ಹೆಲ್ಮೆಟ್ ಧರಿಸದೆ ಇರುವುದೇ ಸವಾರರ ಸಾವಿಗೆ ಕಾರಣ

ಹೆಲ್ಮೆಟ್ ಧರಿಸದೆ ಇರುವುದೇ ಸವಾರರ ಸಾವಿಗೆ ಕಾರಣ

ಹೊಸಪೇಟೆ: ಜೀವ ಮತ್ತು ಜೀವನ ತುಂಬಾ ಅಮೂಲ್ಯವಾದದು. ನಿಮಗಲ್ಲದಿದ್ದರೂ ನಿಮ್ಮ ಕುಟುಂಬದವರಿಗಾಗಿ ಪ್ರತಿಯೊಬ್ಬ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಅದರೊಂದಿಗೆ ಮುಖಕ್ಕೆ ಮಾಸ್ಕ ಕಡ್ಡಾಯವಾಗಿರಲಿ ಎಂದು ಪಟ್ಪಣ ಪೋಲಿಸ್ ಠಾಣೆ ಪಿ.ಎಸ್.ಐ.ಎಂ.ಶಿವಕುಮಾರ ಹೇಳಿದರು.
ಅವರು ಗುರುವಾರ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಹೆಲ್ಮೆಟ್ ಧರಿಸುವ ಕುರಿತು ಬೈಕ್ ಜಾಗೃತಿಜಾಥ ನಡೆಸಿ ಮಾತನಾಡಿದರು. ದ್ವಿಚಕ್ರ ವಾಹನ ಸವಾರರ ಸಾವಿಗೆ ಬಹುತೇಕ ಕಾರಣ ಹೆಲ್ಮೆಟ್ ಧರಿಸದೆ ಇರುವುದು. ಕಡ್ಡಾಯವಾಗಿ ಹೆಲ್ಮೆಟ್ ಧರಿಸದೆ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದೆಂದರು.
ಪಟ್ಟಣದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವುದರಿಂದ ಸಾವಿರಾರು ವಾಹನಗಳ ಸಂಚಾರ ಇರುತ್ತದೆ, ಹೆದ್ದಾರಿಯಲ್ಲಿ ನಡೆದ ಬಹುತೇಕ ಅಪಘಾತ ಪ್ರಕರಣಗಳಲ್ಲಿ ಸಾವನ್ನಪ್ಪಿದವರು ಹೆಲ್ಮೆಟ್ ಧರಿಸದವರು. ಇದರಿಂದ ಸವಾರರ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಬೈಕ್ ಜಾಥಾ:
ಪಟ್ಟಣದ ಪೊಲೀಸ್ ಠಾಣೆಯಿಂದ ಆರಂಭಗೊಂಡ ಬೈಕ್ ಜಾಥ ಪಟ್ಟಣದ ತಾಂಡ, ಡಣಾಪುರ, ಹನುಮನಹಳ್ಳಿ, ಗಾಳೆಮ್ಮನಗುಡಿ ಮತ್ತು ಪಟ್ಟಣದ ಮುಖ್ಯರಸ್ತೆಗಳಲ್ಲಿ ಬೈಕ್ ಜಾಥ ನಡೆಸಿದರು. ನಂತರ ನಾಣಿಕೆರೆ ವೃತ್ತದಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ವಾಹನಸವಾರರಿಗೆ ಚಾಕೊಲೇಟ್ ಕೊಡುವ ಮೂಲಕ, ನಾಳೆಯಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಇಲ್ಲದಿದ್ದರೆ ೫೦೦ ರೂ. ದಂಡ ಪಾವತಿಸಬೇಕಾಗುತ್ತದೆ ಎಂದು ತಿಳುವಳಿಕೆ ನೀಡಿದರು.
ಈ ಸಂಧರ್ಭದಲ್ಲಿ ಎ.ಎಸ್.ಐ.ಗಳಾದ ದುರುಗಪ್ಪ, ರಾಮಕೃಷ್ಣ, ಪೇದೆಗಳಾದ ಠಾಕೂರ್ ನಾಯ್ಕ,ಕೊಟ್ರೇಶ್,ಸಿದ್ದೇಶ್, ಪ್ರವೀಣ್, ಕೊಟ್ರೇಶ್ ಅಂಗಡಿ, ರಾಜೇಂದ್ರ, ದೇವೇಂದ್ರ, ಶಿವರಾಜ್, ಸುಭಾನ್ ಮತ್ತು ಸಿಬ್ಬಂದಿಗಳಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos