ಸಿಲಿಕಾನ್‌ ಸಿಟಿ ಕೂಲ್‌ ಕೂಲ್!

ಸಿಲಿಕಾನ್‌ ಸಿಟಿ ಕೂಲ್‌ ಕೂಲ್!

ಬೆಂಗಳೂರು:ತಮಿಳುನಾಡು  ಸೈಕ್ಲೋನ್ ಎಫೆಕ್ಟ್ ನಿಂದಾಗಿ ಬೆಂಗಳೂರಿನಲ್ಲಿ ಇನ್ನು ಎರಡು ದಿನ ಕೂಲ್ ಕೂಲ್ ಬೆಂಗಳೂರಿನ ಸುತ್ತಮುತ್ತ ಮಳೆಯ ವಾತಾವರಣ ಸೃಷ್ಟಿಯಾಗಿದೆ ಹವಮಾನ ಇಲಾಖೆ ಎರಡು ದಿನಗಳ ಕಾಲ ಮಳೆ ಆಗುತ್ತದೆ ಎಂದು ವರದಿ ಮಾಡಿದ್ದು. ಆದರೆ ಮಳೆಯಾಗುವ ಸಾಧ್ಯತೆ ಕಡಿಮೆಯಾಗಿದೆ ಆದರೆ ವಾತಾವರಣ ತುಂಬಾ ಕೂಲ್ ರೀತಿ ಆಗಿದೆ.

ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಚಳಿ ಹೆಚ್ಚಾಗಿದೆ. ಚಳಿಯ ವಾತಾವರಣ ಇನ್ನು ಮೂರು ದಿನಗಳ ಕಾಲ ಇರಲಿದ್ದು, ಚಳಿಯ ಜೊತಗೆ ನೆಲಗಾಳಿಯು ಹೆಚ್ಚಾಗಿದೆ.‌ ಸಾಮಾನ್ಯವಾಗಿ ಚಳಿಗಾಲ ಡಿಸೆಂಬರ್ ತಿಂಗಳ ಮೊದಲವಾರದಲ್ಲಿ ಆರಂಭವಾಗಲಿದ್ದು, ಮೊರನೇ ವಾರನೇ ಚಳಿಯು ಪ್ರಮಾಣ ಹೆಚ್ಚಾಗಿರಲಿದೆ.‌ ಇನ್ನು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ ಕಡಿಮೆ ಚಳಿ ಇರಲಿದ್ದು ಡಿಸೆಂಬರ್ ಅಂತ್ಯ ಮತ್ತು ಜನವರಿಯಲ್ಲಿ ಮಾತ್ರ ಚಳಿ ಹೆಚ್ಚಾಗಿ ಕಂಡುಬರಲಿದೆ ಎಂದು ಹವಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.

ಸಾಮಾನ್ಯವಾಗಿ ರಾಜ್ಯದ ಕೆಲವೆಡೆ ಮೋಡ ಕವಿದ ವಾತಾವರಣವಿರಲಿದೆ ಹಾಗೂ ಹಗುರ ಮಳೆಯಾಗುವ ಬಹಳಷ್ಟು ಸಾಧ್ಯತೆಗಳಿವೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಕಂಡು ಬರಲಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos