ಶಿವ ಸೇನೆಯ ಬುರ್ಖಾ ನಿಷೇಧ ಬೇಡಿಕೆಗೆ ಉವೈಸಿ ತಿರುಗೇಟು

ಶಿವ ಸೇನೆಯ ಬುರ್ಖಾ ನಿಷೇಧ ಬೇಡಿಕೆಗೆ ಉವೈಸಿ ತಿರುಗೇಟು

ನವದೆಹಲಿ , ಮೇ. 2, ನ್ಯೂಸ್ ಎಕ್ಸ್ ಪ್ರೆಸ್: ಶ್ರೀಲಂಕಾದಲ್ಲಿ ಉಗ್ರ ದಾಳಿಯ ನಂತರ ಬುರ್ಖಾ ನಿಷೇಧಗೊಳಿಸಿದ ಮಾದರಿಯಲ್ಲಿಯೇ ಭಾರತದಲ್ಲೂ ಬುರ್ಖಾ ಹಾಗೂ ಮುಖ ಮುಚ್ಚುವಂತೆ ಬಟ್ಟೆ ಧರಿಸುವುದಕ್ಕೆ ನಿಷೇಧ ಹೇರಬೇಕೆಂದು ಶಿವ ಸೇನೆ ಕೇಂದ್ರ ಸರಕಾರಕ್ಕೆ ಆಗ್ರಹಿಸಿರುವುದನ್ನು ಕಟುವಾಗಿ ಟೀಕಿಸಿರುವ ಎಐಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾಸುದ್ದೀನ್ ಓವೈಸಿ, “ಉಗ್ರವಾದದ ವಿರುದ್ಧದ ಹೋರಾಟ ವಸ್ತ್ರಗಳ ಬಗ್ಗೆಯಲ್ಲ, ಬದಲಾಗಿ ಮನಃಸ್ಥಿತಿಯ ಬಗ್ಗೆಯಾಗಿದೆ,” ಎಂದುಹೇಳಿದ್ದಾರೆ.

ಬುರ್ಖಾ ನಿಷೇಧಕ್ಕೆ ಆಗ್ರಹಿಸುವ ಮೂಲಕ ಶಿವಸೇನೆ, ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದೆ; ಚುನಾವಣಾ ಆಯೋಗ ಇದನ್ನು ಗಮನಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಓವೈಸಿ ಹೇಳಿದ್ದಾರೆ.

‘ಬುರ್ಖಾ ಧರಿಸುವುದು ಐಚ್ಛಿಕವಾಗಿದೆ. ಬುರ್ಖಾ ಧರಿಸುವುದರಿಂದ ರಾಷ್ಟ್ರ ಭದ್ರತೆಗೆ ಅಪಾಯ ಇದೆ ಎಂದಾದರೆ ಸಾಧ್ವಿಗಳು ತೊಡುವ ಉಡುಪಿನಿಂದಲೂ ಅದೇ ರೀತಿಯ ಪರಿಣಾಮವಾಗಲು ಸಾಧ್ಯವಿದೆ ಎಂದು ಓವೈಸಿ ಹೇಳಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos