ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲೆಂದೇ ಹೆಸರುವಾಸಿಯಾಗಿರುವ ಶಿವಮೊಗ್ಗಕ್ಕೆ ಬಂದೇ ಬಿಡ್ತು ವಿಮಾನ. ಇಂದಿನಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಶುರುವಾಗಿದೆ. ಶಿವಮೊಗ್ಗದ ಸೋಗಾನೆ ಬಳಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣಕ್ಕೆ ಇಂದು ಮೊದಲ ವಿಮಾನ ಬಂದಿಳಿದಿದೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ನೇರವಾಗಿ ಶಿವಮೊಗ್ಗಕ್ಕೆ ಬಂದು ಲ್ಯಾಂಡ್ ಆಗಿದೆ. ಈ ಮೊದಲ ವಿಮಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ, ಸಚಿವ ಎಂಬಿ ಪಾಟೀಲ್ ಸೇರಿದಂತೆ ಹಲವು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಪ್ರಯಾಣಿಸಿ ಸಂತೋಷ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಅಸ್ತಿತ್ವಕ್ಕೆ ಬರಲು ನಿರ್ಣಾಯಕ ಪಾತ್ರ ನಿರ್ವಹಿಸಿದ ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವ ಎಂಬಿ ಪಾಟೀಲ್ ಮತ್ತು ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ವಿಮಾನದಲ್ಲಿ ಶಿವಮೊಗ್ಗಗೆ ಆಗಮಿಸಿದ್ದಾರೆ. ಈ ಭಾಗದ ಜನರ ದಶಕಗಳ ಕನಸು ಇಂದು ನನಸಾಗಿದೆ.
ಇನ್ನು ಫೆಬ್ರುವರಿ 27 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದ್ದರು. ಇಂದಿನಿಂದ ಈ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಸೇವೆ ಆರಂಭವಾಗಿದ್ದು ಮೊದಲ ವಿಮಾನ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿದೆ. ಇಲ್ಲಿಗೆ ರಾಜ್ಯದ ಮಾಜಿ ಮುಖ್ಮಂತ್ರಿ ಮತ್ತು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಅಸ್ತಿತ್ವಕ್ಕೆ ಬರಲು ನಿರ್ಣಾಯಕ ಪಾತ್ರ ನಿರ್ವಹಿಸಿದ ಬಿಎಸ್ ಯಡಿಯೂರಪ್ಪ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವ ಎಂಬಿ ಪಾಟೀಲ್ ಮತ್ತು ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ವಿಮಾನದಲ್ಲಿ ಶಿವಮೊಗ್ಗಗೆ ಆಗಮಿಸಿ ಹರ್ಷ ವ್ಯಕ್ತ ಪಡಿಸಿದರು.
ವರದಿಗಾರ
ಎ.ಚಿದಾನಂದ,ವಿಜಯನಗರ.
ಶಿವಮೊಗ್ಗ-ಬೆಂಗಳೂರು ವಿಮಾನ ಸಂಚಾರಕ್ಕೆ ಚಾಲನೆ
ಐತಿಹಾಸಿಕ ಮೊದಲ ವಿಮಾನಯಾನದಲ್ಲಿ ನಮ್ಮ ಪಯಣಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟ ಮೊಟ್ಟ ಮೊದಲ ಇಂಡಿಗೊ ವಿಮಾನದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP ಶಿವಮೊಗ್ಗ ಸಂಸದರಾದ ಶ್ರೀ @BYRBJP ಶಾಸಕರಾದ ಶ್ರೀ @JnanendraAraga ಶ್ರೀ @BYVijayendra, @belur_sri ಮಾಜಿ ಸಚಿವರಾದ… pic.twitter.com/SaZ9iSVx9H
— M B Patil (@MBPatil) August 31, 2023