ಉತ್ತಮ ಆರೋಗ್ಯಕ್ಕೆ ಕುಂಬಳಕಾಯಿ

ಉತ್ತಮ ಆರೋಗ್ಯಕ್ಕೆ ಕುಂಬಳಕಾಯಿ

ಬೆಂಗಳೂರು, ಜ. 25: ಕುಂಬಳಕಾಯಿಯನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಈ ಕುಂಬಳಕಾಯಿಂದ ವಿವಿಧ ರೀತಿಯ ಅಡುಗೆಯನ್ನು ಮಾಡಬಹುದು, ಕುಂಬಳಕಾಯಿ ಪಲ್ಯ, ಕುಂಬಳಕಾಯಿ ಹಲ್ವ ಇನ್ನಿತರ ಅಡುಗೆಯನ್ನು ಮಾಡಬಹುದು. ಈ ಕುಂಬಳಕಾಯಿ  ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟೇಲ್ಲಾ ಲಾಭಗಳಿವೆ ಎನ್ನುವುದನ್ನ ನಾವಿಂದು ತಿಳಿಯೋಣ

ಭಾರತಿಯರಿಗೆ ತಿಳಿದಿರುವ ಪ್ರಾಚೀನವಾದ ತರಕಾರಿಗಳಲ್ಲಿ ಕುಂಬಳ ಕಾಯಿ ಸಹ ಒಂದು. ಸಾಮಾನ್ಯವಾಗಿ ಇದನ್ನು ಪ್ರತಿಯೊಬ್ಬರ ಮನೆಯ ಹಿತ್ತಲಿನಲ್ಲಿ ಬೆಳೆಸಲಾಗುತ್ತದೆ ಹಾಗೆಯೇ ಅಡುಗೆಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ.

1 ಇದರಲ್ಲಿ ಅನೇಕ ಔಷಧಿಯ ಗುಣಗಳಿದ್ದು, ಹೃದಯ ಸಂಬಂಧಿತ ಕಾಯಿಲೆಯನ್ನೂ ದೂರ ಮಾಡುತ್ತದೆ.

2 ಕುಂಬಳಕಾಯಿಯಲ್ಲಿ ವಿಟಮಿನ್ ಸಿ ಅಂಶವಿರುವ ಕಾರಣ ಜಾಸ್ತಿಯಾಗಿರುವ ಶುಗರ್ ಕಡಿಮೆ ಮಾಡುತ್ತದೆ. ಡಯಾಬಿಟಿಸ್ ರೋಗಿಗಳು ವಾರಕ್ಕೆ 2 ಬಾರಿ ಕುಂಬಳಕಾಯಿಯನ್ನು ಸೇವಿಸಬೇಕು.

3 ಕುಂಬಳಕಾಯಿ ರಸದಲ್ಲಿನ ವಿಟಮಿನ್ ಸಿ ಮತ್ತು ವಿಟಮಿನ್ ಇ ಅಂಶವು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಪೋಷಕಾಂಶಗಳಾಗಿವೆ.

4 ಕುಂಬಳಕಾಯಿ ಸೇವನೆಯಿಂದ ಒತ್ತಡ, ನಿದ್ರಾಹೀನತೆ, ಕೋಪ, ಖಿನ್ನತೆ ಸಮಸ್ಯೆಯನ್ನು ದೂರ ಮಾಡುತ್ತದೆ.

5 ಕ್ಯಾರೆಟ್ ಗಳಲ್ಲಿರುವಂತೆ ಕುಂಬಳಕಾಯಿಯಲ್ಲೂ ಬೀಟಾ ಕ್ಯಾರೋಟಿನ್ ಎಂಬ ಪೋಷಕಾಂಶವಿದ್ದು ಕಣ್ಣಿನ ಆರೋಗ್ಯಕ್ಕೆ ಪೂರಕವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos