ಅರಿಶಿನ ಮತ್ತು ಅಲೋವೆರಾದಲ್ಲಿ ಅಡಗಿದೆ ನಮ್ಮ ಸೌಂದರ್ಯದ ಗುಟ್ಟು

ಅರಿಶಿನ ಮತ್ತು ಅಲೋವೆರಾದಲ್ಲಿ ಅಡಗಿದೆ ನಮ್ಮ ಸೌಂದರ್ಯದ ಗುಟ್ಟು

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳು ಸೌಂದರ್ಯದ ಮೇಲೆ ಹೆಚ್ಚು ಕಾಳಜಿ ವಹಿಸುತ್ತಾರೆ. ನಮ್ಮ ಸೌಂದರ್ಯವನ್ನು ಹೆಚ್ಚಿಸಲು ಹಲವಾರು ಪ್ರಯತ್ನಗಳನ್ನು ದಿನನಿತ್ಯ ಮಾಡುತ್ತಿರುತ್ತೇವೆ. ಕೆಮಿಕಲ್ ಮಿಶ್ರಿತವಾದ ಸಾಬೂನುಗಳು ಹಾಗೂ ಕ್ರೀಮ್ ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದರಿಂದ ನಮ್ಮ ತ್ವಚೆಯೂ ಸಹ ಇನ್ನು ಹೆಚ್ಚು ಹಾಳಾಗುವುದು, ಇದರಿಂದ ನಾವು ಮುಕ್ತಿ ಪಡೆಯಬೇಕಾದರೆ, ನಮ್ಮ ದಿನನಿತ್ಯ ಜೀವನದಲ್ಲಿ ಬಳಸುವ ಪದಾರ್ಥಗಳಲ್ಲಿ ನಮ್ಮ ಸೌಂದರ್ಯ ಅಡಗಿದೆ. ಹೊಳೆಯುವ ಸುಂದರ ತ್ವಚೆಯು ಪ್ರತಿಯೊಬ್ಬ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳ ಕನಸಾಗಿರುತ್ತದೆ.
ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಬಯಸುವವರಿಗೆ ಅರಿಶಿನ ಮತ್ತು ಅಲೋವೆರಾ ಸೂಕ್ತ ಪದಾರ್ಥಗಳಾಗಿವೆ. ಈ ನೈಸರ್ಗಿಕ ಪದಾರ್ಥಗಳನ್ನು ತ್ವಚೆಯ ಮೇಲೆ ಹಚ್ಚಿದ ಕೂಡಲೇ ಬದಲಾವಣೆಯನ್ನು ಕಾಣಬಹುದು.
ಅರಿಶಿನ ಮತ್ತು ಅಲೋವೆರಾ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಎರಡನ್ನೂ ಪ್ರತ್ಯೇಕವಾಗಿ ಬಳಸಬಹುದು. ಆದರೆ, ಇವೆರಡರ ಮಿಶ್ರಣವನ್ನು ಬಳಸುವುದರಿಂದ ಚರ್ಮವು ಹೆಚ್ಚು ಹೊಳಪು ಮತ್ತು ಸೌಂದರ್ಯವನ್ನು ನೀಡುತ್ತದೆ. ಈ ಎರಡು ನೈಸರ್ಗಿಕ ವಸ್ತುಗಳ ಅನುಕೂಲಗಳು ಎರಡು ಪಟ್ಟು.
ಅರಿಶಿನ, ಅಲೋವೆರಾ ಮತ್ತು ಜೇನುತುಪ್ಪದ ಮಿಶ್ರಣವನ್ನು ಚರ್ಮದ ಮೇಲೆ ಹಚ್ಚಿ 20 ರಿಂದ 25 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಕಳೆದು ಹೋದ ತ್ವಚೆಯ ಹೊಳಪನ್ನು ಮರಳಿ ಪಡೆಯಬಹುದು.
ಅಲೋವೆರಾ ಮತ್ತು ಅರಿಶಿನ ಪುಡಿಯ ಮಿಶ್ರಣವನ್ನು ಸ್ವಲ್ಪ ಶ್ರೀಗಂಧದ ಜೊತೆಗೆ ಚರ್ಮದ ಮೇಲೆ ಹಚ್ಚಿಕೊಳ್ಳಿ. ನಂತರ ಅದು ಒಣಗಿದಾಗ ಅದನ್ನು ನೀರಿನಿಂದ ತೊಳೆಯಿರಿ. ಈ ರೀತಿ ಮಾಡುವುದರಿಂದ ತ್ವಚೆಯ ಸುಕ್ಕುಗಳನ್ನು ಹೋಗಲಾಡಿಸಲು ತುಂಬಾ ಸಹಕಾರಿ.
ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅಲೋವೆರಾ ಮತ್ತು ಅರಿಶಿನದ ಮಿಶ್ರಣವು ತುಂಬಾ ಸಹಾಯಕವಾಗಿದೆ. ಅಲೋವೆರಾ, ಅರಿಶಿನ ಮತ್ತು ಜೇನುತುಪ್ಪದ ಮಿಶ್ರಣವನ್ನು ಚರ್ಮದ ಮೇಲೆ ಹಚ್ಚಿ. ಸ್ವಲ್ಪ ಹೊತ್ತು ಬಿಟ್ಟು ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಮೊಡವೆ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos