಯು ಹೆಚ್ಚು ಪ್ರಚಾರಗೊಳ್ಳಲು ಸಹಕಾರಿಯಾಗುತ್ತದೆ ಎಂಬುದಾಗಿ ತಿಳಿಸಿದರು.

ಐಕ್ಯತೆ ಮತ್ತು ಒಗ್ಗಟ್ಟು ಬೆಸೆಯಲು ಸಹಕಾರಿ: ತುಳುವೆರೆ ಚಾವಡಿ ಬೆಂಗಳೂರು ಜಿಲ್ಲೆಯ ಗೌರವ ಅಧ್ಯಕ್ಷ ಪುರುಷೋತ್ತಮ ಚೆಂಡ ಮಾತನಾಡಿ, ಇಂತಹ ತುಳುವರ ಹಬ್ಬಗಳು ದೊಡ್ಡನಗರಿ ಬೆಂಗಳೂರಿನಲ್ಲಿ ವಿವಿಧ ಪ್ರದೇಶಲ್ಲಿ ಬಿಡಿಬಿಡಿಯಾಗಿರುವ ವ್ಯಕ್ತಿಗಳನ್ನು ಸಂಘಟನೆಯ ಮೂಲಕ ಒಂದೆಡೆ ಸೇರಿಸಿ ನಮ್ಮ ತುಳುವರ ಶಕ್ತಿಯಾಗಿ ರೂಪಿಸಲು ಸಾಧ್ಯವಾಗುತ್ತದೆ, ಈ ಮೂಲಕ ನಮ್ಮೊಳಗೆ ಐಕ್ಯತೆ ಮತ್ತು ಒಗ್ಗಟ್ಟು ಬೆಳೆದು ಪರಸ್ಪರ ಸಹಕಾರಿ ಮನೋಭಾವ ಬೆಳೆಯಲು ಸಾಧ್ಯವಾಗುತ್ತದೆ ಎಂಬುದಾಗಿ ತಿಳಿಸಿದರು.

ಸನ್ಮಾನ ಗೌರವ ಸಮರ್ಪಣೆ: ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ ಸಂಸ್ಥಾಪಕರಾದ ಡಾ.ಶ್ರೀಧರ ಬಂಡಾರಿ, ಹಿರಿಯ ಹಾಸ್ಯ ಕಲಾವಿದ ಜಯರಾಮ್ ಆಚಾರ್ಯ, ತುಳುವೆರೆ ಚಾವಡಿ ಬೆಂಗಳೂರು ಜಿಲ್ಲೆಯ ಗೌರವ ಅಧ್ಯಕ್ಷ ಪುರುಷೋತ್ತಮ ಚೆಂಡ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ  ತುಳುವೆರೆ ಚಾವಡಿ ಸಂಘಟನೆಯ ಬೆಂಗಳೂರು ಅಧ್ಯಕ್ಷ ಆಶಾನಂದ ಕುಲಶೆಖರ, ಕರಾವಳಿ ಪ್ರತಿಷ್ಠಾನದ ಸತೀಶ್‌ಅಕ್ಬಾಲ, ಹೆಚ್‌ಎಎಲ್ ವಿಭಾಗದ ತುಳುವರ ಅಧ್ಯಕ್ಷ ಜಗನ್ನಾಥ್, ಸೃಷ್ಠಿಕಲಾಭೂಮಿ ಅಧ್ಯಕ್ಷ ಸಂಕಬೈಲು ಮಂಜುನಾಥ್ ಅಡಪ, ಬೊಮ್ಮಸಂದ್ರ ತುಳುವೆರೆ ಚಾವಡಿ ತೆಂಕೈ ಸಂಘಟನೆಯ ಉಪಾಧ್ಯಕ್ಷ ಸಂತೋಷ್ ಅಲೆಕ್ಕಾಡಿ, ಚಂದ್ರಶೇಖರ್‌ಶೆಟ್ಟಿ, ಕಾರ್ಯದರ್ಶಿ ಉಮೇಶ್‌ಶೆಟ್ಟಿ, ಖಜಾಂಚಿ ವಿನೋಧ್ ಕುಮಾರ್, ಇನ್ನ ಮುಂತಾದವರು ವೇದಿಕೆಯಲ್ಲಿ ಹಾಜರಿದ್ದರು ಕಾರ್ಯಕ್ರಮವನ್ನು ರಾಜ್‌ಸಂಪಾಜಿ ನಿರೂಪಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos