ಹುಬ್ಬಳ್ಳಿ-ದೆಹಲಿ ನಡುವೆ ವಾರದಲ್ಲಿ 5 ಬಾರಿ ಸ್ಟಾರ್​ಏರ್ ಸಂಚಾರ

ಹುಬ್ಬಳ್ಳಿ-ದೆಹಲಿ ನಡುವೆ ವಾರದಲ್ಲಿ 5 ಬಾರಿ ಸ್ಟಾರ್​ಏರ್ ಸಂಚಾರ

ಹುಬ್ಬಳ್ಳಿ, ಜ. 31: ವಾರದಲ್ಲಿ 3 ಬಾರಿ ಸಂಚರಿಸುತ್ತಿರುವ ಸ್ಟಾರ್​ಏರ್ ಸಂಸ್ಥೆಯ ಹುಬ್ಬಳ್ಳಿ-ಹಿಂಡಾನ್(ದೆಹಲಿ)-ಹುಬ್ಬಳ್ಳಿ ವಿಮಾನ ಫೆಬ್ರವರಿ 15ರಿಂದ ವಾರದಲ್ಲಿ 5 ಬಾರಿ ಸಂಚರಿಸಲಿದೆ. ಅದೇ ರೀತಿ, ಬೆಂಗಳೂರು, ಕಲಬುರಗಿ , ಬೆಂಗಳೂರು ವಿಮಾನ ವಾರದಲ್ಲಿ 6 ಬಾರಿ ಹಾರಾಡಲಿವೆ.

ಸಂಸ್ಥೆಯು ಪ್ರಕಟಿಸಿರುವ ಪರಿಷ್ಕೃತ ಅನುಸೂಚಿ ಪ್ರಕಾರ ಮಂಗಳವಾರದಂದು ಬೆ. 10 ಗಂಟೆಗೆ ಹುಬ್ಬಳ್ಳಿ ಬಿಟ್ಟು ಮ. 12.40ಕ್ಕೆ ಹಿಂಡಾನ್ ತಲುಪಲಿದೆ. ಬಳಿಕ ಮ. 1.05ಕ್ಕೆ ಹಿಂಡಾನ್​ನಿಂದ ಹೊರಟು 3.45ಕ್ಕೆ ಹುಬ್ಬಳ್ಳಿ ಬಂದು ಸೇರಲಿದೆ. ಬುಧವಾರ ಮಧ್ಯಾಹ್ನ 1.05ಕ್ಕೆ ಹುಬ್ಬಳ್ಳಿಯಿಂದ ಹೊರಡುವ ವಿಮಾನ 3.45ಕ್ಕೆ ಹಿಂಡಾನ್ ತಲುಪಲಿದೆ. ಅದೇ ದಿನ ಸಂ 4.10ಕ್ಕೆ ಹಿಂಡಾನ್ ಬಿಟ್ಟು ಸಂ. 6.50ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ. ಗುರುವಾರ ಹಾಗೂ ಶನಿವಾರ ಮ. 2.35ಕ್ಕೆ ಹುಬ್ಬಯಿಂದ ಹೊರಟು ಸಂಜೆ 5.10ಕ್ಕೆ ಹಿಂಡಾನ್ ತಲುಪಲಿದೆ. ಸಂ. 5.30ಕ್ಕೆ ಹಿಂಡಾನ್ ಬಿಟ್ಟು ರಾತ್ರಿ 8.15ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ. ಭಾನುವಾರ ಮ. 12.50ಕ್ಕೆ ಹುಬ್ಬಳ್ಳಿಯಿಂದ ಹೊರಟು 3.30ಕ್ಕೆ ಹಿಂಡಾನ್ ತಲುಪಲಿದೆ. ಅಲ್ಲಿಂದ ಮರಳಿ 3.55ಕ್ಕೆ ಹೊರಟು ಸಂ. 6.35ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ.

ಬೆಂಗಳೂರು-ಕಲಬುರಗಿ: ಸೋಮವಾರ ಬೆ. 10.40ಕ್ಕೆ ಬೆಂಗಳೂರಿನಿಂದ ಹೊರಟು ಮ. 12.50ಕ್ಕೆ ಬೆಂಗಳೂರು ತಲುಪಲಿದೆ. ಮ. 1.10 ಗಂಟೆಗೆ ಕಲಬುರಗಿ ಬಿಟ್ಟು ಮ. 2.20ಕ್ಕೆ ಬೆಂಗಳೂರು ತಲುಪಲಿದೆ. ಬುಧವಾರ ಬೆ. 8.40ಕ್ಕೆ ಬೆಂಗಳೂರು ಬಿಟ್ಟು 9.40ಕ್ಕೆ ಕಲಬುರಗಿ ತಲುಪಲಿದೆ. ಪುನಃ ಬೆ. 10 ಗಂಟೆಗೆ ಕಲಬುರಗಿಯಿಂದ ಹೊರಟು 11 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ. ಗುರುವಾರ, ಶುಕ್ರವಾರ ಹಾಗೂ ಶನಿವಾರದಂದು ಬೆ. 10.30ಕ್ಕೆ ಬೆಂಗಳೂರಿನಿಂದ ಬಿಟ್ಟು 11.30ಕ್ಕೆ ಕಲಬುರಗಿ ತಲುಪಲಿದೆ. 11.50ಕ್ಕೆ ಕಲಬುರಗಿಯಿಂದ ಹೊರಟು ಮ. 12.50ಕ್ಕೆ ಬೆಂಗಳೂರು ತಲುಪಲಿದೆ. ಭಾನುವಾರ ಮ. 12.30ಕ್ಕೆ ಬೆಂಗಳೂರಿನಿಂದ ಹೊರಟು ಮ. 1.35ಕ್ಕೆ ಕಲಬುರಗಿಗೆ ಆಗಮಿಸಲಿದೆ. ಮ. 1.55ಕ್ಕೆ ಕಲಬುರಗಿ ಬಿಟ್ಟು 2.55ಕ್ಕೆ ಬೆಂಗಳೂರಿಗೆ ಬಂದು ಸೇರಲಿದೆ.

ಸ್ಟಾರ್ ಏರ್ ಸಂಸ್ಥೆ ಅಕ್ಟೋಬರ್ 2019ರಲ್ಲಿ ಹುಬ್ಬಳ್ಳಿ-ಹಿಂಡಾನ್-ಹುಬ್ಬಳ್ಳಿ ಹಾಗೂ ನವೆಂಬರ್​ನಲ್ಲಿ ಕಲಬುರಗಿ-ಬೆಂಗಳೂರು-ಕಲಬುರಗಿ ನಡುವೆ ವಿಮಾನ ಸಂಚಾರ ಆರಂಭಿಸಿತ್ತು.

ಫ್ರೆಶ್ ನ್ಯೂಸ್

Latest Posts

Featured Videos