ಹೋರಾಟಗಾರ, ಹಿರಿಯ ಸಾಹಿತಿ ಕೊ. ಚನ್ನಬಸಪ್ಪ ನಿಧನ

ಹೋರಾಟಗಾರ, ಹಿರಿಯ ಸಾಹಿತಿ ಕೊ. ಚನ್ನಬಸಪ್ಪ ನಿಧನ

ಬೆಂಗಳೂರು: ಸ್ವಾತಂತ್ರ ಹೋರಾಟಗಾರ ಹಾಗೂ ಹಿರಿಯ ಸಾಹಿತಿ,
ನಾಡೋಜ ಕೊ. ಚನ್ನಬಸಪ್ಪ (96) ಇಂದು
ಬೆಳಗ್ಗೆ ನಿಧನರಾಗಿದ್ದಾರೆ.

ಕೊ.ಚೆನ್ನಬಸಪ್ಪರಿಗೆ
96 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ
ಅವರು,ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಬಳ್ಳಾರಿ
ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಮಡಗು ಸಮೀಪದ
ಆಲೂರಿನಲ್ಲಿ ಜನಿಸಿದ ಚೆನ್ನಬಸಪ್ಪ ವಿದ್ಯಾರ್ಥಿಯಾಗಿದ್ದಾಗಲೇ
ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗಿಯಾಗಿ
ಸೆರೆವಾಸ ಅನುಭವಿಸಿದ್ದರು.

ಕರ್ನಾಟಕ
ಏಕೀಕರಣದ ಹೋರಾಟದಲ್ಲೂ ತೊಡಗಿಸಿಕೊಂಡಿದ್ದರು. ನಿಷ್ಠುರವಾದಿಯಾಗಿದ್ದ ಅವರು ವೈಜ್ಞಾನಿಕ ಲೇಖಕರಾಗಿದ್ದರು.
ವಿಜಯಪುರದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ
ಇವರು ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದ್ದರು. ನಾಡೋಜ
ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಖಜಾನೆ,
ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ
ಸಮೀಕ್ಷೆ, ರಕ್ತತರ್ಪಣ, ಹಿಂದಿರುಗಿ ಬರಲಿಲ್ಲ, ನ್ಯಾಯಾಲಯದ ಸತ್ಯಕಥೆಗಳು, ಪ್ರಾಣಪಕ್ಷಿ, ಹೃದಯ ನೈವೇದ್ಯ ಸೇರಿದಂತೆ ಮುಂತಾದ ಹಲವು ಕೃತಿಗಳನ್ನು
ಅವರು ರಚಿಸಿದ್ದಾರೆ.

ಚರಿತ್ರೆ
ಮತ್ತು ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ
ಕೂಡ ಪಡೆದರು. ಕತೆ, ಕವನ,
ವಿಮರ್ಶೆ ಸೇರಿದಂತೆ ಕನ್ನಡದ ನಾನಾ ಸಾಹಿತ್ಯ
ಪ್ರಕಾರಗಳಲ್ಲಿತಮ್ಮನ್ನು ತೊಡಗಿಸಿಕೊಂಡಿದ್ದ ಕೊಚೆ ಅವರು ಕುವೆಂಪು
ಸಾಹಿತ್ಯದ ಆಳವಾದ ಅಧ್ಯಯನ ಮಾಡಿದ್ದವರು.

ಕೊ.ಚೆನ್ನಬಸಪ್ಪನವರ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ,
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್,
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಸಚಿವ ಕೃಷ್ಣಭೈರೇಗೌಡ ಸೇರಿದಂತೆ
ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos