ಇಂದಿರಾ ಕ್ಯಾಂಟಿನ್ ಊಟ್ಟದ ಉಪಹಾರ ಪ್ರಾರಂಬಿಸಿ

ಇಂದಿರಾ ಕ್ಯಾಂಟಿನ್ ಊಟ್ಟದ ಉಪಹಾರ ಪ್ರಾರಂಬಿಸಿ

ಚಿಕ್ಕೋಡಿ, ಜ. 23: ಹುಕ್ಕೇರಿ ತಾಲೂಕಿನಲ್ಲಿ ಕಳೆದ ವರ್ಷಗಳಿಂದ ಇಂದಿರಾ ಕ್ಯಾಂಟಿನ್ ಕಟ್ಟಡ ಸಂಪೂರ್ಣವಾಗಿದ್ದು, ಒಂದು ವರ್ಷದಿಂದ ಇಂದಿರಾ ಕ್ಯಾಂಟೀನ್ ಇನ್ನೂ ಕೂಡ ಪ್ರಾರಂಭವಾಗದ ಕಾರಣ ಸ್ಥಳಿಯರ ಅಕ್ರೋಶ ಗೊಂಡಿದ್ದಾರೆ. ಸುಮಾರು ವ್ಯಚದಲ್ಲಿ ಹಣ ಪೋಲೊ ಮಾಡಿ ಹುಕ್ಕೇರಿ ‌ಹಳೆಯ ತಹಶಿಲ್ದಾರ ಕಛೇರಿಯ ಆವರಣದಲ್ಲಿ ನಿರ್ಮಿಸಿದ್ದು, ಎಲ್ಲಾ ರೀತಿಯ ಸೌಕರ್ಯಗಳು ಇದ್ದು ಸಹ ಉಪಹಾರ ಕ್ಯಾಂಟಿನ್ ಪ್ರಾರಂಬಿಸುತ್ತಿಲ್ಲ.

ಇಂದಿರಾ ಕ್ಯಾಂಟಿನ್ ಸುತ್ತಮುತ್ತಲಿನಲ್ಲಿ ಕಸ ಖಡಿ ಸಂಗ್ರಹವಾಗಿದ್ದು, ಇಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವ ಸ್ಥಾನವಾಗಿದೆ ಮಾರ್ಪಟ್ಟಿದ್ದು, ಇದರಿಂದ ತೀರಾ ಗಭೇದ್ದು ವಾಸನೆ ಬರುತ್ತಿದೆ. ಇತ್ತಕಡೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.

ಏನೆ ಆಗಲ್ಲಿ ಇಂತಹ ಊಟ್ಟ ಉಪಹಾರ ಗ್ರಹಗಳನ್ನು ನಿರ್ಮಾಣವಾದ ಕೂಡಲೇ ಟೆಂಡರ ಕರೆದು ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕೆಂದು‌ ಸ್ಥಳಿಯ ಪುರಸಭೇ ಸದಸ್ಯರುಗಳು‌ ಹಾಗೂ ಸಾರ್ವಜನಿಕರು ಸಂಭಂದಿಸಿದ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿಮಾಡಿಕೊಂಡರು.

ಅತಿ ಶೀಘ್ರದಲ್ಲಿ ಇಂದಿರಾ ಕ್ಯಾಂಟಿನ್ ಪ್ರಾರಂಬಿಸಿ ಇಲ್ಲಿರುವ ಕೋರ್ಟ್ ನಾಯವಾಧಿಗಳಿಗೆ ಸರ್ಕಾರಿ ಅಧಿಕಾರಿಗಳಿಗೆ ಸಿಬ್ಬಂದಿ ವರ್ಗದವರಿಗೆ ಹಾಗೂ ಸಾರ್ವಜನಿಕರಿಗೆ ಅನೂಕೂಲಕ್ಕಾಗಿ ಸ್ಥಳಿಯರು‌ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅಣ್ಣಾಗೌಡಾ ಕಲಗೌಡಾ ಪಾಟೀಲ, ಪಿ ಪಿಎಸ್ ಮಾಜಿ ಅದ್ಯಕ್ಷರು, ಚಂದು ಮುತ್ತಾನಾಳೆ, ಪುರ ಸಭೇ ಸದಸ್ಯರು ಮಾಹಾಂತೆಶ ತಳವಾರ, ಸಾಗರ ಭಂಡಾರಿ,  ಸದಾ ಕರೆಪ್ಪಗೋಳ ಪುರಸಭೇ ಸದಸ್ಯರು, ಇನ್ನಿತರರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos