ಬಾರದ ಮಳೆಗೆ ರೈತ ಕಂಗಾಲು!

ಬಾರದ ಮಳೆಗೆ ರೈತ ಕಂಗಾಲು!

ಪ್ರತಿ ವರ್ಷದಂತೆ ಮುಂಗಾರು ಮಳೆ ಜೂನ್ ಮೊದಲನೇ ವಾರದಲ್ಲಿ ಪ್ರಾರಂಭವಾಗಿ ರೈತರು ಬಿತ್ತನೆ ಕಾರ್ಯವನ್ನು ಮಾಡುತ್ತಿದ್ದರು. ಪ್ರಸ್ತುತ ವರ್ಷ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಮುಂಗಾರು ಬಿತ್ತನೆ ಆಗದೆ ಕೃಷಿ ಚಟುವಟಿಕೆಗಳು ಬಹು ನಿಧಾನವಾಗಿ ಸಾಗಿದೆ.
ಪ್ರತಿ ವರ್ಷ ಜನರ ವಾಡಿಕೆಯಂತೆ ಮುಂಗಾರು ಮಳೆ ಜೂನ್ ಮೊದಲನೇ ವಾರದಲ್ಲಿ ಪ್ರಾರಂಭವಾಗುತಿತ್ತು ಅದೇ ರೀತಿ ರೈತರು ಬಿತ್ತನೆ ಕೆಲಸವನ್ನು ಮಾಡುತ್ತಿದ್ದರು. ಪ್ರಸ್ತುತ ಸಾಲಿನ ವರ್ಷ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಮುಂಗಾರು ಬಿತ್ತನೆ ಆಗದೆ ಕೃಷಿ ಚಟುವಟಿಕೆಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಇದೀಗ ಉಳಿದಿರುವ ಅಲ್ಪಸ್ವಲ್ಪ ಬೆಳೆಗಳ ಉಳಿಸಲು ಲಕ್ಷ್ಮೇಶ್ವರ ಹಾಗೂ ಗದಗ ಭಾಗದ ರೈತರು ನೀರಿನ ಟ್ಯಾಂಕರ್ ಮೂಲಕ ರಸ್ತೆ ಬದಿಯಲ್ಲಿ ನಿಂತ ನೀರು ಹಾಗೂ ಚರಂಡಿ ನೀರನ್ನು ತಂದು ಬೆಳೆದ ಬೆಳೆ ಒಣಗಬಾರದೆಂದು ಬೆಳೆಗಳಿಗೆ ಸಿಂಪಡಿಸುತಿದ್ದಾರೆ.
ಈ ಭಾಗದ ರೈತರು ಈರುಳ್ಳಿ, ಶೇಂಗಾ, ಹತ್ತಿ, ಮೆಣಸಿನಕಾಯಿ, ಹಸಿಮೆಣಸಿನ ಬೆಳೆಗಳನ್ನು ಬಿತ್ತನೆ ಮಾಡಿದ್ದು, ತಿಂಗಳಿನಿಂದ ಮಳೆ ಬಾರದೇ ಇರುವುದರಿಂದ ಬೆಳೆಗಳಿಗೆ ನೀರಿನ ಅಭಾವತೆ ಎದುರಾಗಿದೆ. ಇದರಿಂದ ಬೆಳೆಗಳು ಒಣಗುವ ಹಂತಕ್ಕೆ ಸಾಗಿದೆ. ಈ ವರ್ಷ ಮಳೆ ಕೈ ಕೊಟ್ಟಿದ್ದರಿಂದ ರೈತರನ್ನು ಹತಾಶೆಗೊಳಗಾಗುವಂತೆ ಮಾಡಿದೆ. ಇದರಿಂದಾಗಿ ಇತರೆ ನೀರಿನ ಮೂಲಗಳನ್ನು ಬಳಕೆ ಮಾಡುವುದು ಅನಿವಾರ್ಯವಾಗಿದೆ ಎಂದು ರೈತರು ಹೇಳಿದ್ದಾರೆ.
ವರದಿಗಾರ
ಎ.ಚಿದಾನಂದ,ವಿಜಯನಗರ.

ಫ್ರೆಶ್ ನ್ಯೂಸ್

Latest Posts

Featured Videos