ಇಂದೇ ಪರೀಕ್ಷೆ ಇಂದೇ ಪ್ರಶ್ನೆಪತ್ರಿಕೆ ಲೀಕ್

ಇಂದೇ ಪರೀಕ್ಷೆ ಇಂದೇ ಪ್ರಶ್ನೆಪತ್ರಿಕೆ ಲೀಕ್

ವಿಜಯಪುರ, ಮಾ. 04: ಇಂದಿನಿಂದ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಶ್ನೆಪತ್ರಿಕೆ ಬಹಿರಂಗ ಆಗದಂತೇ ಎಷ್ಟೇ ಕಟ್ಟೆಚ್ಚರ ವಹಿಸಿದರು.. ಕಟ್ಟೆಚ್ಚರದ ನಡುವೆಯೂ ಪರೀಕ್ಷೆ ಆರಂಭವಾದ ಒಂದೇ ಗಂಟೆಯಲ್ಲಿ ಇಂದು ನಡೆಯುತ್ತಿರುವ ಭೌತಶಾಸ್ತ್ರ ವಿಷಯದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎನ್ನಲಾಗುತ್ತಿದೆ.

ಹೌದು. ವಿಜಯಪುರದ ಶಾಂತೇಶ್ವರ ಪಿಯು ಕಾಲೇಜಿನಲ್ಲಿ ಇಂದು ನಡೆಯುತ್ತಿರುವ ದ್ವಿತೀಯ ಪಿಯುಸಿ ಭೌತಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ, ಪರೀಕ್ಷೆ ಆರಂಭವಾದ ಒಂದೇ ಒಂದು ಗಂಟೆಯಲ್ಲಿ ಲೀಕ್ ಆಗಿರುವುದಾಗಿ ತಿಳಿದು ಬಂದಿದೆ. ಕಾಲೇಜಿನಲ್ಲಿ ಭೌತಶಾಸ್ತ್ರ ಪರೀಕ್ಷೆ ಆರಂಭವಾದ ಒಂದೇ ಗಂಟೆಯಲ್ಲಿ ಪ್ರಶ್ನೆಪತ್ರಿಕೆ ಲೀಕ್ ಆಗಿದೆ ಎಂಬುದಾಗಿ ಹೇಳಲಾಗುತ್ತಿದೆ.

ಭೌತಶಾಸ್ತ್ರ ಪರೀಕ್ಷೆ ಆರಂಭವಾಗುತ್ತಿದ್ದಂತೆ, ಪ್ರಶ್ನೆ ಪತ್ರಿಕೆಯನ್ನು ಪೋಟೋ ಕ್ಲಿಕ್ಕಿಸಿಕೊಂಡಿರುವ ಕಿಡಿಗೇಡಿಗಳು, ಸೋಷಿಯಲ್ ಮೀಡಿಯಾದ ಮೂಲಕ ಲೀಕ್ ಮಾಡಿರುವುದಾಗಿ ತಿಳಿದು ಬಂದಿದೆ. ಇದನ್ನು ಕಾಲೇಜಿನ ಶಾಲಾ ಸಿಬ್ಬಂದಿಗಳೇ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಹೆಚ್ಚಿನ ಮಾಹಿತಿಯನ್ನು ಸ್ಪಷ್ಟಪಡಿಸಬೇಕಿದೆ.

 

ಫ್ರೆಶ್ ನ್ಯೂಸ್

Latest Posts

Featured Videos