ಸಿನಿಮಾ ನಿರ್ದೇಶಕಿ ಶೃತಿ ನಾಯ್ಡು!

ಸಿನಿಮಾ ನಿರ್ದೇಶಕಿ ಶೃತಿ ನಾಯ್ಡು!

ಬೆಂಗಳೂರು, ಮೇ .22, ನ್ಯೂಸ್ ಎಕ್ಸ್ ಪ್ರೆಸ್: ಇತ್ತೀಚಿಗೆ ಸ್ಯಾಂಡಲ್​ವುಡ್​ ಅಂಗಳದಲ್ಲಿ ಮಹಿಳಾ ಡೈರೆಕ್ಟರ್​ಗಳ ಸಂಖ್ಯೆ ತುಸು ಜಾಸ್ತಿಯಾಗ್ತಿದೆ.  ಪ್ರೇಮಾ ಕಾರಂತ್, ವಿಜಯ್ ಲಕ್ಷ್ಮೀ ಸಿಂಗ್, ಕವಿತಾ ಲಂಕೇಶ್ ಸೇರಿದಂತೆ ಹಲವು ಪ್ರತಿಭಾವಂತರು ವಿಭಿನ್ನ ಚಿತ್ರಗಳ ಮೂಲಕ ಕನ್ನಡಿಗರ ಜನ ಮನದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ರು. ಅದರ ಸಾಲಿಗೆ ಇದೀಗ ಶ್ರುತಿ ನಾಯ್ಡು ಕೂಡ ಒಬ್ಬರು.

ಕಿರುತೆರೆ ರಂಗದಲ್ಲಿ ಪುನರ್ ವಿವಾಹ’, ‘ಮಹಾದೇವಿ’. ‘ಬ್ರಹ್ಮಗಂಟು’ ಸೇರಿದಂತೆ ಹಲವು ವಿಶಿಷ್ಟವಾದ ಧಾರಾವಾಹಿಗಳನ್ನು ನಿರ್ದೇಶನ  ಮೂಲಕ ಬಣ್ಣದ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ ಶ್ರುತಿ ನಾಯ್ದು. ಹಲವು ಸಿರೀಯಲ್​ಗಳಿಗೂ ಬಂಡವಾಳ ಹೂಡಿ ನಿರ್ಮಾಪಕಿಯೂ ಎನಿಸಿಕೊಂಡಿದ್ರು. ಇತ್ತೀಚಿಗೆ ನವರಸ ನಾಯಕ ಜಗ್ಗೇಶ್ ಮುಖ್ಯಭೂಮಿಕೆಯಲ್ಲಿ ನಟಿಸಿರೋ ‘ಪ್ರೀಮಿಯರ್ ಪದ್ಮಿನಿ’ ಸಿನಿಮಾಗೆ ಬಂಡವಾಳ ಹಾಕುವ ಮೂಲಕ ಹಿರಿತೆರೆ ನಿರ್ಮಾಪಕಿಯೂ ಆದ್ರು. ಚಿತ್ರ ಇದೀಗ ಯಶಸ್ಸಿನ ಓಟದಲ್ಲಿದೆ ಅದರ ನಡುವೆಯೇ ಶ್ರುತಿ ಹೊಸ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos