ಸ್ವದೇಶಿ ಮೇಳದ ಉದ್ಘಾಟನಾ ಸಮಾರಂಭ!

  • In State
  • December 15, 2023
  • 26 Views
ಸ್ವದೇಶಿ ಮೇಳದ ಉದ್ಘಾಟನಾ ಸಮಾರಂಭ!

ತುಮಕೂರು : ಈ ದೇಶದ ಕೈಗಾರಿಕಾ ಅಭಿವೃದ್ಧಿಯ ಭವಿಷ್ಯವು ಸಣ್ಣ ಪ್ರಮಾಣದ ಕೈಗಾರಿಕೆಗಳ ಸಾಮರ್ಥ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿರುತ್ತದೆ. ಸಣ್ಣ ಪ್ರಮಾಣದ ಕೈಗಾರಿಕೆಗಳು ಮಾನವ ಸಂಪನ್ಮೂಲ ಮತ್ತು ಉತ್ಪಾದಕತೆಯ ಉದ್ಯೋಗದಲ್ಲಿ ಗಣನೀಯ ಪಾತ್ರವನ್ನು ವಹಿಸುತ್ತವೆ, ಹೆಚ್ಚಿದ ಹೂಡಿಕೆಗಳು ಮತ್ತು ಲಾಭಗಳ ಮೂಲಕ ದೇಶಾದ್ಯಂತ ಆದಾಯದ ವಿತರಣೆ. ವಾಸ್ತವವಾಗಿ, ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ‘ರಾಷ್ಟ್ರ ಅಭಿವೃದ್ಧಿಶೀಲ ಮೋಟಾರ್’ ಎಂದು ಕರೆಯಲಾಗುತ್ತದೆ.

ಕೈಗಾರಿಕೆಗಳೆಂದರೆ ಕೇವಲ ಅದಾನಿ, ಅಂಬಾನಿ, ಟಾಟಾ, ಬಿರ್ಲಾ ಅವರಲ್ಲ. ನೇಮು, ಫೇಮು ಎರಡು ಇಲ್ಲದೆ ಖಾಸಗಿಯಾಗಿ ಶೇ.20 ರಷ್ಟು ದುಡಿಯುವ ಕೈಗಳಿಗೆ ಕೆಲಸ ನೀಡಿರುವ ದೇಶದ ಗುಡಿ ಕೈಗಾರಿಕೆಗಳು ಎಂದು ನಿವೃತ್ತ ಉಪನ್ಯಾಸಕ ಪ್ರೊ.ಬಿ.ಎಂ. ಕೃಷ್ಣಮೂರ್ತಿ ತಿಳಿಸಿದ್ದಾರೆ.

ಸ್ವದೇಶಿ ಜಾಗರಣ ಮಂಚ ನಗರದ ಗಾಜಿನಮನೆಯಲ್ಲಿ ಆಯೋಜಿಸಿರುವ ಸ್ವದೇಶಿ ಮೇಳದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಬ್ರಿಟಿಷರು ನಮಗೆ ರಾಜಕೀಯ ಸ್ವಾತಂತ್ರ ಕೊಟ್ಟರೆ ಹೊರತು ಅರ್ಥಿಕ ಸ್ವಾತಂತ್ರವನ್ನಲ್ಲ. ಭಾರತೀಯರಿಗೆ ಅರ್ಥಿಕ ಸ್ವಾತಂತ್ರ ಸಿಗಬೇಕೆಂದರೆ ನಮ್ಮ ಅರ್ಥಿಕತೆಗೆ ಶೇ.45 ರಷ್ಟು ಜಿಡಿಪಿ ನೀಡುತ್ತಿರುವ ಸಣ್ಣ ಸಣ್ಣ ಉದ್ಯಮಗಳು ಸ್ವಾವಲಂಬಿಯಾದಾಗ ಮಾತ್ರ ಸಾಧ್ಯ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಸ್ವದೇಶಿ ಮೇಳದ ಸಂಯೋಜಕಿ ಮಮತಾ ಮಾತನಾಡಿ, ಸ್ವದೇಶಿ ಉತ್ಪಾದಕರಿಗೆ ಮಾರುಕಟ್ಟೆ ಹಾಗೆಯೇ ಗ್ರಾಹಕರಿಗೆ ಸ್ವದೇಶಿ ಉತ್ಪನ್ನಗಳ ಪರಿಚಯ ಮಾಡಿಕೊಡುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ಮಕ್ಕಳು ಮಹಿಳೆಯರಿಗೆ ಸ್ವದೇಶಿ ಉತ್ಪನ್ನಗಳ ಪರಿಚಯದ ಜೊತೆಗೆ, ವಿವಿಧ ತರಬೇತಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಮ್ಮ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಇಂದಿನಿಂದ ಡಿ. 17ರ ವರೆಗೆ ನಡೆಯುವ ಈ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸ್ವದೇಶಿ ಮೇಳದ ಆಯೋಜಕ ಧನುಷ್, ಸಂಘಟಕ ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos