ತ್ರಿಲೋಕ್ನಾಥ್ ಚತುರ್ವೇದಿ ವಿಧಿವಶ

ತ್ರಿಲೋಕ್ನಾಥ್ ಚತುರ್ವೇದಿ ವಿಧಿವಶ

ನವದೆಹಲಿ, ಜ. 6 : ತೀವ್ರ ಅನಾರೋಗ್ಯದ ಹಿನ್ನೆಲೆ ಕರ್ನಾಟಕದ ಮಾಜಿ ರಾಜ್ಯಪಾಲ ತ್ರಿಲೋಕ್ನಾಥ್ ಚತುರ್ವೇದಿ (ಟಿ.ಎನ್.ಚತುರ್ವೇದಿ) ಕಳೆದ ತಡರಾತ್ರಿ ನವದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ನವದೆಹಲಿಯಲ್ಲಿ ನಡೆಯಲಿದೆ.
2002ರ ಆಗಸ್ಟ್ 20 ರಿಂದ 2007ರವರೆಗೆ ಕರ್ನಾಟಕದ ರಾಜ್ಯಪಾಲರಾಗಿದ್ದ ಟಿ.ಎನ್.ಚತುರ್ವೇದಿ ಅವರು ಮಾಜಿ ಪ್ರಧಾನಿ ಡಾ.ಮನ್ಮೋಹನ್ಸಿಂಗ್ ಅವರ ಸಹಪಾಠಿಯಾಗಿದ್ದರು.
ಭಾರತದ ಮೊಟ್ಟ ಮೊದಲ ಮಹಾಲೇಖಪಾಲಕರಾಗಿ ಕಾರ್ಯನಿರ್ವಹಿಸಿದ್ದ ಅವರಿಗೆ 1990ರಲ್ಲಿ ಪದ್ಮಭೂಷಣ ಪ್ರಶಸ್ತಿಯೂ ದೊರಕಿತ್ತು. ಅವರ ಸೇವೆಯನ್ನು ಗುರುತಿಸಿ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿತ್ತು. 2007ರಲ್ಲಿ ರಾಜ್ಯಪಾಲರಾಗಿದ್ದ ಚತುರ್ವೇದಿ ಅವರನ್ನು ಇನ್ನೊಂದು ಅವಧಿಗೆ ಮುಂದುವರೆಯುವಂತೆ ಖುದ್ದು ಅಂದಿನ ಪ್ರಧಾನಿ ಡಾ.ಮನ್ಮೋಹನ್ಸಿಂಗ್ ಮನವಿ ಮಾಡಿದರೂ ನಯವಾಗಿಯೇ ತಿರಸ್ಕರಿಸಿದ್ದರು. ಈ ಹಿಂದೆ ಕೇರಳದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದ ಅವರಿಗೆ 2017ರಲ್ಲಿ ರಾಷ್ಟ್ರಪತಿ ಹುದ್ದೆಗೆ ಹೆಸರು ಕೇಳಿ ಬಂದಿತ್ತು. ಇತ್ತೀಚೆಗೆ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನೋಯ್ಡಾ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ತಡರಾತ್ರಿ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಫ್ರೆಶ್ ನ್ಯೂಸ್

Latest Posts

Featured Videos