ಕಮಲ ತೊರೆದು ಕೈ ಸೇರಿದ ಮಾಜಿ ಎಂಎಲ್ ಸಿ ತೇಜಸ್ವಿನಿ ಗೌಡ

ಕಮಲ ತೊರೆದು ಕೈ ಸೇರಿದ ಮಾಜಿ ಎಂಎಲ್ ಸಿ ತೇಜಸ್ವಿನಿ ಗೌಡ

ಬೆಂಗಳೂರು: ವಿಧಾನ ಪರಿಷತ್​ ಮಾಜಿ ಸದಸ್ಯೆ ತೇಜಸ್ವಿನಿ ಗೌಡ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಇಂದು ಕಾಂಗ್ರೆಸ್ ಸೇರ್ಪಡೆಯಾದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ನರಕಾಸುರ, ರಾವಣನೆಂದು ಬೈದು ಬಿಜೆಪಿ ಸೇರಿ ವಿಧಾನ ಪರಿಷತ್ ಸದಸ್ಯೆಯಾಗಿದ್ದ ತೇಜಸ್ವಿನಿ ಗೌಡ ಅವರು, ಈಗ ಬಿಜೆಪಿ ತೊರೆದು ನವದೆಹಲಿಯಲ್ಲಿ ಜೈರಾಮ್ ರಮೇಶ್ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಆಸಕ್ತಿಯನ್ನು ಪಕ್ಷದ ನಾಯಕರ ಮುಂದೆ ಇಟ್ಟಿದ್ದರು ಎನ್ನಲಾಗುತ್ತಿದೆ ಬಿಜೆಪಿಯಿಂದ ಲೋಕಸಭಾ ಟಿಕೆಟ್ ಸಿಗದ ಹಿನ್ನೆಲೆ ತೇಜಸ್ವಿನಿಗೌಡ ಅಸಮಾಧಾನಗೊಂಡಿದ್ದರು. ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇಂದು ಕಾಂಗ್ರೆಸ್ ಸೇರಿದ್ದು ಬಳಿಕ ಮಾತನಾಡಿದ ಅವರು, ಬಿಜೆಪಿಯಲ್ಲಿ ಸ್ಥಳೀಯ ಮತ್ತು ಪ್ರಾದೇಶಿಕ ನಾಯಕತ್ವವಿಲ್ಲ. ಕೇವಲ ಮೋದಿಜೀ ಮಾಂತ್ರಿಕ ಶಕ್ತಿಯ ಮೇಲೆ ಮಾತ್ರ ನಂಬಿಕೆ ಇಟ್ಟಿದೆ. ದೇಶಕ್ಕಿಂತ ಮೋದಿ ಮಾಂತ್ರಿಕ ಶಕ್ತಿ ದೊಡ್ಡದು ಅನ್ನೋ ಭ್ರಮೆಯಲ್ಲಿ ಬಿಜೆಪಿ ತೇಲ್ತಾ ಇದೆ ಎಂದು ತೇಜಸ್ವಿನಿ ಗೌಡ ಟೀಕೆ ಮಾಡಿದ್ದಾರೆ. ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ 23 ಕ್ಷೇತ್ರ ಗೆಲ್ಲುವ ಅವಕಾಶ ಕಾಂಗ್ರೆಸ್ ಗೆ ಇದೆ. ನಾನು 9 ವರ್ಷ ಕಾಂಗ್ರೆಸ್ ನಲ್ಲಿ ಇದ್ದೆ ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos