ಶಿವಣ್ಣ ಸೀನಿಯರ್, ನಾನು ಅವರ ಹಿಂದೆ ನಿಂತಿರ್ತಿನಿ: ದಾಸ

ಶಿವಣ್ಣ ಸೀನಿಯರ್, ನಾನು ಅವರ ಹಿಂದೆ ನಿಂತಿರ್ತಿನಿ: ದಾಸ

ಬೆಂಗಳೂರು, ನ. 22: ನಗರದಲ್ಲಿರು ಕಂಠೀರವ ಸ್ಟುಡಿಯೋದಲ್ಲಿ ಇಂದು ಡಾ.ರಾಜ್ಕುಮಾರ್ ಸಂಬಂಧಿ ಧ್ರುವನ್ ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖಾಮುಖಿಯಾದರು.

ಹೊಸ ಚಿತ್ರಕ್ಕೆ ಶಿವಣ್ಣ ಕ್ಲಾಪ್ ಮಾಡಿದರು, ದರ್ಶನ್ ಕ್ಯಾಮರಾ ಸ್ವಿಚ್ ಆನ್ ಮಾಡುವ ಮೂಲಕ ಚಾಲನೆ ನೀಡಿದರು.

ಶಿವಣ್ಣ ಮತ್ತು ದರ್ಶನ್ ಕಾಂಬಿನೇಷನ್ನಲ್ಲಿ ಸಿನಿಮಾ ಯಾವಾಗ ಅನ್ನೊ ಪ್ರಶ್ನೆಗೆ ಉತ್ತರಿಸಿದ ದರ್ಶನ್ ನಮ್ಮಿಬ್ಬರನ್ನ ಹ್ಯಾಂಡಲ್ ಮಾಡೋ ಡೈರೆಕ್ಟರ್ ಯಾರು ಇಲ್ಲ, ಒಂದು ವೇಳೆ ಇದ್ದು ಮುಂದೆ ಬಂದರೇ ಖಂಡಿತ ಮಾಡ್ತಿವಿ, ಒಳ್ಳೆಯ ಸಬ್ಜೆಕ್ಟ್ ಬಂದರೆ ಸಿನಿಮಾ ಮಾಡ್ತಿವಿ ಎಂದರು.

ಒಟ್ಟಿಗೆ ಸಿನಿಮಾ ಮಾಡಿದಾಗ ನಿಮ್ಮಿಬ್ಬರಲ್ಲಿ ಲಾಂಗ್ ಯಾರು ಹೀಡಿತೀರಾ ಎಂಬ ಪ್ರಶ್ನೆಗೆ ಲಾಂಗ್ ಹೀಡಿಯೋದ್ರಲ್ಲಿ ಶಿವಣ್ಣ ಸೀನಿಯರ್. ಅವರು ಲಾಂಗ್ ಹಿಡಿದರೆ, ನಾನು ಹಿಂದೆ ಇರ್ತಿನಿ ಎಂದು ದರ್ಶನ್ ಪ್ರತಿಕ್ರಿಯಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos